ಚಿತ್ರದುರ್ಗ ಜಿಲ್ಲಾ ಯೂನಿಯನ್ ನಿರ್ದೇಶಕರಾಗಿ ತಿಪ್ಪೇಸ್ವಾಮಿ ಆಯ್ಕೆ

ಆದ್ಯೋತ್ ಸುದ್ದಿನಿಧಿ:
ಚಿತ್ರದುರ್ಗ ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರ ಸ್ಥಾನಕ್ಕೆ ನವಂಬರ್-15ರಂದು ನಡೆದ ಚುನಾವಣೆಯಲ್ಲಿ
ಸಹಕಾರಿ ಕ್ಷೇತ್ರದಿಂದ ಮಾಜಿ ಜಿಪಂ ಸದಸ್ಯ ಹೆಚ್.ಎನ್. ತಿಪ್ಪೇಸ್ವಾಮಿ ಆಯ್ಕೆಯಾಗಿದ್ದಾರೆ.

ಹಾಜರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ವಿಜೃಂಭಣೆಯಿಂದ ಗೆಲುವನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಸಿರಿಗೆರೆ ಪ್ರಬಣ್ಣ,ಟಿಎಪಿಎಂಸಿ ಮಾಜಿ ಅಧ್ಯಕ್ಷ ರಂಗನಹಳ್ಳಿ ಹನುಮಂತಣ್ಣ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯಮೌನೇಶ್ ತಾಂಡ ಅಭಿವೃದ್ಧಿ ನಿಗಮದ ನಿರ್ದೇಶಕ ಅನಿಲ್ ನಾಯಕ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್ಎನ್ ಪ್ರವೀಣ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಸಂತೋಷ್ ಪ್ರಸನ್ನ ನವೀನ್ ಜಹೀರ್ ಕೊಬ್ಯಾ ಶಿವಲಿಂಗಪ್ಪ ಕಲ್ಲೇಶ್ ಮುಂತಾದವರು ಭಾಗಿಯಾಗಿದ್ದರು
*******
ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರದ‌ ಉದ್ಘಾಟನೆ:
ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ದಾನಿಗಳ ಕೊಡುಗೆಯಿಂದ ನಿರ್ಮಾಣ ಮಾಡಲಾದ ಡಯಾಲಿಸಿಸ್ ಕೇಂದ್ರದ ಕಟ್ಟಡದ ಉದ್ಘಾಟನೆ ಮಂಗಳವಾರ ನಡೆಯಿತು.

ಶಾಸಕ ಸುನಿಲ ನಾಯ್ಕ ಕಟ್ಟಡವನ್ನು ಉದ್ಘಾಟಿಸಿ,ತಾಲೂಕಿನ ಜನತೆಗೆ ಅತಿಅವಶ್ಯಕವಾಗಿದ್ದ ಡಯಾಲಿಸಿಸ್ ಕೇಂದ್ರವನ್ನು ಇಂದು ಪ್ರಾರಂಭಿಸಲಾಗಿದೆ ಅವಶ್ಯಕತೆಯುಳ್ಳವರು ಇದರ ಉಪಯೋಗವನ್ನು ಪಡೆಯ ಬೇಕು ಆಸ್ಪತ್ರೆಗೆ ಅವಶ್ಯಕವಿರುವ ಇನ್ನಿತರ ಸೌಲಭ್ಯಗಳ ಬಗ್ಗೆ ಸರಕಾರದ ಜೊತೆ ಮಾತನಾಡಿ ಸಿಗುವಂತೆ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್,ಉಪವಿಭಾಗಾಧಿಕಾರಿ ಭರತ್ ಎನ್.ಪುರಸಭೆಯ ಅಧ್ಯಕ್ಷ ಪರ್ವೇಜ್,ಎ.ಎಸ್.ಪಿ.ನಿಖಿಲ್ ಬುಳ್ಳಾವರ ಉಪಸ್ಥಿತರಿದ್ದರು
*********
******

******

*****

About the author

Adyot

Leave a Comment