ಬನವಾಸಿ : ರಾಜ್ಯದಲ್ಲಿ ಭ್ರಷ್ಟಾಚಾರ ಕಿತ್ತು ತಿನ್ನುತ್ತಿದೆ. ಸರಕಾರದ ಕೆಲಸ ಸರಿಯಾದ ಸಮಯದಲ್ಲಾಗಲ್ಲ, ಪರಿಹಾರ ಪಡೆಯಲು ಕೆಲವೆಡೆ ಹಣ ನೀಡಬೇಕಾದ ಕೆಲಸಗಳೂ ನಡೀತಿವೆ ಅಂತ ಸಿ.ಎಂ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಬನವಾಸಿಯಲ್ಲಿ ನಡೆಯುತ್ತಿರೋ ಕದಂಬೋತ್ಸವ ಉದ್ಘಾಟಿಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಭೃಷ್ಟಾಚಾರ ಜಾಸ್ತಿಯಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಉನ್ನತ ಅಧಿಕಾರಿಗಳ ಸಭೆ ನಡೆಸಲಾಗುವುದು. ಭ್ರಷ್ಟ ಅಧಿಕಾರಿಗಳಿಗೆ ಸರಿಯಾದ ಶಿಕ್ಷೆ ಹಾಗೂ ಅಗತ್ಯ ಬಿದ್ದರೆ ಕೆಲಸದಿಂದ ತೆಗೆಯಲಾಗುವುದು. ಭ್ರಷ್ಟಾಚಾರದ ವಿರುದ್ಧ ಸೂಕ್ತ ಕಾನೂನು ಜಾರಿಗೊಳಿಸಲಾಗುವುದು. ಸರಕಾರಿ ನೌಕರರು ಸುಧಾರಣೆಯಾಗದಿದ್ರೆ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ ಅಂತ ಭ್ರಷ್ಟಾಚಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.
ಬನವಾಸಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ ಕ್ಷೇತ್ರ. ಕದಂಬೋತ್ಸವಕ್ಕೆ ಕರ್ನಾಟಕ ಸರಕಾದ ಮರುಜೀವ ನೀಡಿದೆ. ರಾಜ್ಯದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಕೆಲಸ ನಡೆಯಲಿದೆ. ಡಾ.ಸುಧಾಮೂರ್ತಿಯವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ಕೆಲಸ ಮಾಡ್ತಿದ್ದೇವೆ. ದಲಿತ ಹೋರಾಟಕ್ಕೆ ಕಾವ್ಯದ ಮೂಲಕ ಧ್ವನಿ ಎತ್ತಿದವರು ಡಾ. ಸಿದ್ಧಲಿಂಗಯ್ಯ. ಪಂಪ ಪ್ರಶಸ್ತಿಯನ್ನು ದಲಿತ ಕವಿ ಅನ್ನೋ ಖ್ಯಾತಿಯ ಸಿದ್ದಲಿಂಗಯ್ಯ ಅವರಿಗೆ ನೀಡಿರೋದು ಉತ್ತಮ ಕೆಲಸವಾಗಿದೆ ಅಂದರು.