ಆದ್ಯೋತನ್ಯೂಸ್: ಭಟ್ಕಳ ಮೂಲದ 22 ವರ್ಷದ ಯುವಕನಲ್ಲಿ ಕೊರೊನಾ ಸೊಂಕಿರುವುದು ದೃಢಪಟ್ಟಿದ್ದು ರಾಜ್ಯದಲ್ಲಿ ಕೊರೊನಾ ಸೊಂಕಿರುವವರ ಸಂಖ್ಯೆ 26ಕ್ಕೆ ಏರಿದಂತಾಗಿದೆ.
ದಿನಾಂಕ 19ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಯುವಕನಲ್ಲಿ ಸೊಂಕಿನ ಲಕ್ಷಣ ಕಂಡುಬಂದಿದ್ದರಿಂದ ನಿಗಾ ಘಟಕದಲ್ಲಿಟ್ಟು ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಭಾನುವಾರ ವರದಿ ಬಂದಿದ್ದು ಯುವಕನಲ್ಲಿ ಕೊರೊನಾ ಸೊಂಕಿರುವುದು ಖಚಿತವಾಗಿದೆ. ಯುವಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಇಡಲಾಗಿದೆ. ಈ ಯುವಕ ಬಂದಿರುವ ವಿಮಾನದಲ್ಲಿ 165 ಪ್ರಯಾಣಿಕರು ಬಂದಿದ್ದು, ಅವರ ಪತ್ತೆ ಕಾರ್ಯದಲ್ಲಿ ಜಿಲ್ಲಾಡಳಿತ ಕಾರ್ಯನಿರತವಾಗಿದೆ ಅಂತ ಮಂಗಳೂರು ಡಿಸಿ ಸಿಂಧೂ ಬಿ ರೂಪೇಶ್ ತಿಳಿಸಿದ್ದಾರೆ.
😶😲