ಆದ್ಯೋತ್ ನ್ಯೂಸ್ ಡೆಸ್ಕ್ : ದೇಶದೆಲ್ಲೆಡೆ ಕೊರೊನಾ ಹಾವಳಿ ಮಿತಿ ಮಿರುತ್ತಿದೆ. ಸರ್ಕಾರ ಕೊರೊನಾ ತಡೆಗೆ ಹಲವಾರು ಕ್ರಮಗಳನ್ನ ಕೈಗೊಳ್ಳುತ್ತಿದೆ. ಧಾರವಾಡದಲ್ಲಿ ಕೊರೊನಾ ಸೋಂಕಿತ ಪತ್ತೆ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿಯನ್ನ ಬಂದ್ ಮಾಡಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಗೆ ಹೊಂದಿಕೊಂಡಿರುವ ಧಾರವಾಡ ಗಡಿ ಬಂದ್ ಮಾಡಲಾಗಿದ್ದು, ಧಾರವಾಡದಿಂದ ಜಿಲ್ಲೆಗೆ ಆಗಮನ ಹಾಗೂ ನಿರ್ಗಮನವನ್ನ ನಿಷೇಧಿಸಲಾಗಿದೆ. ತುರ್ತು ಕೆಲಸಗಳನ್ನ ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಗಡಿ ಬಂದ್ ಮಾಡಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಗೆ ಹೊಂದಿಕೊಂಡಿರುವ ಎಲ್ಲಾ ಗಡಿಗಳನ್ನು ಸಶಕ್ತಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಅಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಸೂಚನೆ ನೀಡಿದ್ದಾರೆ.
Good decision our honorable DC sr 🙏🙌