ಆದ್ಯೋತ್ ಸಿನಿ ಡೆಸ್ಕ್ : ಯುವ ಪ್ರತಿಭೆ ಮಾಚೇನಹಳ್ಳಿ ಸತೀಶ ಕಮ್ಮಾರ ಹಾಗೂ ತಂಡದವರ “ಧಮನಿ” ಕಿರುಚಿತ್ರ ಮಾರ್ಚ್ 8 ರಂದು ಬಿಡುಗಡೆಗೊಳ್ಳಲಿದೆ.
ಈಗಾಗಲೇ ಶಿವರಾಜಕುಮಾರ ನಟನೆಯ ಟಗರು ಹಾಗೂ ಧ್ರುವಸರ್ಜಾ ನಟನೆಯ ಪೊಗರು ಚಿತ್ರಗಳಲ್ಲಿನ ಸಾಹಿತ್ಯ ರಚನೆಯಿಂದ ಚಿತ್ರರಂಗದ ಗಮನ ಸೆಳೆದಿರುವ ಸತೀಶ ಈಗ ತಾಯಿ ಪ್ರೀತಿ, ಅವಳ ಪಾಡು ಈ ವಿಷಯವನ್ನಿಟ್ಟುಕೊಂಡು ಕಿರುಚಿತ್ರ ಮಾಡಿದ್ದಾರೆ. ಚಿತ್ರದ ಕತೆ ಮತ್ತು ಸಾಹಿತ್ಯವನ್ನು ಸತೀಶ ಬರೆದಿದ್ದು ಸಾಕಷ್ಟು ಕುತೂಹಲ ಮೂಡಿದೆ. ಶಿರಹಟ್ಟಿಯ ಕೃಷಿರಾಜ್ಯ ಪ್ರಶಸ್ತಿ ಪುರಸ್ಕೃತ ಮಹೇಶ ಛಬ್ಬಿಯವರು ಚಿತ್ರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಧರ್ಮಸ್ಥಳದ ಹತ್ತಿರದ ಉಜಿರೆಯ ಸುಂದರ ಪರಿಸರದಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ.
ಈ ಚಿತ್ರದಲ್ಲಿ ಕ್ಷಮಾ ಹೊಸಕೇರಿಯವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇನ್ನುಳಿದ ಪಾತ್ರದಲ್ಲಿ ಉಜಿರೆಯ ವಿದ್ಯಾರ್ಥಿಗಳಾದ ಕೀರ್ತಿ, ಭವ್ಯಾ, ಶರಣ್ಯಾ, ಸ್ವಾತಿ, ಹೊನ್ನಕೇರಪ್ಪ ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಲಾಯ್ ವೆಲಾಂಟೈನ್ ಸಾಲ್ಧಾನಾ ಅವರು ಸಂಗೀತ ನೀಡುತ್ತಿದ್ದಾರೆ. ಪ್ರಸ್ತುತ ಸಮಾಜದಲ್ಲಿ ಜನ್ಮಕೊಟ್ಟ ಅಮ್ಮನಿಗೆ ಹೆತ್ತಮಕ್ಕಳೇ ತುತ್ತು ಅನ್ನವನ್ನು ನೀಡಲು ಹೆಣಗಾಡುವ ಕಥೆಯನ್ನು ಹೊಂದಿರುವ ಧಮನಿ “ಅಲೆಮಾರಿಯ ಅಂತಿಮಯಾತ್ರೆ” ಎಂಬ ಸಂದೇಶವನ್ನು ಹೊತ್ತು ತೆರೆಗೆ ಬರುತ್ತಿದೆ. ಕನ್ನಡ ಚಿತ್ರರಂಗದ ಹಿರಿಯ ನಟ ಅಭಿಜೀತ್, ಭಜರಂಗಿ ಖ್ಯಾತೀಯ ಲೋಕಿ, ಬೆಲ್ ಬಾಟಮ್ ನಿರ್ಮಾಪಕರಾದ ಸಂತೋಷ್ ಕುಮಾರ, ಹಿರಿಯ ನಟಿ ಪದ್ಮಜಾ ರಾವ್, ಈ ಚಿತ್ರಕ್ಕೆ ಶುಭ ಹಾರೈಸಿದ್ದಾರಲ್ಲದೇ ಸತೀಶ ಮತ್ತು ತಂಡದವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.
🙌👏👏👏👏👍
🔥🔥❤️🤟🏻 egarly waiting