ಧಾರವಾಡ : ಹುಬ್ಬಳ್ಳಿಯ ಕೆಎಲ್ಇ ಕಾಲೇಜಿನ ವಿದ್ಯಾರ್ಥಿಗಳು ದೇಶದ್ರೋಹದ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಅವರ ಪರ ವಕಾಲತ್ತು ವಹಿಸಲು ಇಲ್ಲಿನ ಜಿಲ್ಲಾ ನ್ಯಾಯಾಲಯಕ್ಕೆ ಬರುವ ಬೆಂಗಳೂರಿನ ವಕೀಲರನ್ನು ಒಳಗಡೆ ಬಿಡದಂತೆ ಧಾರವಾಡ ವಕೀಲರು ಪ್ರತಿಭಟನೆ ಮಾಡಿದ ಪ್ರಸಂಗ ಸೋಮವಾರ ನಡೆಯಿತು.
ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಬೆಂಗಳೂರಿನ ವಕೀಲರನ್ನು ಕೋರ್ಟ ಹಾಲ್ ಒಳಗಡೆ ಕರೆದುಕೊಂಡು ಹೋಗುವಾಗ ಧಾರವಾಡದ ವಕೀಲರು ನೂಕುನುಗ್ಗಲು ಮಾಡಿದ ಪ್ರಸಂಗ ನಡೆಯಿತು. ಬೆಂಗಳೂರಿನ ವಕೀಲರು ಯಾವುದೇ ಕಾರಣಕ್ಕೂ ದೇಶದ್ರೋಹಿಗಳ ಪರವಾಗಿ ವಕಾಲತ್ತು ವಹಿಸಬಾರದು ಎಂದು ಕೋರ್ಟ ಮುಂದೆಯೇ ವಕೀಲರು ಪ್ರತಿಭಟನೆ ನಡೆಸಿದರು.
ಇನ್ನು ದೇಶದ್ರೋಹಿಗಳ ಪರ ವಕಾಲತ್ತು ವಹಿಸಲು ಬಂದಿದ್ದ ಬೆಂಗಳೂರಿನ ವಕೀಲರ ಕಾರಿನ ಗ್ಲಾಸ್ ಅನ್ನು ಧಾರವಾಡ ವಕೀಲರು ಪುಡಿ ಪುಡಿ ಮಾಡಿದ್ದಾರೆ. ಆಗ ವಕೀಲರು ಮತ್ತು ಪೊಲೀಸರು ನಡುವೆ ವಾಗ್ವಾದ, ಮಾತಿನ ಚಕಮಕಿಯೂ ನಡೆಯಿತು. ಇದನ್ನೆಲ್ಲ ನೋಡಿದ ಬೆಂಗಳೂರು ವಕೀಲರು ಧಾರವಾಡದಿಂದ ಬೆಳಗಾವಿ ಹಿಂಡಲಗಾ ಜೈಲಿನತ್ತ ತೆರಳಿದ್ದಾರೆ.
Good job.