‘ಡಿಫೆನ್ಸ್ ಎಕ್ಸ್ ಪೋ ಇಂಡಿಯಾ’ ಗೆ ಇಂದು ಚಾಲನೆ

ಲಕ್ನೋ : ಉತ್ತರ ಪ್ರದೇಶದ ಲಕ್ನೋ ದಲ್ಲಿ ನಡೆಯಲಿರೋ ‘ಡಿಫೆನ್ಸ್ ಎಕ್ಸ್ ಪೋ ಇಂಡಿಯಾ 2020’ ಪ್ರದರ್ಶನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.


ಲಕ್ನೋ ದ ಮಾರ್ಸ್ ಎಡಿಟೋರಿಯಮ್ ಇಂದಿರಾಗಾಂಧಿ ಪ್ರತಿಷ್ಠಾನದಲ್ಲಿ ನಡೆಯಲಿರೋ ಕಾರ್ಯಕ್ರಮ ಇಂದಿನಿಂದ 4 ದಿನಗಳ ಕಾಲ ನಡೆಯಲಿದೆ. ಈ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾರತದ ರಕ್ಷಣಾ ಇಲಾಖೆಯ ತಾಕತ್ತು ಜನರ ಕಣ್ಮುಂದೆ ಬರಲಿದೆ. 11 ನೇ ಆವೃತ್ತಿಯ ಈ ರಕ್ಷಣಾ ಪ್ರದರ್ಶನದಲ್ಲಿ ದೇಶದ ಸಾವಿರಕ್ಕೂ ಹೆಚ್ಚು ರಕ್ಷಣಾ ಸಾಮಗ್ರಿ ತಯಾರಿಕಾ ಕಂಪನಿಗಳು ಹಾಗೂ ವಿದೇಶದ 165 ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಳ್ಳಲಿವೆ. ಈ ಕಂಪನಿಗಳು ನೂತನ ತಂತ್ರಜ್ಞಾನ ಆಧಾರಿತ ರಕ್ಷಣಾ ವ್ಯವಸ್ಥೆಯ ಸಲಕರಣೆಗಳ ಪ್ರದರ್ಶನ ನೀಡಲಿವೆ. ಅದೇ ರೀತಿ ದೇಶದ ರಕ್ಷಣಾ ವ್ಯವಸ್ಥೆಯ ಹೆಮ್ಮೆಯ ಯುದ್ಧ ವಿಮಾನಗಳಾದ ತೇಜಸ್, ಸುಖೋಯ್ ಸೇರಿದಂತೆ ಹಲವಾರು ಯುದ್ಧ ವಿಮಾನಗಳು ಹಾಗೂ ಭೂ ಸೇನೆಯ ಹಲವಾರು ವಾಹನಗಳು ಪ್ರದರ್ಶನಗೊಳ್ಳಲಿವೆ. ಈ ಎಕ್ಸ್ ಪೋ ಸಂಪೂರ್ಣವಾಗಿ ಪರಿಸರ ಸ್ನೇಹಿ ಪ್ರದರ್ಶನವಾಗಿದ್ದು, ಪರಿಸರಕ್ಕೆ ಯಾವುದೇ ರೀತಿ ಧಕ್ಕೆ ಆಗಲ್ಲ ಅಂತ ರಕ್ಷಣಾ ಇಲಾಖೆ ಹೇಳಿಕೊಂಡಿದೆ.

About the author

Adyot

Leave a Comment