ಆದ್ಯೋತ್ ನ್ಯೂಸ್:
ಪ್ರತಿಯೊಂದು ಧರ್ಮದ ಅನುಯಾಯಿಗಳಿಗೂ ಸಂಭ್ರಮ ಪಡಲು ಒಂದಿಷ್ಟು ಹಬ್ಬಗಳು ಇರುತ್ತವೆ.ಈ ಸಂಭ್ರಮದ ಜೊತೆಗೆ ಬದುಕಿನ ಮೌಲ್ಯಗಳನ್ನು ಹೆಚ್ಚಿಸುವ ಒಂದಿಷ್ಟು ಸಂದೇಶಗಳು ಇರುತ್ತವೆ.
ಕ್ರೈಸ್ತ ಬಾಂಧವರ ಶುಭಶುಕ್ರವಾರ (ಗುಡ್ ಪ್ರೈಡೆ) ಕ್ರಿಸ್ಮಸ್ ನಷ್ಟೆ ಪವಿತ್ರ ಹಬ್ಬವಾಗಿರುತ್ತದೆ.
ದಿ.10 ಶುಕ್ರವಾರ ಜಗತ್ತಿನಾದ್ಯಂತ ಕೋವಿಡ್ ಭೀತಿಯ ಹಿನ್ನಲೆಯಲ್ಲಿ ಈ ಶುಭಶುಕ್ರವಾರದ ಹಬ್ಬವನ್ನು ಚರ್ಚಗಳಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು.
ಏನಿದು ಶುಭಶುಕ್ರವಾರ:–
ಈ ದಿನ ಯೇಸುಕ್ರಿಸ್ತನ ಎಲ್ಲಾ ಮಾನವ ಕುಲವನ್ನುಪಾಪದಿಂದ ಎತ್ತಿ ಹಿಡಿಯುಲು ಶಿಲುಬೆಯನ್ನೂ ಹೊತ್ತು ಕಷ್ಟಮರಣ ಹೊಂದಿದ ದಿನ ಹಾಗೂ ಈ ದಿನ ಪಾಸ್ಕ ಹಬ್ಬಕ್ಕೆ ಮುನ್ನುಡಿ ಕೊಡುವ ದಿನ.
ಈ ದಿನ ಪ್ರಭು ಏಸುಕ್ರಿಸ್ತರು ತಾನು ಹೊತ್ತ ಶಿಲುಬೆಯ ಮುಖಾಂತರ ಸೈತಾನನ ರಾಜ್ಯದ ಮೇಲೆ ಜಯ ಗಳಿಸಿ ಮಾನವ ಕುಲಕ್ಕೇ ಹೊಸ ಅರ್ಥವನ್ನು ಕೊಟ್ಟರು.
ಈ ದಿನದಂದು ಎಲ್ಲಾ ಕ್ರೈಸ್ತರು ಸೇರಿ ಮಾಡುವ ಪವಿತ್ರ ಶಿಲುಬೆಯ ಆರಾಧನೆಯೇಒಂದು ಕೇಂದ್ರ ಬಿಂದು.
ಪವಿತ್ರ ಶಿಲುಬೆಯ ಅಕಾರವು ಮೂರು ಪ್ರಮುಖ ಅರ್ಥವನ್ನು ಮನುಷ್ಯ ಕುಲಕ್ಕೇ ಸಾರುತ್ತದೆ.
ಪವಿತ್ರ ಶಿಲುಬೆಯ ಉದ್ದನೆಯ ಭಾಗವು ದೇವರ ಮತ್ತು ಮನುಷ್ಯನ ನಡುವಿನ ಪ್ರೀತಿಯ ಸಂಬಂಧವನ್ನು ವಿವರಿಸುತ್ತದೆ.,ಅಡ್ದನೆಯ ಭಾಗದ ಬಲಬದಿಯು ದೇವರು ನಮ್ಮನು ಪ್ರೀತಿಸಿದಂತೆ ನಾವು ಪರರನ್ನು ಪ್ರೀತಿಸಬೇಕು ಎಂದು ಸಾರಿದರೆ ಎಡಭಾಗವು ಅವೆರಡರಿಂದ ಪ್ರೇರಣೆಗೊಂಡು ಕ್ರಿಸ್ತ್ ಬಾ0ಧವರು ಜಗತ್ತಿನಾದ್ಯಂತ ತಮ್ಮ ಸೇವೆಯನ್ನು ಸಲ್ಲಿಸುವ ಪರಿಯನ್ನು ವಿವರಿಸಿದೆ.
ಆದ ಕಾರಣದಿಂದಲೇ ಕ್ರೈಸ್ತ ಬಾ0ಧವರು ಮನೆಯಲ್ಲಿ,ಭವನ ಗಳಲಿ, ಸಂಘಸಂಸ್ಥೆಗಳಲ್ಲಿ ಪವಿತ್ರ ಶಿಲುಬೆಯ ಗುರುತನ್ನಿಟ್ಟು ಪೂಜೆ ಸಲ್ಲಿಸುತ್ತಾರೆ.
ಈ ಶುಭಶುಕ್ರವಾರದಂದು ಸಿದ್ದಾಪುರದ ಹೋಲಿ ರೋಸರಿ ಚರ್ಚನ ಗುರುಗಳಾದ ಫಾ| ಡೇವಿಡ್ ಪಿಂಟೋ ಹಾಗೂ ಸಹಾಯಕ ಗುರುಗಳಾದ ಫಾ|| ಆಂಟನಿ ಡಿಸೋಜಾ covid 19 ಇದರ ನಿಮಿತ್ತ ಕಾನೂನಿಗೆ ತೊಡಕಾಗದ ರೀತಿಯಲ್ಲಿ ಜಗತ್ತಿನಿಂದ ಕೊರೊನಾ ನಿರ್ನಾಮವಾಗಲು ದುಡಿಯುತ್ತಿರುವ ಆರಕ್ಷಕ ಸಿಬ್ಬಂದಿ,ಆರೋಗ್ಯ ಇಲಾಖೆಯ ಸಿಬ್ಬಂದಿ,ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಒಳಿತಾಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.