ಆದ್ಯೋತ್ ಸುದ್ದಿನಿಧಿ: ಉತ್ತರಕನ್ನಡ ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿಯಾದ ಶಿರಸಿಗೆ ಕೊವಿಡ್19 ಕಾಲಿಟ್ಟಿದ್ದು ಮುಂಬೈನಿಂದ ಬಂದು ಕಲ್ಲಿಯಲ್ಲಿ ಕ್ವಾರೆಂಟೈನ್ ನಲ್ಲಿರುವ 9 ಜನರಲ್ಲಿ ಪಾಸಿಟಿವ್ ಇರುವುದು ದೃಢಪಟ್ಟಿದೆ ಎನ್ನಲಾಗುತ್ತಿದ್ದು, ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ ಆರ್ಭಟ ಮುಂದುವರಿದಿದೆ.
ಕೊವಿಡ್19 ದೇಶಕ್ಕೆ ಕಾಲಿಟ್ಟ ಕೆಲವೇ ದಿನದಲ್ಲಿ ಹೊರದೇಶದಿಂದ ಬಂದ ಭಟ್ಕಳ ನಿವಾಸಿಗಳಲ್ಲಿ ಕಾಣಿಸಿಕೊಂಡಿತ್ತು. ಜಿಲ್ಲೆಯ ಜನರು ಅಷ್ಟೇನೂ ಆತಂಕ ಪಟ್ಟಿರಲಿಲ್ಲ. ಆದರೆ ಕಳೆದ ಹತ್ತು ದಿನಗಳ ಹಿಂದೆ ಮಹಾರಾಷ್ಟ್ರದಿಂದ ಪ್ರವಾಹೋಪಾದಿಯಲ್ಲಿ ಬಂದ ಜನರಿಂದಾಗಿ ಜಿಲ್ಲೆಯ ಇತರ ತಾಲೂಕಿನಲ್ಲೂ ಕಾಣಿಸಿಕೊಳ್ಳುವ ಮೂಲಕ ಜನರ ಆತಂಕಕ್ಕೆ ಕಾರಣವಾಗಿತ್ತು. ಭಟ್ಕಳ ಹೊರತು ಪಡಿಸಿ ಹೊನ್ನಾವರ, ಕುಮಟಾ, ಯಲ್ಲಾಪುರ, ಮುಂಡಗೋಡು, ಜೊಯಿಡಾ, ದಾಂಡೇಲಿಯಲ್ಲಿ ಬಂದಿರುವ ಪಾಸಿಟಿವ್ ಪ್ರಕರಣಗಳು ಮಹಾರಾಷ್ಟ್ರದಿಂದ ಬಂದವರದ್ದೇ ಆಗಿದ್ದು ಈಗ ಶಿರಸಿಯಲ್ಲಿ ಕಾಣಿಸಿಕೊಂಡಿರುವ 9 ಪ್ರಕರಣಗಳು ಮಹಾರಾಷ್ಟ್ರದ ಮುಂಬೈನಿಂದ ಬಂದವರದ್ದೆ ಆಗಿರುತ್ತದೆ. ಮಹಾರಾಷ್ಟ್ರದಿಂದ ಬಂದವರನ್ನು ಹಾಸ್ಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದ್ದು ರೋಗಿಗಳನ್ನು ಗುರುತಿಸಲು ಅನಕೂಲವಾಗಿದ್ದು, ರೋಗ ಹರಡದಂತೆ ತಡೆಯಲು ಅನುಕೂಲವಾಗುತ್ತಿದೆ. ಜನರು ಅನವಶ್ಯಕವಾಗಿ ಭಯಪಡುವ ಕಾರಣವಿಲ್ಲ ಆದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯಕ ಎಂದು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹೇಳುತ್ತಾರೆ.
😷😷😲