ಆದ್ಯೋತ್ ಸಿನೇಮಾ ಸುದ್ದಿ:
ತುರ್ತು ಸಂದರ್ಭಗಳು ಎದುರಾದಾಗ ಪೊಲೀಸ್ ಹೆಲ್ಪಲೈನ್ ೧೧೨ಗೆ ಕಾಲ್ ಮಾಡುವ ಮೂಲಕ ತಮ್ಮನ್ನು ಹೇಗೆ ರಕ್ಷಣೆ ಪಡೆಯಬಹುದು ಎಂಬುದನ್ನು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಈ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಕುರಿತು ಕಿರು ಚಲನ ಚಿತ್ರದ ಮೂಲಕ ಜಾಗೃತಿ ಮೂಡಿಸುವ ಮಹತ್ತರ ಕೆಲಸ ಮಾಡಿದ ಗದುಗಿನ ಕಲಾವಿದರ ಸಾಮಾಜಿಕ ಕಾಳಜಿ ಹೆಮ್ಮೆಪಡುವಂತಹದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತಿಶ್ ಎನ್. ಅವರು ಹೇಳಿದರು.
ಅವರು ಗದಗ ನಗರದ ಬಾಲಾಜಿ ಕನ್ವೆನ್ಷನ್ ಹಾಲ್‌ದಲ್ಲಿ ಚಿನ್ಮಯಗಾಯಿತ್ರಿ ಕ್ರಿಯೇಷನ್ಸ್, ಸಜ್ಜನ ಡಿಜಿಟಲ್ಸ್ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಸಿದ್ದ, ಆಪತ್ಕಾಲದಲ್ಲಿ ಮಹಿಳೆಯರ ರಕ್ಷಣಾ ಯೋಜನೆಯಾದ ಪೊಲೀಸ್ ಇಲಾಖೆಯ ಇಆರ್‌ಎಸ್‌ಎಸ್-೧೧೨ ಕುರಿತು ಬಿ. ಮೌನೇಶ್ ನಿರ್ದೇಶನದಲ್ಲಿ ಮೂಡಿಬಂದ `ಕಾಲ್ ಮಿ’ ಕನ್ನಡ ಕಿರು ಚಲನ ಚಿತ್ರ ಬಿಡುಗಡೆಗೊಳಿಸಿ, ತಂಡಕ್ಕೆ ಶುಭಹಾರೈಸಿ ಮಾತನಾಡಿದರು.
ಚಿತ್ರದ ನಿರ್ದೇಶಕರಾದ ಬಿ. ಮೌನೇಶ ಮಾತನಾಡಿ, ಚಿತ್ರದ ನಿರ್ಮಾಣಕ್ಕೆ ನಗರದ ಹಲವು ಗಣ್ಯರು ಸಹಕಾರ ನೀಡಿದ್ದಾರೆ. ನಿರ್ಮಾಣ ಮೇಲ್ವಿಚಾರಕರಾದ ಸುನೀಲಸಿಂಗ್ ಲದ್ದಿಗೇರಿ ಹಾಗೂ ಸಜ್ಜನ ಡಿಜಿಟಲ್ಸ್ ತಂಡದ ಉಮೇಶ ಸಜ್ಜನ ಹಾಗೂ ಪಾಲ್ಗೊಂಡ ಎಲ್ಲ ಕಲಾವಿದರ ಸಹಕಾರದಿಂದ ಚಿತ್ರ ಮೂಡಿಬರಲು ಸಾಧ್ಯವಾಯಿತು ಎಂದರು.
ಪೊಲೀಸ್ ಉಪ ಅಧೀಕ್ಷಕರಾದ ಪ್ರಹ್ಲಾದ ಎಸ್. ಕೆ.ನಿಸ್ತಂತು ವಿಭಾಗದ ಪೊಲೀಸ್ ಅಧಿಕಾರಿ ಜಿ. ಎಮ್. ಮಾಳಗಿ, ಶಹರ ಸಿಪಿಐ ಸಾಲಿಮಠ, ಸಹ ನಿರ್ದೇಶಕ ಡಾ. ಪ್ರಭು ಅ. ಗಂಜಿಹಾಳ, ಛಾಯಾಗ್ರಹಕ ಉಮೇಶ ಸಜ್ಜನ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನವಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಪಿ. ಸುಬ್ರಮಣ್ಯಂ, ಗಣ್ಯರಾದ ಪ್ರಭಾಕರ ಹೆಬಸೂರ, ಸಂತೋಷ ಗುಡ್ಡದ, ಶ್ರೀನಿವಾಸ ಬೆಟಗೇರಿ, ಹಿರಿಯ ರಂಗಕಲಾವಿದ ಪ್ರೊ. ಆರ್. ಎನ್. ಕುಲಕರ್ಣಿ, ನಿರ್ಮಾಣ ಮೇಲ್ವಿಚಾರಕ ಸುನೀಲಸಿಂಗ್ ಲದ್ದಿಗೇರಿ, ಕಲಾವಿದ ಗಾಯಿತ್ರಿ ಹಿರೇಮಠ, ಸುನಂದಾ ಹಿರೇಮಠ, ಮಂಜು ಡಂಬಳ, ರಾಚಯ್ಯ ಹಿರೇಮಠ, ಶಂಕರ್ ಮಳ್ಳೇದ, ಛಾಯಾಗ್ರಾಹಣ ಹಾಗೂ ಸಂಕಲನಕಾರ ಚಂದ್ರಯ್ಯ ಗುಡ್ಡಿಮಠ, ತುಳಸಿನಾಥ ಪವಾರ, ಸಹ ನಿರ್ದೇಶಕ ಬಿ. ಮಹೇಶ್‌ಆಚಾರ್ಯ, ಅವಿನಾಶ ಗಂಜಿಹಾಳ, ವಿಶ್ವನಾಥ ಬೇಂದ್ರೆ, ಇಮಾಮಸಾಬ ನಮಾಜಿ, ಖಾಜಾಸಾಬ ಬೂದಿಹಾಳ, ಶ್ರೀನಿವಾಸ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.