ಆದ್ಯೋತ್ ನ್ಯೂಸ್ ಡೆಸ್ಕ್ : ಕಳೆದ 2 ದಿನಗಳಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯ ಜನತೆಗೆ ಮತ್ತೆ ಆತಂಕ ಪ್ರಾರಂಭವಾಗಿದೆ. ಕಂಟೇನ್ಮೆಂಟ್ ಜೋನ್ ಹೊರತುಪಡಿಸಿ ಬೇರೆಡೆ 1 ಪ್ರಕರಣ ಕಂಡುಬಂದಿದ್ದು ಚಿಂತೆಗೀಡುಮಾಡಿದೆ.
ಇಂದು ಜಿಲ್ಲೆಯಲ್ಲಿ 2 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯ ಭಟ್ಕಳ ಹಾಗೂ ಕುಮಟಾ ದಲ್ಲಿ ತಲಾ 1 ಪ್ರಕರಣ ದಾಖಲಾಗಿದೆ. ಇದರೊಂದಿಗೆ ಕುಮಟಾ ತಾಲೂಕು ಖಾತೆ ತೆರೆದಂತಾಗಿದೆ. ಈ ಹಿಂದೆ ಜಿಲ್ಲೆಯ ಭಟ್ಕಳ ಬಿಟ್ಟು ಬೇರೆಲ್ಲೂ ಸೋಂಕು ಇಲ್ಲವಾಗಿತ್ತು. ಈಗ ಕುಮಟಾ ದಲ್ಲಿ ಪ್ರಕರಣ ಪತ್ತೆಯಾಗುವುದರೊಂದಿಗೆ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಕುಮಟಾ ದ ವನ್ನಳ್ಳಿ ನಿವಾಸಿಯಲ್ಲಿ ಪ್ರಕರಣ ಪತ್ತೆಯಾಗಿದ್ದು, ಸೋಂಕಿತ ಮಹಾರಾಷ್ಟ್ರದ ರತ್ನಗಿರಿಯಿಂದ ಮೇ 5ರಂದು ಬಂದಿದ್ದರು. ಅವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು.