ದಯವಿಟ್ಟು ಯಾರೂ ಮನೆಯಿಂದ ಹೊರಬರಬೇಡಿ. ಅತಿ ಅವಶ್ಯವಿರುವ ಅಥವಾ ತುರ್ತು ಅಗತ್ಯತೆಗಳಿಗೆ ಮಾತ್ರ ಸಂಚರಿಸಿ. ಇದು ಆದ್ಯೋತ್ ನ್ಯೂಸ್ ಕಳಕಳಿ.
ದೇಶದೆಲ್ಲೆಡೆ ಕರೋನಾ ವೈರಸ್ ಹರಡುತ್ತಿದೆ. ರೋಗ ಉಲ್ಬಣವಾಗುವುದಕ್ಕೆ ಮುನ್ನ ಎಚ್ಚರಿಕೆ ಕ್ರಮಗಳನ್ನ ಕೈಗೊಳ್ಳುವುದು ತುರ್ತು ಅವಶ್ಯಕತೆ. ದಯವಿಟ್ಟು ಸಾಮಾಜಿಕ ಕಳಕಳಿಯನ್ನು ಅರ್ಥ ಮಾಡಿಕೊಳ್ಳಿ. ನಮ್ಮನ್ನು ಕಾಯಲು ಸರ್ಕಾರ, ವೈದ್ಯರು, ಪೊಲೀಸರು, ಸೈನಿಕರು, ಸರಕಾರಿ ಅಧಿಕಾರಿಗಳು ತಮ್ಮ ಶಕ್ತಿ ಮೀರಿ ಪ್ರಯತ್ನ ನಡೆಸುತ್ತಿದ್ದಾರೆ. ಮಾಧ್ಯಮಗಳು ಜನರಿಗೆ ಮಾಹಿತಿ ಪ್ರಸಾರದ ಮೂಲಕ ಜನರನ್ನ ಎಚ್ಚರಿಸೋ ಪ್ರಯತ್ನ ಮಾಡುತ್ತಿವೆ. ಹೀಗಿದ್ದಾಗ ಅನವಶ್ಯಕ ಓಡಾಟದ ಮೂಲಕ ನಮ್ಮನ್ನು ಕಾಯುತ್ತಿರುವವರಿಗೆ ತೊಂದರೆ ನೀಡೋದು ಬೇಡ.
ಮನೆಯಲ್ಲಿಯೇ ಇರೋಣ..
ಕೊರೊನಾ ತೊಲಗಿಸೋಣ..
ದೇಶವನ್ನು ಉಳಿಸೋಣ…
ಇದು ಅದ್ಯೋತ್ ನ್ಯೂಸ್ ಕಳಕಳಿ..