ಆದ್ಯೋತ್ ಸುದ್ದಿನಿಧಿ:
ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಲೆಕ್ಕಪತ್ರ ಸಮಿತಿ(ಪಿಎಸಿ) ಸಭೆಯಲ್ಲಿ ಸದಸ್ಯರು ಸಮಿತಿಯ ಅಧ್ಯಕ್ಷ ಎಚ್.ಕೆ.ಪಾಟೀಲ್ ವಿರುದ್ದ ತಿರುಗಿ ಬಿದ್ದ ಪರಿಣಾಮ ಸ್ಪೀಕರ್ ಜೊತೆಗೆ ಸಭೆ ನಡೆಸಿ ಮಾತುಕತೆಯಾಡಲು
ತೀರ್ಮಾನಿಸಲಾಯಿತು ಎಂದು ತಿಳಿದು ಬಂದಿದೆ.
ಸಮಿತಿಯ ಸದಸ್ಯರು ಪಾಟೀಲ್ ವಿರುದ್ದ ತಿರುಗಿ ಬಿದ್ದರು ಎಂಬ ವಿಷಯ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತು ಈ ಬಗ್ಗೆ ಆದ್ಯೋತ್ ನ್ಯೂಸ್ ಎಚ್.ಕೆ.ಪಾಟೀಲ್ ಸಂಪರ್ಕಿಸಿತು
ಆದ್ಯೋತ್ ನ್ಯೂಸ್ ಜೊತೆಗೆ ಮನಬಿಚ್ಚಿ ಮಾತನಾಡಿದ ಹಿರಿಯ ರಾಜಕಾರಣಿ ಎಚ್.ಕೆ.ಪಾಟೀಲ್,
ಎಲ್ಲಾ ಇಲಾಖೆಯಲ್ಲೂ ನಡೆಯುವ ಬ್ರಷ್ಟಾಚಾರವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುವ ಬ್ರಷ್ಟಾಚಾರವನ್ನು ಮಟ್ಟಹಾಕಲು ಪಿಎಸಿ ಬಹುದೊಡ್ಡ ಅಸ್ತ್ರವಾಗಿದೆ ಎಂದು ಹೇಳಿದರು.
ಆದ್ಯೋತ್ ನ್ಯೂಸ್:
ಆರೋಗ್ಯ ಇಲಾಖೆಯಲ್ಲಿ ನಡೆದ ಅಕ್ರಮದಲ್ಲಿ ಸ್ಪೀಕರ್ ಯಾರನ್ನೋ ರಕ್ಷಿಸುತ್ತಿದ್ದಾರೆ ಎಂದು ನಿಮಗೆ ಅನಿಸುತ್ತಿದೆಯೇ?
ಎಚ್.ಕೆ.ಪಾಟೀಲ್:
ಖಂಡಿತಾ ಇಲ್ಲ ಅಂತಹ ಭಾವನೆ ಇಲ್ಲ ಆದರೆ ಲೆಕ್ಕಪತ್ರ ಸಮಿತಿ ಸ್ಥಳೀಯವಾಗಿ ಭೇಟಿ ನಡೆಸಿ ಪರಿಶೀಲನೆ ನಡೆಸುವುದು ಸರಿಯಾದ ಕ್ರಮ ಇದಕ್ಕೆ ತಡೆಯಾಜ್ಞೆ ನೀಡುವುದರಿಂದ ಸಾರ್ವಜನಿಕವಾಗಿ ತಪ್ಪು ಸಂದೇಶ ಹೋಗುತ್ತದೆ ಎನ್ನುವುದು ನನ್ನ ಭಾವನೆ
ಆದ್ಯೋತ್ ನ್ಯೂಸ್:
ಈಗಾಗಲೆ ರವಿ ಕೃಷ್ಣಾ ರೆಡ್ಡಿಯವರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದೇನೆ ಎಂದಿದ್ದಾರೆ ಹೀಗಿದ್ದು ಪಿಎಸಿ ಸಮಿತಿ ತನಿಖೆ ಮಾಡಲು ಮುಂದಾಗಿದ್ದು ಎಷ್ಟು ಸರಿ?
ಎಚ್.ಕೆ. ಪಾಟೀಲ್:
ಆರೋಗ್ಯ ಇಲಾಖೆಯ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಪೆಎಸಿಗೆ ಹಲವರು ದೂರು ನೀಡಿದ್ದಾರೆ,ರವಿಕೃಷ್ಣಾ ರೆಡ್ಡಿಯವರೂ ಪುರಾವೆ ಸಹಿತ ದೂರು ನೀಡಿದ್ದಾರೆ ಪಿಎಸಿ ಸಮಿತಿ ಜನಪ್ರತಿನಿಧಿಗಳನ್ನೊಳಗೊಂಡ ಸಮಿತಿ ಬ್ರಷ್ಟಾಚಾರವನ್ನು ಮಟ್ಟಹಾಕಲು ಇದು ಬಹುದೊಡ್ಡ ಅಸ್ತ್ರವಾಗಿದೆ, ಲೋಕಾಯುಕ್ತ ಕ್ಕೂ ಪಿಎಸಿ ಸಮಿತಿಗೂ ಯಾವುದೇ ಸಂಬಂಧವಿಲ್ಲ
ಆದ್ಯೋತ್ ನ್ಯೂಸ್:
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮೇಲೆ ಪಾಟೀಲರಿಗೆ ಗಂಭೀರ ಭಿನ್ನಾಭಿಪ್ರಾಯವೇನಾದರೂ ಇದೆಯೇ?
