ಆದ್ಯೋತ್ ಸುದ್ದಿನಿಧಿ:
ಆರ್.ಎಸ್.ಪಿ.ಕ್ರಿಯೇಟಿವ್ ಮೂವ್ಹಿ ಕ್ರಿಯೇಟರ್ ಬೆಂಗಳೂರ ನಿರ್ಮಿಸಿರುವ ಸಾಮಾಜಿಕ ಕನ್ನಡ ಚಲನಚಿತ್ರ ಬಿಳಿಮಚ್ಚೆಗೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ದೊರೆತಿದೆ. ಬೀದರ್ ಜಿಲ್ಲೆಯ ಹುಮನಾಬಾದ,ಚಿಟಗುಪ್ಪ,ಮದರಗಾಂವ್,ಹಿಪ್ಪರಗಿ ಮುಂತಾದ
ವಿವಿಧ ಹಳ್ಳಿಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಾಮಾಜಿಕ ಸಮಸ್ಯೆಯ ಕಥಾವಸ್ತು ಚಿತ್ರದಲ್ಲಿದೆ. ವಿಜ್ಞಾನ ಸಾಕಷ್ಟು ಮುಂದುವರಿದಿದ್ದು ಬಿಳಿಮಚ್ಚೆ ಅಂಟುರೋಗವಲ್ಲ. ಯಾವ ದೇವರ ಶಾಪವೂ ಅಲ್ಲ.ಅದು ಚರ್ಮದಲ್ಲಿರುವ ವರ್ಣದ್ರವ್ಯ ಕೋಶಗಳ ನಾಶದಿಂದ ಕಾಣಿಸಿಕೊಳ್ಳುತ್ತದೆ. ಪೂರ್ವಜರಿಂದ ಬಳುವಳಿಯಾಗಿ ಕೆಲವರಿಗೆ ಬರುತ್ತದೆ. ಪ್ರಪಂಚದಲ್ಲಿ ಬಹಳಷ್ಟು ಜನಸಾಮಾನ್ಯವಾದ ಈ ಚರ್ಮರೋಗದಿಂದ ಬಳಲುತ್ತಿದ್ದಾರೆ ಎಂದು ತಿಳಿದಿದ್ದರೂ ಸಮಾಜದಲ್ಲಿ ಬಿಳಿಮಚ್ಚೆ ಇರುವವರನ್ನು ನೋಡುವ ದೃಷ್ಟಿಕೋನಇವತ್ತಿಗೂ ಬದಲಾಗಿಲ್ಲ.
ಅದರಲ್ಲೂ ಹೆಣ್ಣುಮಗುವಿನ ಆದರೆ ಆ ಮಗುವಿಗೆ ಮಾನಸಿಕವಾಗಿ ಎಷ್ಟೊಂದು ಪರಿಣಾಮ ಬೀರುತ್ತದೆ, ಮತ್ತು ಅವರ ಮನೆಯ ಮೇಲೆ ತಂದೆ-ತಾಯಿಯ ಮೇಲೆ ಯಾವ ರೀತಿಯ ಪರಿಣಾಮವಾಗಿ ಅವಳ ಜೀವನ ಹೇಗೆ ,ಏನಾಗುತ್ತದೆ ಎನ್ನುವುದೇ ಕಥಾ ಹಂದರ.
ಸಂಪೂರ್ಣ ಹಳ್ಳಿಯಲ್ಲಿಯ ಮಾತನಾಡುವ ಭಾಷೆ,ಬಳಸುವ ಶಬ್ದಗಳನ್ನೇ ಚಿತ್ರದಲ್ಲಿ ಸಹಜವಾಗಿ ಬಳಸಲಾಗಿದೆ. ಇದೀಗ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಯು/ಎ’ ಸರ್ಟಿಫಿಕೇಟ್ ನೀಡಿದೆ.
ಚಿತ್ರವನ್ನು ಚಿತ್ರ ಮಂದಿರಗಳಲ್ಲಿ ತೆರೆಕಾಣಿಸಲು ಸಿದ್ಧತೆ ನಡೆಸುತ್ತಿರುವೆ ಎಂದು ಈಗಾಗಲೇ ಬರಗಾಲ ಚಿತ್ರ ನಿರ್ಮಿಸಿ ,ನಿರ್ದೇಶಿಸಿ ಸಾಮಾಜಿಕ ಕಳಕಳಿಯ ನಿರ್ದೇಶಕರೆಂದು ಗುರುತಿಸಿಕೊಂಡಿರುವ ನಿರ್ದೇಶಕರಾದ ಆರ್.ಮಹಾಂತೇಶ ತಿಳಿಸಿದ್ದಾರೆ.
ತಾರಾಗಣದಲ್ಲಿ ಸ್ಥಳಿಯಕಲಾವಿದರಾದ ಶ್ರೀದೇವಿ,ವೈಷ್ಣವಿ, ಯಶ್ವಂತ್ಆರ್.ಮಹಾಂತೇಶ್,ಮಲ್ಲಿಕಾರ್ಜುನ್,ರತ್ನಮ್ಮ,ವಾಣಿ,ಮೇಘ,ಶರಣಮ್ಮ ಚಂದ್ರಮ್ಮ,ರಾಜಶೇಖರ ಪಾಟೀಲ್ ಮುಂತಾದ ಉತ್ತರ ಕರ್ನಾಟಕದ ಬಹುತೇಕ ಕಲಾವಿದರು ನಟಿಸಿದ್ದಾರೆ.
ತಾಂತ್ರಿಕ ವರ್ಗದಲ್ಲಿ ಫೋಸ್ಟರ್ ಡಿಸೈನ್- ಎಮ್ಆರ್. ಛಾಯಾಗ್ರಹಣ-ಪ್ರೀತಂ ಎಮ್. ಪ್ರಚಾರ ಕಲೆ- ಡಾ.ಪ್ರಭು ಗಂಜಿಹಾಳ, ಡಾ. ವೀರೇಶ್ ಹಂಡಗಿ. ಪತ್ರಿಕಾ ಸಂಪರ್ಕ ಸುಧೀಂದ್ರ ವೆಂಕಟೇಶ್. ಧ್ವನಿ ವಿನ್ಯಾಸ ಗೋಪಿ. ಕಲರಿಸ್ಟ್ ,ಜೆಜೆ ಶರ್ಮಾ.ಸಂಗೀತ ವಿನು ಮನಸ್ಸು. ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ, ಸಂಕಲನದ ಜೊತೆ ನಿರ್ದೇಶನ ಜವಾಬ್ದಾರಿಯನ್ನು ಆರ್,ಮಹಾಂತೇಶ್ ನಿರ್ವಹಿಸಿದ್ದಾರೆ.