ಹಿಟ್ಲರ್ ಸಿನೇಮಾದ ಡೈಲಾಗ್ ಟ್ರೈಲರ್ ಬಿಡುಗಡೆ
ಕೆ ಜಿ ಎಫ್, ಅಂಜನಿಪುತ್ರ,ದಮಯಂತಿ, ಜಂಟಲ್ ಮ್ಯಾನ್ ಚಿತ್ರಗಳ ಸಾಹಿತಿ ಕಿನ್ನಾಳ ರಾಜ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರ ಹಿಟ್ಲರ್.
ಈಗಾಗಲೇ ಚಿತ್ರೀಕರಣ ಮುಗಿಸಿ ಸೆನ್ಸಾರ್ ಅಂಗಳದಲ್ಲಿ ಇದೆ.
ಇದೀಗ ಚಿತ್ರದ ಸಂಭಾಷಣೆಗಳನ್ನು ಪರಿಚಯಿಸುವ ವಿಭಿನ್ನ ರೀತಿಯ *ಡೈಲಾಗ್ ಟ್ರೈಲರ್* ಬಿಡುಗಡೆ ಮಾಡಿದೆ.
ಪಕ್ಕ ಮಾಸ್ ಪ್ರೇಕ್ಷಕರನ್ನು ಸೆಳೆದಿರುವ ಟ್ರೇಲರ್ ಒಂದೇ ದಿನದಲ್ಲಿ 35 ಕೆ ವೀಕ್ಷಣೆ ದಾಟಿ ಟ್ರೆಂಡ್ ಆಗುತ್ತಿದೆ.
ಅಯೋಗ್ಯ.ಹಾಗೂ ಮದಗಜ ಚಿತ್ರದ ನಿರ್ದೇಶಕರಾದ ಎಸ್. ಮಹೇಶ್ ಕುಮಾರ್ ಟ್ರೈಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನಾಯಕ ಲೋಹಿತ್ ಹಾಗೂ ಚಿತ್ರತಂಡ ನಿರ್ದೇಶಕ ಕಿನ್ನಾಳ ರಾಜ್ ಅವರ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿ
ಅವರ ಹುಟ್ಟು ಹಬ್ಬಕ್ಕೆ ಟ್ರೈಲರನ್ನು ಕೊಡುಗೆ ನೀಡಿದೆ ಎನ್ನಬಹುದು.
ಕೊವಿಡ್ ಕಳೆದ ನಂತರ ರಾಜ್ಯಾದ್ಯಂತ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರ ಗಾನಶಿವ ಮೂವ್ಹಿಸ್ ಬ್ಯಾನರಡಿಯಲ್ಲಿ ಮಮತಾ ಲೋಹಿತ್ ನಿರ್ಮಿಸುತ್ತಿದ್ದಾರೆ.
ಚಿತ್ರದಲ್ಲಿ ನಾಯಕನಾಗಿ ಲೋಹಿತ್, ನಾಯಕಿ ಸಸ್ಯ, ಬಲ ರಾಜವಾಡಿ, ವೈಭವ ನಾಗರಾಜ, ವಿಜಯ ಚಂಡೂರ, ಗಣೇಶರಾವ್, ವರ್ಧನ್, ವೇದಾ ಹಾಸನ,ಶಶಿಕುಮಾರ ಮೊದಲಾದವರಿದ್ದಾರೆ.ಕನ್ನಡ ಕೋಗಿಲೆ ಖ್ಯಾತಿಯ ಅರ್ಜುನ ಇಟಗಿ ಮೊದಲ ಸಲ ತೆರೆಗೆ ಬರುತ್ತಿದ್ದಾನೆ.
ಛಾಯಾಗ್ರಹಣ ಜಿ.ವಿ.ನಾಗರಾಜ,ಸಂಕಲನ ಗಣೇಶ ತೋರಗಲ್, ಸಾಹಸ ಚಂದ್ರು ಬಂಡೆ, ನೃತ್ಯ ಅರುಣ ರೈ, ಪಿಆರ್‌ಓ ಚಂದ್ರಶೇಖರ, ಪ್ರಚಾರ ಕಲೆ ಡಾ. ಪ್ರಭು ಗಂಜಿಹಾಳ,ಡಾ.ವೀರೇಶ ಹಂಡಗಿ ಅವರದಿದೆ. ಕಥೆ-ಚಿತ್ರಕಥೆ,ಸಂಭಾಷಣೆಯ ಜೊತೆಗೆ ನಿರ್ದೇಶನ ಕಿನ್ನಾಳರಾಜ್ ಮಾಡಿದ್ದು ಕಾರ್ಯಕಾರಿ ನಿರ್ಮಾಪಕರು ಪರ್ವೇಶ್ ಸಿಂಗ್ ಆಗಿದ್ದಾರೆ.