ದಾವಣಗೆರೆ : ದಾವಣಗೆರೆ ಜಿಲ್ಲೆಯ ಭರಮಸಾಗರದ ಎಸ್.ಎಂ.ಎಲ್. ಪಬ್ಲಿಕ್ ಶಾಲೆ ಯಶಸ್ವಿ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ “ದಶಕದ_ಸಂಭ್ರಮ” ಆಚರಿಸಲಾಯಿತು.
ಸಮಾರಂಭದಲ್ಲಿ ಕಾಯಕಯೋಗಿ ಜಗದ್ಗುರು ಡಾ.ಶ್ರೀ ಶಾಂತವೀರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಹೆಚ್.ಎನ್.ತಿಪ್ಟೇಸ್ವಾಮಿ, ಕಾರ್ಯದರ್ಶಿ ಹೆಚ್.ಎನ್ ಪ್ರವೀಣ್ , ಜಿಲ್ಲಾ ಪಂಚಾಯತಿ ಸದಸ್ಯರಾದ ಕೃಷ್ಣಮೂರ್ತಿ, ನೆಲಿಕಟ್ಟೆ ಸಿದ್ದೇಶ್, ಉದ್ಯಮಿ ನಿರಂಜನಮೂರ್ತಿ ಮುಂತಾದ ಅಥಿತಿ ಗಣ್ಯರು ಹಾಗೂ ಪೋಷಕರು ಭಾಗವಹಿಸಿದ್ದರು.