ಆದ್ಯೋತ್ ನ್ಯೂಸ್ ಡೆಸ್ಕ್: ಮಾರ್ಚ್27 ರಂದು ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಕೊವಿಡ್19 ಸೊಂಕಿತನೆಂದು ದಾಖಲಾಗಿದ್ದ ಸುಮಾರು 28 ವರ್ಷದ ಯುವಕ ಮಾರ್ಚ್29 ರಂದು ರಾತ್ರಿ ಆಸ್ಪತ್ರೆಯಿಂದ ಪರಾರಿಯಾಗಿದ್ದ. ಮಾರ್ಚ್30 ಸೋಮವಾರ ಯುವಕನನ್ನು ಪತ್ತೆ ಹಚ್ಚಿದ ಭಟ್ಕಳ ಪೊಲೀಸರು ಆರೋಗ್ಯಾಧಿಕಾರಿಗಳ ಸಹಕಾರದೊಂದಿಗೆ ಆತನ ಮನವೊಲಿಸಿ ಪುನಃ ಆಸ್ಪತ್ರೆಗೆ ಸೇರುವಂತೆ ಮಾಡುವುದರ ಮೂಲಕ ಆತಂಕಗೊಂಡಿದ್ದ ಜಿಲ್ಲೆಯ ಜನತೆ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.
ಜ್ವರ ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದ ಈತನನ್ನು ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈತನಿಗೆ ಕೊರೊನಾ ಲಕ್ಷಣ ಕಂಡುಬಂದಿರಲಿಲ್ಲ. ವಿದೇಶದಿಂದ ಬಂದವರ ಸಂಪರ್ಕವೂ ಇರಲಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗಿತ್ತು. ಮಾರ್ಚ್29 ರಂದು ಬೆಳಿಗ್ಗೆಯಿಂದ ಮಾಸ್ಕ ಧರಿಸಿ ಓಡಾಡಿಕೊಂಡಿದ್ದ ಯುವತಿಯೊಬ್ಬಳು ಊಟ ಕೊಡುವ ನೆಪದಲ್ಲಿ ವಾಡ್೯ ಪ್ರವೇಶಿಸಿದ್ದಳು. ಇವಳ ಜೊತೆ ಪರಾರಿಯಾಗಿದ್ದ ಯುವಕ ಮನೆ ಸೇರಿದ್ದ.