“ಬ್ಲಡ್ ಹ್ಯಾಂಡ್” ಚಲನಚಿತ್ರ ಮೊದಲಹಂತದ ಚಿತ್ರೀಕರಣ ಮುಕ್ತಾಯ

ಆದ್ಯೋತ್ ಸಿನೇಮಾ ಸುದ್ದಿ:
ಆರ್.ಆರ್.ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಬ್ಲಡ್ ಹ್ಯಾಂಡ್‘ ಕನ್ನಡ ಚಲನಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿತು.
ಬ್ಲಡ್ ಹ್ಯಾಂಡ್‘ ಶೀರ್ಷಿಕೆ ರಕ್ತಸಿಕ್ತವಾದರೂ ಇದರಲ್ಲಿ, ಸಂಬಂಧಗಳು ತನ್ನ ಸ್ವಾರ್ಥಕ್ಕಾಗಿ ಬದಲಾದಾಗ ಹೇಗೆ ತಿರುವು ಪಡೆದುಕೊಳ್ಳುತ್ತದೆ ,ಒಂದು ಅನಿರೀಕ್ಷಿತವಾದ ಘಟನೆಗಳಿಂದ ಕೈಗೆ ರಕ್ತ ಎಂಬ ಕೆಂಪು ದ್ರವ ಅಂಟಿಕೊಂಡರೆ ಅದು ಹೇಗೆ ಬೆಳೆದು ದೊಡ್ಡದಾಗಿ, ನದಿಯಂತೆ ಹರಿಯುತ್ತದೆ, ಪ್ರೀತಿಸುವ ಎರಡು ಹೃದಯಗಳ ಸಂಬಂಧ ಗಟ್ಟಿಯಾಗಿದ್ದರೆ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಸ್ವಾರ್ಥವಲ್ಲದ ಹೃದಯಗಳು ವ್ಯವಸ್ಥೆ ಎಂಬ ಬಂಧನದ ಬೆಂಕಿಯಲ್ಲಿ ಬೆಂದು ಹೇಗೆ ವಿಲ ವಿಲ ಅಂತ ಒದ್ದಾಡುತ್ತಾರೆ ಎಂಬುದೇ ಈ ಚಿತ್ರದ ಸಾರಾಂಶ.

ಇದರಲ್ಲಿ ಮಚ್ಚು ಲಾಂಗುಗಳಿದ್ದರೂ ರೌಡಿಗಳಿಗೆ ಸಂಬಂಧಪಟ್ಟದ್ದಲ್ಲ. ಸಂಬಂಧಗಳಿದ್ದರೂ ಸಂಸಾರಿಕ ಕಥೆಯಲ್ಲ. ಲವ್ ಸ್ಟ್ಟೋರಿ ಆದರೂ ಜಾತಿಗೆ ಸಂಬಂಧಪಟ್ಟ ಮರ್ಯಾದಾ ಹತ್ಯೆಯ ಕಥೆಯಲ್ಲ.ಯಾವುದೇ ಸ್ವಾರ್ಥಗಳಿಲ್ಲದ ಎರಡು ಹೃದಯಗಳು ವ್ಯವಸ್ಥೆ ಎಂಬ ಕೋಪದಲ್ಲಿ ಬಿದ್ದು ಒದ್ದಾಡುವ ಕಥೆ. ಕೊನೆಯಲ್ಲಿ ಒಳ್ಳೆಯದು ಗೆಲ್ಲುವುದೋ ಅಥವಾ ಕೆಟ್ಟದ್ದು ಗೆಲ್ಲುವುದೋ ಎಂಬುದು ಈ ಚಿತ್ರದಲ್ಲಿ ಹೇಳಲಾಗಿದೆ. ಅದನ್ನು ಚಿತ್ರಮಂದಿರದಲ್ಲೇ ನೋಡಿ ತಿಳಿದುಕೊಳ್ಳಬೇಕು ಎಂದು ನಿರ್ದೇಶಕ ಆದಿ ಹೇಳುತ್ತಾರೆ.
ಪ್ರೇಮ ಕಥೆಯ ಜೊತೆಗೆ ದ್ವೇಷದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಾಯಕ ನಟನಾಗಿ ಸುಮಿತ್ ನಾಯಕಿಯಾಗಿ ಶೃತಿ ಪಾಟೀಲ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ‘ಹವಾಲಾ’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿರುವ ಅಮಿತ್ ರಾವ್ ಈ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ.
ಉಳಿದಂತೆ ಎಚ್ ಎಂ ಟಿ ವಿಜಯ್, ಆಲಿಶಾ, ಶಿಲ್ಪಾ ಮೂರ್ತಿ, ಸುನಂದಾ ಶರಣಪ್ಪ, ಮಂಜುಳಾ ರೆಡ್ಡಿ, ಶಿಲ್ಪಾ ಗಿರೀಶ್, ನಿಸರ್ಗ, ರಾಜೇಶ್, ಪಾವಗಡ ಮಂಜು, ಚಿಲ್ಲರ್ ಮಂಜು ಮುಂತಾದವರು ಅಭಿನಯಿಸುತ್ತಿದ್ದಾರೆ.
ಒಟ್ಟು ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಈಗಾಗಲೇ ಬೆಂಗಳೂರು ನಗರ ಸುತ್ತಮುತ್ತ ಶೇಕಡಾ ಐವತ್ತರಷ್ಟು ಚಿತ್ರೀಕರಣ ಮುಗಿಸಲಾಗಿದೆ. ಉಳಿದ ಭಾಗವನ್ನು ಹಳ್ಳಿಯ ವಾತಾವರಣದಲ್ಲಿ ಚಿತ್ರಿಸಲು ನಿರ್ದೇಶಕರು ತೀರ್ಮಾನಿಸಿದ್ದಾರೆ. .ನೆಲಮಂಗಲ,ರಾಮನಗರ,ಕೋಲಾರ, ಚೆನ್ನಪಟ್ಟಣ ಸುತ್ತಮುತ್ತಲಿನಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಗಿಸಿ, ಹಾಡಿನ ಚಿತ್ರೀಕರಣವನ್ನು ಕೊಡಚಾದ್ರಿ, ಚಿಕ್ಕಮಗಳೂರು,ಮಂಗಳೂರು,ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವದು ಎಂದು ನಿರ್ದೇಶಕ ಜೆ.ಕೆ ಆದಿ ತಿಳಿಸಿದ್ದಾರೆ.

