ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕರ್ಕಿಸವಲ ಗ್ರಾಮದಲ್ಲಿ 14 ಅಡಿ ಉದ್ದದ ಭಾರಿಗಾತ್ರದ ಕಾಳಿಂಗಸರ್ಪವನ್ನು ಸೆರೆಹಿಡಿಯಲಾಯಿತು.
ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಕಾಣಿಸಿಕೊಳ್ಳುತ್ತ ಜನರಲ್ಲಿ ಭಯ ಹುಟ್ಟಿಸುತ್ತಿದ್ದ ಕಾಳಿಂಗ ಸರ್ಪ ಗುರುವಾರ ಗ್ರಾಮದ ಗೋಪಾಲ ಪರಮೇಶ್ವರ ಹೆಗಡೆ ಎನ್ನುವವರ ಕೊಟ್ಟಿಗೆ ಮನೆಯಲ್ಲಿ ಕಾಣಿಸಿಕೊಂಡಿದೆ. ಮನೆಯವರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆಯವರು ಶಿರಸಿಯ ಉರಗತಜ್ಞ ಮನೋಹರ ಅವರನ್ನು ಕರೆಸಿದರು. ಸತತ ಎರಡು ಗಂಟೆಯ ಕಾಯಾಚರಣೆಯ ನಂತರ ಅರಣ್ಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಹಕಾರದೊಂದಿಗೆ ಕಾಳಿಂಗಸರ್ಪವನ್ನು ಸೆರೆಹಿಡಿಯಲಾಯಿತು. ನಂತರ ಕಾಳಿಂಗಸರ್ಪವನ್ನು ಸಿದ್ದಾಪುರ ಮಾವಿನಗುಂಡಿ ಸಮೀಪದ ಕತ್ತಲೆಕಾನು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.
ಕಾಳಿಂಗ ಕಾರ್ಯಾಚರಣೆ ವಿಡಿಯೋ ಇಲ್ಲಿದೆ ನೋಡಿ –