“ಏ.. ವಿಧಿಯೇ” ಕೊರೊನಾ ಜಾಗೃತ ಗೀತೆ ಬಿಡುಗಡೆ

ಆದ್ಯೋತ್ ಸುದ್ದಿನಿಧಿ:
ಧಾರವಾಡದ ಎಸ್ ಎನ್ ಜಾಲ್ಸ್ ಕ್ರಿಯೇಟಿವ್ ಸ್ಟುಡಿಯೋ ಮತ್ತು ತನು ಕ್ರಿಯೇಷನ್ಸ್ ಅರ್ಪಿಸುವ “.. ವಿಧಿಯೇ” ಎಂಬ ಕೊರೊನಾ ಎರಡನೆ ಅಲೆ ಜಾಗೃತ ಗೀತೆಯನ್ನು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಬಿಡುಗಡೆ ಮಾಡಲಾಯಿತು.
ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಎಸ್ ಎನ್ ಜಾಲ್ಸ್ ಯುಟೂಬ್ ಆಫೀಸಿಯಲ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿ ಕೊರೊನ ಹಾವಳಿಯಿಂದ ವಿಶ್ವವೇ ತತ್ತರಿಸುತ್ತಿದೆ. ಇದಕ್ಕಾಗಿ ಅಜಾಗರೂಕತೆಯಿಂದ ನಮ್ಮ ಪ್ರಾಣವೇ ಹೋಗುವ ಸ್ಥಿತಿ ನಿರ್ಮಾಣ ಆಗಿದೆ. ಸಾಂಕ್ರಾಮಿಕ ರೀತಿಯಲ್ಲಿ ಹರಡುತ್ತಿರುವ ಸೋಂಕು ತಡೆಗಟ್ಟಲು ಗುಂಪು ಸೇರದೆ ಪರಸ್ಪರ ದೈಹಿಕ ಅಂತರ ಕಾಯ್ದುಕೊಳ್ಳುವದು, ಮಾಸ್ಕ ಧರಿಸುವದು, ಸ್ಯಾನಟರೈಜ್ ಬಳಸುವ ಮೂಲಕ ಕೊರೊನಾದಿಂದ ಅರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಇಂಥ ಸ್ಥಿತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ಗೀತೆ ಸಹಕಾರಿ ಆಗಲಿದೆ ಇದು ಹೆಚ್ಚು ಜನರನ್ನು ತಲುಪಿ ನಿಮ್ಮ ತಂಡದ ಶ್ರಮ ಸಾರ್ಥಕವಾಗಲಿ ಎಂದರು.

ಗೀತೆಯನ್ನು ಶಿವಕುಮಾರ ವಿಭೂತಿ ಮತ್ತು ಕೆ.ಬದರಿಪ್ರಸಾದ ರಚಿಸಿದ್ದು ಚೇತನ್ ಪಾವಟೆ ,ಚೆನ್ನು ಪಾವಟೆ ಸಂಗೀತ ಸಂಯೋಜಿಸಿದ್ದಾರೆ. ಕೆ.ಬದರಿಪ್ರಸಾದ (ಸುಧೇಯ್) ಧ್ವನಿ ನೀಡಿದ್ದಾರೆ.
ನಿರ್ದೇಶನ ಮಹೇಶಕುಮಾರ್ ಮಂಟೂರ್,ರಾಘವೇಂದ್ರ ಆರ್ ಜೆ, ಸಹನಿರ್ದೇಶನ ದಯಾನಂದ ಅವರದಿದೆ ಛಾಯಾಗ್ರಹಣ ರಾಜೇಶ ಪವಾರ, ಮಹೇಶ ಮಂಟೂರ್, ಸಂಕಲನ ಸಿದ್ದಾರ್ಥ ಜಾಲಿಹಾಳ, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ , ಸಹಕಾರ ಡಾ.ಕಲ್ಮೇಶ್ ಹಾವೇರಿಪೇಟ್, ಅರವಿಂದ್ ಮುಳಗುಂದ ಅವರದಿದೆ .
ಈ ಗೀತೆಗೆ ಅನೇಕ ಗಣ್ಯ ವ್ಯಕ್ತಿಗಳು ವಿಡಿಯೋ ಮುಖಾಂತರ ಸಹಕಾರ, ಪ್ರೋತ್ಸಾಹ ನೀಡಿದ್ದು ಜಗತ್ತಿನ ಎಲ್ಲ ಕೊರೊನಾ ವಾರಿಯರ‍್ಸ್ ಗೆ ಸಮರ್ಪಿಸಲಾಗಿದ್ದು ನಮ್ಮ ಆರೋಗ್ಯ ನಮ್ಮ ಜವಾಬ್ದಾರಿ, ಜಗತ್ತಿನ ಆರೋಗ್ಯ ನಮ್ಮೆಲ್ಲರ ಜವಾಬ್ದಾರಿ ಎನ್ನುವ ಸಂದೇಶ ಹೊಂದಿದೆ ಎಂದು ನಿರ್ಮಾಪಕ ಎಸ್ ಎನ್ ಜಾಲ್ಸ್ ಸ್ಟುಡಿಯೋದ ಸಿದ್ಧಾರ್ಥ ನಾಗರಾಜ ಜಾಲಿಹಾಳ ತಿಳಿಸಿದ್ದಾರೆ. ಸಧ್ಯ ಈ ಗೀತೆ ಯು ಟೂಬ್ ನಲ್ಲೂ ಸದ್ದು ಮಾಡುತ್ತಿದೆ.

About the author

Adyot

Leave a Comment