“ಮುದ್ದು ಮಾಡೋ ಗೆಳೆಯ” ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಆದ್ಯೋತ್ ಸಿನೇಮಾಸುದ್ದಿ:
ಆರ್ ಟಿ ರೆಕಾರ್ಡಿಂಗ್ ಸ್ಟುಡಿಯೋ ಪ್ರೊಡಕ್ಷನ್ ಬಾಗಲಕೋಟೆ ಅವರ ‘ಮುದ್ದು ಮಾಡೋ ಗೆಳೆಯ‘ ಮ್ಯೂಸಿಕ್ ಆಲ್ಬಂ ಸಾಂಗ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಾಗಲಕೋಟೆಯ ಸಮಗ್ರ ಜೀವನ ವಿಕಾಸ ಸಂಸ್ಥೆಯ ಸಂಜೀವಿ ಅಂಧಮಕ್ಕಳ ವಸತಿ ಶಾಲೆಯಲ್ಲಿ ಬಿಡುಗಡೆ ಮಾಡಲಾಯಿತು.
ನಿರ್ದೇಶಕ ಸದಾಶಿವ ಹಿರೇಮಠ, ಸಂಗೀತ ನಿರ್ದೇಶಕ ರವಿ ತೇಜ, ಜಾನಪದ ಕಲಾವಿದರಾದ ಬಾಳು ಬೆಳಗುಂದಿ, ಶಿವಕಾಂತ ಪೂಜಾರಿ, ಡಿಜೆ ಅರವಿಂದ್ ಉಮರಾಣಿ, ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಳೆದ ಏಳೆಂಟು ವರ್ಷಗಳಿಂದ ಹಲವಾರು ಜನಪದ, ಭಕ್ತಿಗೀತೆ,ಸಿನಿಮಾ, ಮನರಂಜನಾತ್ಮಕ ಹಾಡುಗಳನ್ನು ನಿರ್ಮಿಸಿ ಉತ್ತರ ಕರ್ನಾಟಕದಾದ್ಯಂತ ಹೆಸರು ಗಳಿಸಿದ್ದ ಆರ್ ಟಿ ರೆಕಾರ್ಡಿಂಗ್ ಸ್ಟುಡಿಯೋ ಇದೀಗ ಹೊಸ ಕಾನ್ಸೆಪ್ಟನೊಂದಿಗೆ ಈ ಹಾಡಿನ ಆಲ್ಬಂ ಅತಿ ಕಡಿಮೆ ವೆಚ್ಚದಲ್ಲಿ ಅದ್ದೂರಿ ಗೀತೆ ನಿರ್ಮಿಸುವ ಹೊಸ ಪ್ರಯತ್ನ ಮಾಡಿದ್ದಾರೆ. ಬಾಗಲಕೋಟೆ ಉದ್ಯಮಿಗಳಾಗಿರುವ ರೇಣುಕಾ ಹಾದಿಮನಿ ಅವರು ಈ ಆಲ್ಬಂ ಗೆ ನಿರ್ಮಾಪಕರಾಗಿದ್ದಾರೆ.