ಎಚ್.ಕೆ.ಪಾಟೀಲ್:
ತಪ್ಪು ಕಲ್ಪನೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ನಿನ್ನೆ ನಡೆದ ಸಭೆಯಲ್ಲಿ ಕಾಂಗ್ರೆಸ್,ಜೆಡಿಎಸ್,ಬಿಜೆಪಿಯ ಕೆಲವು ಸದಸ್ಯರು ನನ್ನ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು ಹಿರಿಯರು ಅನುಭವಸ್ಥರು ಆದ ರಮೇಶ ಕುಮಾರ ಕೆ.ಜೆ.ಭೂಪಯ್ಯರಂತಹವರು ಪಿಎಸಿಗೆ ಶಕ್ತಿ ತುಂಬಲು ಸ್ಪೀಕರ್ ಜೊತೆಗೆ ಸಭೆ ನಡೆಸಿ ಮಾತುಕತೆ ನಡೆಸುವಂತೆ ಸೂಚಿಸಿದರು
ಸದ್ಯದಲ್ಲೆ ಸ್ಪೀಕರ್ ಜೊತೆಗೆ ಸಭೆ ನಡೆಸಿ ಪಿಎಸಿಗೆ ಶಕ್ತಿ ತುಂಬುವ,ಮುಕ್ತವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಮಾಡಬೇಕಾದ ಕಾರ್ಯವನ್ನು ಮಾಡುತ್ತೇನೆ.
ಆದ್ಯೋತ್ ನ್ಯೂಸ್:
ಸರಕಾರ ನೆರೆ ವಿಚಾರದಲ್ಲಾಗಲಿ,ಕೊವಿಡ್ ವಿಚಾರದಲ್ಲಾಗಲಿ ಪದೆ ಪದೆ ಎಡವುತ್ತಿದೆ ಪಾಟೀಲರು ಸರಕಾರದ ವಿರುದ್ದ ಹೋರಾಡುವುದು ಬಿಟ್ಟು,ಸ್ಪೀಕರ್ ವಿರುದ್ದಹೋರಾಡುತ್ತಿರುವುದು ಎಷ್ಟು ಸರಿ?
ಎಚ್.ಕೆ. ಪಾಟೀಲ್:
ಸರಕಾರ ಎಡವಿದಾಗ ನಾನು ಪ್ರತಿಭಟನೆಗೆ ಯಾವಾಗಲೂ
ಹಿಂಜರಿದಿಲ್ಲ ನೆರೆ ಪರಿಹಾರದ ವಿಚಾರದಲ್ಲಿ ನಾನು ಹೋರಾಟ ಮಾಡಿದಷ್ಟು ಬೇರೆ ಯಾರೂ ಮಾಡಿಲ್ಲ ನಾನು ಸದನದ ಒಳಗೆ,ಹೊರಗೆ ಹೋರಾಟ ನಡೆಸಿದ್ದೇನೆ. ಕೊವಿಡ್ ವಿಚಾರದಲ್ಲೂ ಸರಕಾರದ ನಡೆಯನ್ನು ಸಾಕಷ್ಟು ಬಾರಿ ಖಂಡಿಸಿದ್ದೇನೆ.ಮುಂದೆಯೂ ತಪ್ಪು ನಡೆದಾಗ ನಾನು ಪ್ರತಿಭಟಿಸುತ್ತೇನೆ
ಆದ್ಯೋತ್ ನ್ಯೂಸ್:
ನಿಮ್ಮ ಪ್ರತಿಭಟನೆಗೆ ನಿಮ್ಮ ಪಕ್ಷ ಕಾಂಗ್ರೆಸ್ ನಿಂದ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ ಎನಿಸುತ್ತದೆ.
ಎಚ್.ಕೆ. ಪಾಟೀಲ್
ಹಾಗೇನಿಲ್ಲ ನಮ್ಮ ಪಕ್ಷದವರು ಸಾಕಷ್ಟು ಬೆಂಬಲ ನೀಡುತ್ತಿದ್ದಾರೆ
ಪಿಎಸಿ ಸಮಿತಿಯಲ್ಲಿ ಕಾಂಗ್ರೆಸ್ ನವರೂ ಇದ್ದಾರೆ ಅವರೆಲ್ಲರೂ ನನ್ನ ನಿಲುವನ್ನು ಬೆಂಬಲಿಸಿದ್ದಾರೆ.