ಬಿ.ಚಂದ್ರು ಛಾಯಾಗ್ರಹಣ,ಸಂಗೀತ ಸತೀಶ್ ಬಾಬು, ಸಾತ್ಯವನ್ನು ಗೌಸ್ ಪೀರ್,ಜೆ.ಕೆ.ಆದಿ,ಸಂಕಲನ ಶ್ರೀನಿವಾಸ್ ಪಿ.ಬಾಬು, ವಿಕ್ರಂ ಸಾಹಸ, ಕೊರಿಯೋಗ್ರಫಿ ಮನು, ಪಿಆರ್‌ಓ ವಿಜಯಕುಮಾರ,ಪ್ರಸಾಧನ ಹರೀಶ್ ಕುಮಾರ್, ಡಾ.ಪ್ರಭು ಗಂಜಿಹಾಳ ಮತ್ತು ಡಾ.ವೀರೇಶ್ ಹಂಡಗಿ ಪ್ರಚಾರಕಲೆ,ಹಿರಿಯ ನಿರ್ದೇಶಕರಾದ ಎಸ್.ನಾರಾಯಣ ,ದಿನೇಶ್ ಬಾಬು ಮೊದಲಾದವರ ಬಳಿ ಕೆಲಸ ಮಾಡಿ, ಈ ಹಿಂದೆ ‘ಬಾನು ವೆಡ್ಸ್ ಭೂಮಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಜೆ.ಕೆ ಆದಿ ಈಗ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಭಾರತಿ ಕೆ, ಓಂಕಾರ ಶ್ರೀನಿವಾಸನ್, ಜಯ ಬಾಬು ಈ ಚಿತ್ರದ ನಿರ್ಮಾಪಕರಾಗಿದ್ದಾರೆ
.####################
ರವಿವಾರ ಸಿದ್ದಾಪುರದಲ್ಲಿ ರಿಂಗಿನಾಟ ನಾಟಕ ಪ್ರದರ್ಶನ
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಶಂಕರಮಠದಲ್ಲಿ ರವಿವಾರ ಸಂಜೆ 6.30ಕ್ಕೆ ನಾಟಕ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿರುವ ಗಣಪತಿ ಹೆಗಡೆ ಹುಲಿಮನೆ ಸಾರಥ್ಯದ ರಂಗಸೌಗಂಧ ಸಿದ್ದಾಪುರ ತಂಡದವರಿಂದ ರಂಗಸಂಚಾರ2020-21 ಪ್ರಯುಕ್ತ ಬರ್ಟೋಲ್ಟ್ ಬ್ತೆಷ್ಟ್ ರವರ ದಿ ಕಕೇಷಿಯನ್ ಚಾಕ್ ಸರ್ಕಲ್ ಆಧಾರಿತ ರಿಂಗಿನಾಟ ನಾಟಕ ಪ್ರದರ್ಶನ ನಡೆಯಲಿದೆ.

About the author

Adyot

Leave a Comment