ಶನಿವಾರ ಸಿದ್ದಾಪುರಕ್ಕೆ ಬರಲಿದೆ ಹೊಸ ಅಂಬ್ಯುಲೆನ್ಸ್: ಶಿವರಾಮ ಹೆಬ್ಬಾರ ಘೋಷಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಸರಕಾರಿ ಆಸ್ಪತ್ರೆಗೆ ಕಾರ್ಮಿಕ ಮತ್ತು ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ ಭೇಟಿ ನೀಡಿ ಕೊವಿಡ್ ವ್ಯವಸ್ಥೆಯನ್ನು ಪರಿಶಿಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮ ಹೆಬ್ಬಾರ,ಕಳೆದ ವರ್ಷ ಸಿದ್ದಾಪುರಕ್ಕೆ ಭೇಟಿ ನೀಡಿದ್ದಾಗ ತಾಲೂಕಿಗೆ ವೆಂಟಿಲೆಟರ್ ಅಂಬ್ಯುಲೆನ್ಸ್ ನೀಡುತ್ತೇನೆ ಎಂದು ಹೇಳಿದ್ದೆ ಕೆಲವು ತಾಂತ್ರಿಕ ಕಾರಣದಿಂದ ತಡವಾಗಿದ್ದು ಶನಿವಾರ ತಾಲೂಕು ಆಸ್ಪತ್ರೆಗೆ ಬರಲಿದೆ ಜನರಿಗೆ ಅಗತ್ಯವಾದ ಸೌಲಭ್ಯ ನೀಡುವುದಕ್ಕೆ ನಮ್ಮ ಸರಕಾರ ಬದ್ದವಾಗಿದೆ ಎಂದು ಹೇಳಿದರು.

ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ ಎದುರಿಸುವ ಎಲ್ಲಾ ಸಿದ್ದತೆಯನ್ನು ಮಾಡಲಾಗಿದೆ.ಜಿಲ್ಲೆಯ ಸರಕಾರಿ ಆಸ್ಪತ್ರೆಗಳು ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಇಲ್ಲದ ಸೌಲಭ್ಯಗಳನ್ನು ನೀಡುತ್ತಿವೆ ಇಲ್ಲಿ ಯಾವುದೇ ಕೊರತೆ ಇಲ್ಲ ಉತ್ತಮವಾದ ವೈದ್ಯರಿದ್ದಾರೆ, ಸಿಬ್ಬಂದಿಗಳಿದ್ದಾರೆ ಜನರು ಸರಕಾರಿ ಆಸ್ಪತ್ರೆಯ ಮೇಲೆ ವಿಶ್ವಾಸವಿಡಬೇಕು ಜಿಲ್ಲೆಯಲ್ಲಿ 563 ಆಕ್ಸೀಜನ್ ಇರುವ ಹಾಸಿಗೆ ಇದೆ 845 ಸಾದಾ ಹಾಸಿಗೆ ಇದೆ 79 ಜನರು ಆಕ್ಸಿಜನ್ ಹಾಸಿಗೆ ಉಪಯೋಗಿಸುತ್ತಿದ್ದರೆ 45 ಜನರ ಸಾದಾ ಹಾಸಿಗೆ ಉಪಯೋಗಿಸುತ್ತಿದ್ದಾರೆ ಉಳಿದ ಕೊವಿಡ್ ರೋಗಿಗಳು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ 4000 ಸಾದಾ ಹಾಸಿಗೆಯನ್ನು,1000 ಆಕ್ಸೀಜನ್ ಹಾಸಿಗೆಯನ್ನು ಮಾಡುತ್ತಿದ್ದೇವೆ. ಕಾರವಾರ ಮತ್ತು ಶಿರಸಿಗೆ ಆಕ್ಸೀಜನ್ ಟ್ಯಾಂಕರ್ ತರುವ ಪ್ರಯತ್ನ ಮಾಡುತ್ತಿದ್ದೆವೆ.ಯಲ್ಲಾಪುರದಲ್ಲಿ 150 ಜನರಿಗೆ ಸಾಕಾಗುವಷ್ಟು ಆಕ್ಸಿಜನ್ ತಯಾರಿಸುವ ಘಟಕವನ್ನು ಶಿರಸಿಯಲ್ಲಿ ಒಂದು ಗಂಟೆಗೆ 6000 ಜನರಿಗೆ ಸಾಕಾಗುವಷ್ಟು ಆಕ್ಸೀಜನ್ ತಯಾರಿಸುವ ಘಟಕವನ್ನು ತೆರೆಯಲಾಗುತ್ತಿದೆ. ಘಟ್ಟದ ಮೆಲಿನ ತಾಲೂಕಿಗೆ ಅನುಕೂಲವಾಗುವಂತೆ ಶಿರಸಿಯಲ್ಲಿ ಆರ್‍ಟಿಪಿಸಿ ಪರೀಕ್ಷಾ ಕೇಂದ್ರವನ್ನು ತೆರೆಯಲಾಗುತ್ತಿದೆ,ಜಿಲ್ಲೆಗೆ ಕೊವಿಡ್ ನಿರ್ವಹಣೆಗೆ 5ಕೋಟಿರೂ. ನೀಡಲಾಗಿದೆ.ಇದರ ಹೊರತಾಗಿ ಬೇರೆ ಯಾವುದೇ ಕೊರತೆ ಕಂಡುಬಂದರೆ ತಹಸೀಲ್ದಾರ ಗಮನಕ್ಕೆ ತಂದರೆ ಪರಿಹರಿಸಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪ್ರಕಾಶ ಪುರಾಣಿಕ ತಾಲೂಕು ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ,ಡಾ.ಉಡಪ,ಡಾ.ಪ್ರೀತಿ ಮುಂತಾದವರು ಉಪಸ್ಥಿತರಿದ್ದರು.
——

ಕೊವಿಡ್ ಬಡವಬಲ್ಲಿದ ಎಂಬ ಬೇಧವಿಲ್ಲದೆ ಬರುತ್ತದೆ ಶ್ರೀಮಂತರು ಖಾಸಗಿ ಆಸ್ಪತ್ರೆಯಲ್ಲಾದರೂ ಚಿಕಿತ್ಸೆ ಪಡೆಯುತ್ತಾರೆ ಬಡವರಿಗೆ ಸರಕಾರಿ ಆಸ್ಪತ್ರೆ ಬೇಕು ವೈದ್ಯರು ದೇವರಲ್ಲ ರೋಗಿ ಸಾಯದಂತೆ ವೈದ್ಯರು ಪ್ರಯತ್ನ ಮಾಡಬಹುದು ಸಾವು ತಡೆಯಲು ಸಾಧ್ಯವಿಲ್ಲ ಆದರೆ ಸಾವಿನ ಕಾರಣವನ್ನು ಕುಟುಂಬಸ್ಥರಿಗೆ ತಿಳಿಸುವುದು ಸೂಕ್ತ ಎಂದು ಶಿವರಾಮ ಹೆಬ್ಬಾರ ಹೇಳಿದರು.

About the author

Adyot

Leave a Comment