ಹಿಟ್ಲರ್ ಚಿತ್ರದ ಎರಡನೇ ಹಾಡು ಬಿಡುಗಡೆ

ಆದ್ಯೋತ್ ಸಿನೇಮಾ ಸುದ್ದಿ
ಗಾನಶಿವ ಮೂವ್ಹೀಸ್ ಬ್ಯಾನರ್ ಅಡಿಯಲ್ಲಿ ಮಮತಾ ಲೋಹಿತ್ ನಿರ್ಮಿಸುತ್ತಿರುವ ಹಿಟ್ಲರ್ ಕನ್ನಡ ಚಲನಚಿತ್ರದ ಎರಡನೆಯ ಹಾಡಿನ ಬಿಡುಗಡೆಯ ಕಾರ್ಯಕ್ರಮ ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು
ಸಮಾರಂಭದಲ್ಲಿ ಚಿತ್ರದ ನಾಯಕ ನಟ ಲೋಹಿತ್, ನಿರ್ದೇಶಕ ಕಿನ್ನಾಳರಾಜ್, ನಟರಾದ ಮನಮೋಹನ್ ರೈ, ನಂದನ್ ,ಅರ್ಜುನ ಇಟಗಿ, ಕೆ.ಬಿ.ಈಶ್ವರ್ ಅವರ ಜೊತೆಗೆ ಬಳ್ಳಾರಿಯ ಗಣ್ಯ ವ್ಯಕ್ತಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈಗಾಗಲೇ ಟೀಸರ್ ದಿಂದ ಸದ್ದು ಮಾಡಿರುವ ಹಿಟ್ಲರ್ ಚಿತ್ರ ಹಡುಗಳ ಮೂಲಕವೂ ಗಮನ ಸೆಳೆಯುತ್ತಿದೆ. ಜನರನ್ನು ಚಲನಚಿತ್ರದತ್ತ ಸೆಳೆಯುವ ಉದ್ದೇಶದಿಂದ ಚಿತ್ರತಂಡ ಹಲವಾರು ಊರುಗಳಲ್ಲಿ ,ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯಕ್ರಮ ನಡೆಸಲಿದೆ. ಮುಂದಿನ ದಿನಗಳಲ್ಲಿ ಮೈಸೂರು,ಹುಬ್ಬಳ್ಳಿ, ಮಾನ್ವಿ,ಕೊಪ್ಪಳ ಹೀಗೆ ಅನೇಕ ಕಡೆ ಪ್ರಯಾಣ ಬೆಳಸಿ ಅಭಿಮಾನಿಗಳನ್ನು ತಲುಪುವ ಪ್ರಯತ್ನ ಮಾಡುತ್ತಿದೆ.

ಚಿತ್ರದಲ್ಲಿ ನಾಯಕನಾಗಿ ಲೋಹಿತ್, ನಾಯಕಿಯಾಗಿ ಸಸ್ಯ, ಬಲ ರಾಜವಾಡಿ, ವೈಭವ, ನಾಗರಾಜ್, ವಿಜಯ ಚಂಡೂರ್, ವರ್ಧನ್, ಗಣೇಶರಾವ್, ವೇದಾ ಹಾಸನ, ಶಶಿಕುಮಾರ ಮೊದಲಾದವರು ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಕನ್ನಡ ಕೋಗಿಲೆ ಖ್ಯಾತಿ ಅರ್ಜುನ್ ಇಟಗಿ ಮೊದಲಬಾರಿಗೆ ತೆರೆಗೆ ಬರುತ್ತಿದ್ದಾನೆ.
ಛಾಯಾಗ್ರಹಣ ಜಿ.ವಿ.ನಾಗರಾಜ್ ಕಿನ್ನಾಳ, ಸಂಕಲನ ಗಣೇಶ್ ತೋರಗಲ್, ಸಾಹಸ ಚಂದ್ರು ಬಂಡೆ, ನೃತ್ಯ ಅರುಣ್ ರೈ, ಪಿಆರ್ ಓ ಆರ್.ಚಂದ್ರಶೇಖರ, ಪ್ರಚಾರಕಲೆ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ ,
ಕಥೆ, ಚಿತ್ರಕಥೆ , ಸಂಭಾಷಣೆ ಜೊತೆಗೆ ನಿರ್ದೇಶನವನ್ನು ಕಿನ್ನಾಳರಾಜು ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರು ಪರ್ವೇಶ್ ಸಿಂಗ್, ಶ್ರೀಮತಿ ಮಮತಾ ಲೋಹಿತ್ ನಿರ್ಮಾಪಕರಾಗಿದ್ದಾರೆ. ಚಿತ್ರವು ಬಿಡುಗಡೆಗೆ ಸಿದ್ದವಾಗಿದ್ದು ಬರುವ ಏಪ್ರಿಲ್ 9 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

About the author

Adyot

Leave a Comment