ಕೊರೊನಾ ಕರ್ಫ್ಯೂ : ಸಿದ್ದಾಪುರ ಸಂಪೂರ್ಣ ಬಂದ್

ಸಿದ್ದಾಪುರ : ದೇಶದೆಲ್ಲೆಡೆ ನಿನ್ನೆ ಮಧ್ಯರಾತ್ರಿ 12 ಗಂಟೆಗೆ ಘೋಷಿಸಿದ ಲಾಕ್ ಡೌನ್ ಗೆ ಮೊದಲ ದಿನ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಇಂದು ಯುಗಾದಿ ಹಬ್ಬವಾಗಿದ್ದರೂ ಕೂಡ ಜನರು ಹೊರಗಡೆ ಬರದೆ, ಕರ್ಫ್ಯೂ ಗೆ ಉತ್ತಮ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಸಿದ್ದಾಪುರದ ಮಾರ್ಕೆಟ್ ಗಳು, ಬಸ್ ಸ್ಟ್ಯಾಂಡ್ ಎಲ್ಲಾ ಬಿಕೋ ಎನ್ನುತ್ತಿದೆ. ಬಸ್ ಸ್ಟ್ಯಾಂಡ್ ನಲ್ಲಿ ಕೊರೊನಾ ಹೆಲ್ಪ್ ಡೆಸ್ಕ್ ಇದ್ದು, ಬೆಂಗಳೂರಿನಿಂದ ಬಂದ 13 ಜನ ಪರೀಕ್ಷೆಗೆ ಒಳಗಾದರು. ಅಲ್ಲಲ್ಲಿ ಮೆಡಿಕಲ್ ಗಳು ತೆರೆದಿದ್ದು, ಕೆಲವು ಜನ ಔಷಧಿ ಖರೀದಿಗೆ ಬಂದು ಹೋಗಿದ್ದು ಬಿಟ್ಟರೆ ಸಿದ್ದಾಪುರ ಸಂಪೂರ್ಣ ಬಂದ್ ಆಗಿದೆ. ಪೊಲೀಸರು ಆಗಾಗ ಸೈರನ್ ಹಾಕಿ ಪಟ್ಟಣದಲ್ಲಿ ಸಂಚಾರ ನಡೆಸುತ್ತಿದ್ದು, ತಾಲೂಕಾ ಆಡಳಿತ ತೆಗೆದುಕೊಂಡ ಕ್ರಮಗಳು ಪರಿಣಾಮಕಾರಿಯಾಗಿವೆ. ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲೂ ದಿನಸಿ ಹಾಗೂ ತರಕಾರಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಂಜೆ 4 ರಿಂದ 8 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿ ನಡೆಸಬಹುದಾಗಿದೆ. ಆದರೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಹಾಗೂ ತಾಲೂಕಾ ಅಡಳಿತಗಳು ಎಚ್ಚರಿಕೆ ನೀಡಿವೆ.

About the author

Adyot

Leave a Comment