ಕೆಪಿಸಿಸಿ 41ನೇ ಅಧ್ಯಕ್ಷರಾಗಿ ಡಿಕೆಶಿ ಪದಗ್ರಹಣ

ಆದ್ಯೋತ್ ಸುದ್ದಿನಿಧಿ:
ಬೆಂಗಳೂರಿನ ಕ್ವೀನ್ಸ್​ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಡಿ.ಕೆ.ಶಿವಕುಮಾರ ಪದಗ್ರಹಣ ಸಮಾರಂಭ ನಡೆಯಿತು

ನೂತನ ಕರ್ನಾಟಕ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್​ ಪ್ರಮಾಣ ವಚನ ಸ್ವೀಕರಿಸಿದರು. ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​​ ಪಕ್ಷದ ಧ್ವಜವನ್ನು
ಡಿ.ಕೆ ಶಿವಕುಮಾರ್​​ ರಿಗೆ ಹಸ್ತಾಂತರಿಸುವ ಮೂಲಕ ಕೆಪಿಸಿಸಿ ಸಾರಥ್ಯವನ್ನು ಮುನ್ನಡೆಸುವಂತೆ ಶುಭಾಶಯ ಕೋರಿದರು.
ಸಮಾರಂಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ,ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ
ಸೇರಿದಂತೆ ಹಲವಾರು ಹಿರಿಯ ನಾಯಕರು ಉಪಸ್ಥಿತರಿದ್ದರು.
ಸಿದ್ದರಾಮಯ್ಯ ಕೇಂದ್ರಸರಕಾರ ಹಾಗೂ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಪಕ್ಷವನ್ನು ಮುನ್ನಡೆಸುವಲ್ಲಿ ಡಿ.ಕೆ.ಶಿವಕುಮಾರ್ ಗೆ ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದರು.

ಅಧ್ಯಕ್ಷ ಪದವಿ ಸ್ವೀಕರಿಸಿದ ಡಿ.ಕೆ.ಶಿವಕುಮಾರ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿದ್ದರಾಮಯ್ಯ ಕಾಲಿಗೆರಗಿ ಆಶೀರ್ವಾದ ಪಡೆದರು.ಪಕ್ಷವನ್ನು ಕಟ್ಟಲು ಚಪ್ಪಡಿ ಕಲ್ಲಾಗಿ ಕೆಲಸ ಮಾಡುತ್ತೇನೆ ಎಂದ ಘೋಷಿಸಿದರು
ರಾಜ್ಯದಲ್ಲಿ ಸುಮಾರು ಹತ್ತು ಸಾವಿರ ಕಡೆಗಳಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಲು ಅನುಕೂಲಮಾಡಿಕೊಡಲಾಗಿತ್ತು
10-12ಲಕ್ಷ ಜನರು ಡಿಕೆಶಿ ಅಧ್ಯಕ್ಷ ಪದವಿ ಸ್ವೀಕಾರ
ಕಾರ್ಯಕ್ರಮವನ್ನು ವೀಕ್ಷಿಸಿದರು.
####

ಉತ್ತರಕನ್ನಡ ಜಿಲ್ಲೆಯ ಹಲವು ತಾಲೂಕಿನಲ್ಲಿ ಬೂತ್ ಮಟ್ಟದಲ್ಲಿ
ಪದವಿ ಸ್ವೀಕಾರ ಸಮಾರಂಭವನ್ನು ವೀಕ್ಷಿಸಿದರು
ಸಿದ್ದಾಪುರ ಮನಮನೆಯಲ್ಲಿ ಜಿಪಂ ಸದಸ್ಯೆ ಸುಮಂಗಲಾ ನಾಯ್ಕ, ಮಾಜಿ ತಾಪಂ ಸದಸ್ಯ ವಸಂತ ನಾಯ್ಕ,ಹಾಲಿ ತಾಪಂ ಸದಸ್ಯ ನಾಸೀರ್ ಖಾನ್ ಪದವಿ ಸಮಾರಂಭ ಕಾರ್ಯಕ್ರಮವನ್ನು ವೀಕ್ಷಿಸಿದರು.

ಸಿದ್ದಾಪುರ ಪಟ್ಟಣದ ಬಾಲಭವನದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು
ಹಿರಿಯ ಕಾಂಗ್ರೆಸ್ ಮುಖಂಡ ಷಣ್ಮುಖ ಗೌಡ ಕಲ್ಲೂರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾಂಗ್ರೆಸ್ ಹಿರಿಯ ಮುಖಂಡ ಆರ್.ಎಂ ಹೆಗಡೆ ಬಾಳೇಸರ,ಹನುಮಂತ ನಾಯ್ಕ ಹೊಸೂರು,ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ತಾಲೂಕು ಅಧ್ಯಕ್ಷ ಸುನಿಲ ಫರ್ನಾಂಡಿಸ್,ಮಹಿಳಾ ಅಧ್ಯಕ್ಷೆ ಸೀಮಾ ಹೆಗಡೆ,ಕೆಪಿಸಿಸಿ ವೀಕ್ಷಕ ಶ್ರೀನಿವಾಸ ಹಳ್ಳಳ್ಳಿ,ಜಿಲಾ ವೀಕ್ಷಕ ದೀಪಕ ದೊಡ್ಡೂರು ಜಗದೀಶ ನಾಯ್ಕ ಹೊಸೂರು ಮುಂತಾದವರು ಉಪಸ್ಥಿತರಿದ್ದರು

###

ಚಿತ್ರದುರ್ಗ ಜಿಲ್ಲೆಯ ಭರಮಸಾಗರದಲ್ಲಿ ಮಾಜಿ ಜಿಪಂ ಉಪಾಧ್ಯಕ್ಷ ಹೆಚ್.ಎನ್‌‌.ತಿಪ್ಪೇಸ್ವಾಮಿ ದೀಪ ಬೆಳಗಿಸುವ ಮೂಲಕ ಡಿ.ಕೆ.ಶಿವಕುಮಾರ ಪದಗ್ರಹಣ ವೀಕ್ಷಣಾ
ಸಮಾರಂಭಕ್ಕೆ ಚಾಲನೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ದುರ್ಗೇಶ್ ಪೂಜಾರಿ,ಕಾಂಗ್ರೆಸ್ ಮುಖಂಡರಾದಹೆಚ್.ಎನ್‌‌.ಪ್ರವೀಣ,ಎನ್.ಹೆಚ್.ಮಂಜುನಾಥ,ಮಾಜಿ ತಾಪಂ ಅಧ್ಯಕ್ಷ ವೆಂಕಟೇಶ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment