ಆದ್ಯೋತ್ ಸುದ್ದಿನಿಧಿ:
ಉತ್ತರ ಕನ್ನಡ ಭಾರತೀಯ ಜನತಾ ಪಾರ್ಟಿ ವತಿಯಿಂದ ಗುರುವಾರ ವರ್ಚುವಲ್ ಸಮಾವೇಶ ಆಯೋಜನೆ ಮಾಡಲಾಗಿತ್ತು.
ಕುಡಚಿ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ ರಾಜೀವ್ ಅವರು ನರೇಂದ್ರ ಮೋದಿ ಸರ್ಕಾರದ ಸಾಧನೆಗಳ ಕುರಿತಾಗಿ, ಜನಪರ ಯೋಜನೆಗಳು ಮತ್ತು ದಶಕಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಿರುವ ಸಂಗತಿಗಳನ್ನು ಉಲ್ಲೇಖಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಮಟಾ ಮಂಡಲದಲ್ಲಿ ವಿಶೇಷವಾಗಿ ಪ್ರೊಜೆಕ್ಟರ್ ವ್ಯವಸ್ಥೆ ಮಾಡಿದ್ದು, ಸುಮಾರು 40 ಕಾರ್ಯಕರ್ತರು ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಸಭೆ ವೀಕ್ಷಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ಎಸ್ ಹೆಗಡೆ ನಿರ್ವಹಿಸಿದರು.ರೇಖಾ ಹೆಗಡೆ ವಂದೇಮಾತರಂ ಗೀತೆ ಹಾಡಿದರು.
ಒಟ್ಟಾರೆ 274 ಕಾರ್ಯಕರ್ತರ ಉಪಸ್ಥಿತಿಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಜಿಲ್ಲಾ ಕಾರ್ಯದರ್ಶಿ ಹಾಗೂ ವರ್ಚುವಲ್ ಸಮಾವೇಶ ಪ್ರಮುಖ್ ಗುರುಪ್ರಸಾದ ಹೆಗಡೆ, ನವೀನ್ ಕುಮಾರ್ ನಾಯ್ಕ, ಜಿಲ್ಲೆಯ ಹಾಗೂ ಮಂಡಲಗಳ ಸಾಮಾಜಿಕ ಜಾಲತಾಣಗಳ ಪ್ರಕೋಷ್ಠದ ಪ್ರಮುಖರು ವಿಶೇಷ ಪ್ರಯತ್ನ ವಹಿಸಿದ್ದರು.