ದಾಸೋಹ ಕಂಟ್ರೋಲ್ ರೂಮ್ ಗೆ ಚಾಲನೆ

ಆದ್ಯೋತ್ ನ್ಯೂಸ್ ಡೆಸ್ಕ್ : ಬೆಂಗಳೂರಿನ ವಾರ್ತಾ ಭವನದ ಮಹಾತ್ಮಗಾಂಧಿ ಮಾಧ್ಯಮ ಕೇಂದ್ರದಲ್ಲಿ ನೂತನವಾಗಿ ರೂಪಿಸಲಾಗಿರುವ ” ದಾಸೋಹ ಕಂಟ್ರೋಲ್ ರೂಂ ” ಗೆ ರಾಜ್ಯದ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಹಾಗೂ ಕಾರ್ಮಿಕ, ಸಕ್ಕರೆ ಸಚಿವ ಶಿವರಾಮ ಹೆಬ್ಬಾರ್ ಚಾಲನೆ ನೀಡಿದರು.


ಇದೇ ಸಂದರ್ಭದಲ್ಲಿ ನಿರಾಶ್ರಿತ ಹಾಗೂ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ 155214 ಈ ಸಹಾಯವಾಣಿಯನ್ನ ತೆರೆಯಲಾಯಿತು. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಈ ಸಂದರ್ಭದಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ, ಪೌರಾಡಳಿತ ಮತ್ತು ತೋಟಗಾರಿಕಾ ಸಚಿವ ನಾರಾಯಣ ಗೌಡ ಜೊತೆಗಿದ್ದರು.

About the author

Adyot

Leave a Comment