ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಳ್ಳಿಬೈಲ್ ಸರಕಾರಿ ಪ್ರೌಢಶಾಲೆಯ ಶಿಕ್ಷಕರು,ವಿದ್ಯಾರ್ಥಿಗಳ ಮೂಲಕ ನುಡಿಗನ್ನಡ ಬಳಗ ಶಿರಸಿ,ಪೂರ್ಣಿಮಾ ಸಾಹಿತ್ಯ ವೇದಿಕೆ ಸಿದ್ದಾಪುರ,ಕ.ಸ.ಸಾ.ಕಲಾ ಮತ್ತು ಸಾಂಸ್ಕøತಿಕ ಸಂಘದ ಸಹಯೋಗದಲ್ಲಿ ನಿರ್ಮಿಸಿದ ಮುತ್ತಿನಸತ್ತಿಗೆ ಎನ್ನುವ 9ನೇ ತರಗತಿಯ ಕಲಿಕಾ ಕಿರುಚಿತ್ರವನ್ನು ಸೋಮವಾರ ಯೂಟ್ಯೂಬ್ಗೆ ಅಂತರ್ಜಾಲದ ಮೂಲಕ ಬಿಡುಗಡೆಗೊಳಿಸಲಾಯಿತು.
ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ದಿವಾಕರ ಶೆಟ್ಟಿ ಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿ, ಕೊವಿಡ್ ಸಂದಿಗ್ದತೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕ ಜ್ಞಾನ ಹಂಚಲು ಟಾಲ್ಸ್, ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಕಿರುಚಿತ್ರವನ್ನು ನಿರ್ಮಿಸಲಾಗಿರುವುದು ಶ್ಲಾಘನೀಯವಾಗಿದೆ ಇದರಿಂದ ಶೈಕ್ಷಣಿಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದೆ. ಎಂದು ಹೇಳಿದರು.
ಶಿರಸಿ ಡಯಟ್ನ ಪ್ರಾಂಶುಪಾಲ ಡಿ.ಆರ್.ನಾಯ್ಕ ಮಾತನಾಡಿ,ಹಳ್ಳಿಬೈಲ್ ಪ್ರೌಢಶಾಲೆ ಪ್ರತಿವರ್ಷ ಎಸ್ಎಸ್ಎಲ್ಸಿಯಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿದೆ ಈಗ ಇಂತಹ ಅಪರೂಪದ ಕಾರ್ಯದ ಮೂಲಕ ಜ್ಞಾನ ಹಂಚಲು ಹೊರಟಿವುದು ಮೆಚ್ಚುವಂತಹ ಪ್ರಯತ್ನವಾಗಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಮುಖ್ಯಶಿಕ್ಷಕ ಉಮೇಶ ಹೆಗಡೆ ಅಭಿನಂದಿಸಿದರು.ಪಾರ್ವತಿ ಹೆಗಡೆ ಪ್ರಾರ್ಥನೆ ಹಾಡಿದರು. ವಿಷ್ಣು ಪಟಗಾರ ಜೊಯ್ಡಾ ಸ್ವಾಗತಿಸಿದರು.ಸಿ.ಪಿ.ಹೆಗಡೆ ವಂದನಾರ್ಪಣೆ ಮಾಡಿದರು.
ಕವಿ ರಾಘವಾಂಕ ನಿನ್ನ ಮುತ್ತಿನ ಸತ್ತಿಗೆಯನ್ನಿತ್ತು ಸಲಹು ಕೃತಿಯನ್ನು ಆಧಾರವಾಗಿಟ್ಟುಕೊಂಡು ಶಿಕ್ಷಕ ಗೊಪಾಲ ನಾಯ್ಕ ಭಾಶಿ ರಚಿಸಿರುವ ಕೃತಿಯನ್ನು ರಾಘವೇಂದ್ರ ನಾಯ್ಕ ನಿರ್ದೇಶಿಸಿಸಿದ್ದಾರೆ ಹಳ್ಳಿಬೈಲ್ ಪ್ರೌಢಶಾಲಾ ವಿದ್ಯಾರ್ಥಿಗಳು ನಟಿಸಿದ್ದಾರೆ.
ಗೂಗಲ್ ಮೀಟ್ನಲ್ಲಿ 96 ಶಿಕ್ಷಕರು,ಸಾಹಿತಿಗಳು,ವಿದ್ಯಾರ್ಥಿಗಳು ಭಾಗವಹಿಸಿದ್ದರು. ಲೇಖಕಿ ಶಿವಲೀಲಾ ಯಲ್ಲಾಪುರ, ಬಿ.ಗಾಯತ್ರಿ ರಾಯಚೂರು,ಭಾರತಿ ನಲವಾಡ ಹಳಿಯಾಳ,ಸತೀಶ ಶಿವಮೊಗ್ಗ,ಲಕ್ಷ್ಮಣ ಸಾಗರ ಅನಿಸಿಕೆ ವ್ಯಕ್ತಪಡಿಸಿದರು
#####
ಆದ್ಯೋತ್ ಕೊವಿಡ್ ನ್ಯೂಸ್:
ಸಿದ್ದಾಪುರದಲ್ಲಿ ಕೊವಿಡ್ ಅರ್ಧಶತಕ ಪ್ರಕರಣ: ಒಂದು ಸಾವು
ಸಿದ್ದಾಪುರ ತಾಲೂಕಿನಲ್ಲಿ ಕೊವಿಡ್ ಅರ್ಭಟ ಮುಂದುವರಿದಿದ್ದು ಬುಧವಾರ 50 ಪ್ರಕರಣ ದಾಖಲಾಗಿದ್ದು ಹಾರೆಕೊಪ್ಪ ಗ್ರಾಮದ 71 ವಯಸ್ಸಿನ ವ್ಯಕ್ತಿಯೊಬ್ಬರು ಕೊವಿಡ್ ನಿಂದ ಮರಣ ಹೊಂದಿದ್ದಾರೆ.
ಒಟ್ಟೂ 345 ಸಕ್ರೀಯ ಕೊವಿಡ್ ಪ್ರಕರಣಗಳಿವೆ.ಇಲ್ಲಿಯವರೆಗೆ 13 ಜನರು ಸಾವನ್ನಪ್ಪಿದ್ದಾರೆ.308 ಜನರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದರೆ,2ಜನರು ಖಾಸಗಿ ಆಸ್ಪತ್ರೆಯಲ್ಲಿದ್ದಾರೆ.3ಜನರು ಬೇರೆ ಜಿಲ್ಲೆಯಲ್ಲಿಯೂ,19 ಜನರು ಸರಕಾರಿ ಆಸ್ಪತ್ರೆಯಲ್ಲಿ ಕೊಂಡ್ಲಿ ಕೊವಿಡ್ ಕೇಂದ್ರದಲ್ಲಿ 13 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
#####
ಅನವಶ್ಯಕ ಓಡಾಟ ನಿಲ್ಲಿಸಿ- ಮಾಸ್ಕ್ ಧರಿಸಿ-ಸ್ಯಾನಿಟೈಸರ್ ಬಳಸಿ- ಅಂತರ ಕಾಪಾಡಿ- ಕೊವಿಡ್ ಓಡಿಸಿ
###