ಆದ್ಯೋತ್ ಸಿನೇಮಾ ಸುದ್ದಿ:
ಹೆತ್ತೊಡಲು ಸಿನಿ ಕಂಬೈನ್ಸ್ ಲಾಂಚನದಲ್ಲಿ ನಿರ್ಮಿ
ಸಲಾಗುತ್ತಿರುವ ‘ಧರ್ಮವೀರ’ ಕನ್ನಡ ಚಲನ ಚಿತ್ರ ಈ ವಾರ ಸೆನ್ಸಾರ್ ಗೆ ಹೋಗಲು ಸಿದ್ಧವಾಗಿದೆ.
‘ಧರ್ಮವೀರ’ದಲ್ಲಿ ಊರಿನ ಗಣ್ಯವ್ಯಕ್ತಿ ರಾಜೀವಪ್ಪ ಗ್ರಾಮದ ಒಳಿತಿಗಾಗಿ ತನ್ನ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಾನೆ. ರಾಜಕೀಯ ವಿರೋಧಿಗಳ ಅನ್ಯಾಯವನ್ನು ಖಂಡಿಸಿ ನಾಯಕನೆನಿಸಿಕೊಳ್ಳುತ್ತಾನೆ. ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗುವದನ್ನು ಬಿಟ್ಟು ತನ್ನಿಂದ ಅನ್ಯಾಯಕ್ಕೊಳಗಾದ ಹೆಣ್ಣನ್ನು ಮದುವೆಯಾಗುವನು. ಆದರೆ ವಿರೋಧಿಗಳ ಕುತಂತ್ರದಿಂದ ಅಪವಾದವಾಗಿದ್ದನ್ನು ತೋರಿಸಿಕೊಡುವ ಮೂಲಕ ಎಲ್ಲರ ಮನಗೆಲ್ಲುತ್ತಾನೆ. ಆತ ಹೇಗೆ ಜನನಾಯಕರಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಚಿತ್ರಮಂದಿರದಲ್ಲೇ ನೋಡಬೇಕು ಎಂದು ನಿರ್ದೇಶಕ ಎಂ.ರಂಗನಾಥ ಹೇಳುತ್ತಾರೆ.
ಬೆಂಗಳೂರು, ಧಾರವಾಡ, ಬನವಾಸಿ, ಬಳ್ಳಾರಿ, ಚಿತ್ರದುರ್ಗ, ಶಿರ್ಶಿ, ಗುತ್ತಲ ವಿವಿಧ ಕಡೆ ಚಿತ್ರೀಕರಣ ನಡೆಸಲಾಗಿದ್ದು ಇದೀಗ ಎಲ್ಲ ಕಾರ್ಯ ಮುಗಿದು ಸೆನ್ಸಾರ್ ಗೆ ಕಳಿಸುವದಾಗಿ ನಿರ್ದೇಶಕ ಎಂ.ರಂಗನಾಥ, ನಿರ್ಮಾಪಕ ಡಾ.ಕಲ್ಮೇಶ್ ಹಾವೇರಿಪೇಟ್ ತಿಳಿಸಿದ್ದಾರೆ.
ಚಿತ್ರಕ್ಕೆ ಛಾಯಾಗ್ರಹಣ ಗುರುದತ್ ಮುಸುರಿ, ಸಾಹಿತ್ಯ,ಸಹ ನಿರ್ದೇಶನ ಜಗ್ಗು ಶಿರ್ಶಿ, ಸಂಗೀತ ವಿನು ಮನಸು, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ , ಸಂಕಲನ ಅರುಣ ಥಾಮಸ್, ಸಹಾಯಕ ನಿರ್ದೇಶನ ಧನು ಅವರದಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನು ಎಂ.ರಂಗನಾಥ ಮಾಡಿದ್ದಾರೆ.
ತಾರಾಗಣದಲ್ಲಿ ಧಾರವಾಡ ಕವಿವಿ ಸಿಂಡಿಕೇಟ್ ಸದಸ್ಯ, ಜನನಾಯಕರೆಂದೆ ಹೆಸರಾದ ಡಾ.ಕಲ್ಮೇಶ್ ಹಾವೇರಿಪೇಟ್ ನಾಯಕ ನಟರಾಗಿ ಅಭಿನಯಿಸಿದ್ದು ಪ್ರಥಮ ಚಿತ್ರವಾದರೂ ಅನುಭವಿ ನಾಯಕರಂತೆ ಪೈಟ್,ಡ್ಯಾನ್ಸ್ ಜೊತೆಗೆ ಉತ್ತಮ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ.
ಸಿಂಧೂರಾವ್,ರಂಜಿತ್ ರಾವ್, ಜಯಸಿಂಹ ಮುಸುರಿ, ಚಿತ್ಕಲಾ, ಶಶಿಧರ ಪಾಟೀಲ, ಸಿ.ಎಸ್.ಪಾಟೀಲ ಕುಲಕರ್ಣಿ,ವೀಣಾ ಕಟ್ಟಿ, ಅರಂದ ಮುಳಗುಂದ, ನಿಸ್ಸಾರ , ಪ್ರೇಮ. ಬಸವರಾಜ ಶಶಿಕುಮಾರ,ನಿರ್ಮಲಾ ಅಲ್ಲದೆ ಉತ್ತರ ಕರ್ನಾಟಕದ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಮಾರ್ಚ ಅಂತ್ಯಕ್ಕೆ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ನಾಯಕನಟ, ನಿರ್ಮಾಪಕ ಡಾ.ಕಲ್ಮೇಶ್ ಹಾವೇರಿಪೇಟ್ ತಿಳಿಸಿದ್ದಾರೆ.