ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಅಂಬಿಕಾ ನಗರದಲ್ಲಿ ಕಾಳಿ ನದಿಗೆ ಅಡ್ಡವಾಗಿ ಕಟ್ಟಿರುವ ಕಾಳಿ ವಿದ್ಯುದಾಗಾರದ ವಿದ್ಯುತ್ ಸಂಗ್ರಹಣಾಗಾರದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮ್ ಸ್ಪೋಟಗೊಂಡ ಘಟನೆ ನಡೆದಿದೆ.
ಸ್ಪೋಟದ ತೀವ್ರತೆಗೆ ಹಲವು ಟ್ರಾನ್ಸ್ ಫಾರ್ಮ್ ಗಳು ಸಂಪೂರ್ಣ ನಾಶವಾಗಿದ್ದು ಅದೃಷ್ಟವಶಾತ್ ಕಾರ್ಮಿಕರು ಹಾಗೂ ಇಂಜಿನಿಯರ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರಾನ್ಸ್ ಫಾರ್ಮ್ ನಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಈ ಸ್ಟೋಟ ನಡೆದಿದೆ ಎನ್ನಲಾಗಿದ್ದು ನಿನ್ನೆ ಸಂಜೆವೇಳೆ ಘಟನೆ ನಡೆದಿದ್ದು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಸ್ಪೋಟಗೊಂಡ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರು. ಸ್ಪೋಟಗೊಂಡ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.