ಉತ್ತರ ಕರ್ನಾಟಕದ ಹಳ್ಳಿ ಸೊಗಸು,ಸೊಗಡನ್ನು ತೋರಿಸುವ ಗುರಿ ಇಟ್ಟುಕೊಂಡ ತಂಡ ಬಾಗಲಕೋಟೆ ಜಿಲ್ಲೆಯ ಸುತ್ತಮುತ್ತಲಿನ ಭಾಗದಲ್ಲಿಯೇ ಚಿತ್ರೀಕರಣ ಮಾಡಿದ್ದಾರೆ.ಈ ಆಲ್ಬಂ ಗೀತೆ ಪ್ರೇಮಿಗಳಿಗೆ ಖುಷಿಯನ್ನು ತರಲಿದೆ ಎಂದು ತಂಡ ಅಭಿಪ್ರಾಯಪಟ್ಟಿದೆ.
ಮೊದಲ ಬಾರಿ ಆಲ್ಬಂ ನಿರ್ದೇಶನಕ್ಕಿಳಿದಿರುವ
ಜವಾರಿ ಲವ್ ಸಿನಿಮಾದ ನಿರ್ದೇಶಕ ಸದಾಶಿವ ಹಿರೇಮಠರ ನಿರ್ದೇಶನ , ರವಿ ತೇಜ ಅವರ ಮನ ಸೆಳೆಯುವ ಸಂಗೀತ ನಿರ್ದೇಶನವಿರುವ ಈ ಹಾಡಿಗೆ ತುಷಾರ್ ಮಲಗೊಂಡ ನಟಿಸಿದ್ದಾರೆ. ಶಿವಾರಂಜಿನಿ ಸಾಹಿತ್ಯ ಬರೆದೆದ್ದು,ಹಾಡಿಗೆ ಸರಿಗಮಪ ಖ್ಯಾತಿಯ ಶ್ರೀ ರಕ್ಷಾ ಆಚಾರ್ಯ ಧ್ವನಿ ನೀಡಿದ್ದಾರೆ.
ಇವರೊಂದಿಗೆ ರುಕ್ಷಾನಾ ರುಕ್ಕು ನಾಯಕಿ ನಟಿಯಾಗಿ ನಟಿಸಿದ್ದಾರೆ. ಹಲವಾರು ಚಲನ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಸದಾಶಿವ ಹಿರೇಮಠ ಅತ್ಯುತ್ತಮ ಛಾಯಾಗ್ರಹಣ ಮಾಡಿದ್ದು,ಮೋಹನ್ ಬಾಬು ರೋಣ ಅವರು ಸಹ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ಉದಯ ಆನಂದ್ ಬರ್ಕೆ ಅವರ ಸಂಕಲನ, ಬಾಗಲಕೋಟೆಯ ರಾಜು ಗೋಗಿ ಪ್ರಸಾಧನ, ಪ್ರಚಾರ ಕಲೆ ಡಾ.ಪ್ರಭು ಗಂಜಿಹಾಳ , ಡಾ .ವೀರೇಶ ಹಂಡಗಿ ನಿರ್ವಹಿಸುತ್ತಿದ್ದಾರೆ.
ಬಾಳು ಬೆಳಗುಂದಿ,ಶಿವಕಾಂತ್ ಪೂಜಾರಿ, ಬೀರಣ್ಣ ಮರಿಯಾಯಿ, ಬೊಂಬಾಟ್ ಬಸಣ್ಣ, ಜೀವಾ ಅಂಬಿಗೇರ, ಶಿವು ಅಂಬಿಗೇರ, ಡಿ ವಾಯ್ ನಾಯಕ, ಡಿಜೆ ಬೀರು, ರಾಕಿ ವಾಲ್ಮೀಕಿ, ಸಂತೋಷ್ ವಿಂತ್ರಿ, ಡಿಜೆ ಅರವಿಂದ್ ಉಮರಾಣಿ, ಇಮ್ತಾಜ್, ಪರಶು ಕೋಲಾರ, ಬಸವರಾಜ ನರೇಂದ್ರ, ಬಸು ಕೋಲಾರ, ಸುದೀಪ್ ಹಳವಾರ, ಲಗಮಣ್ಣ ಮರಿಯಾಯಿ, ಮಾಳು ನಿಪ್ಪಿನಾಳ, ಮಂಜುನಾಥ ಹೆಗ್ಗೆಣವರ, ಪ್ರಕಾಶ್ ರೂಗಿ, ಮಂಜುನಾಥ ಸಂಗಳದ, ಜಕ್ಕು ಹಿರೇಕೋಡಿ, ಬೀರಾ ಬೆನ್ನಿ, ಸಿದ್ದು ಹುಕ್ಕೇರಿ, ಭೀಮಣ್ಣ ಹಿರೇಕೋಡಿ, ಭೀರಣ್ಣ ಹಿರೇಕೋಡಿ, ಭೀಮಣ್ಣ ಕಾರತ್, ತುಕಾರಾಮ ಕಾರತ್, ಮಲ್ಲಣ್ಣ ಮಂತ್ರಿ, ಮುತ್ತಣ್ಣ ಬುದಿಹಳ್ಳಿ, ನಾಗರಾಜ್ ಹೊನ್ನ ಸಿಂಗಾರಿ ಮುಂತಾದವರು ‘ಮುದ್ದು ಮಾಡೋ ಗೆಳೆಯ’ ಮ್ಯೂಸಿಕ್ ಆಲ್ಬಂ ಸಾಂಗ್ ಗೆ ಸಹಕಾರ ನೀಡಿದ್ದು
ಈಗಾಗಲೇ ಚಿತ್ರೀಕರಣ ಮುಗಿಸಿ, ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿ, ಸಾಂಗ್ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ತಿಂಗಳಿನ ಕೊನೆಯ ವಾರದಲ್ಲಿ ಆಲ್ಬಂ ಬಿಡುಗಡೆಯಾಗಲಿದೆ.

About the author

Adyot

Leave a Comment