ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಮಂಗನಖಾಯಿಲೆ, ಹೆಚ್ಚುತ್ತಿದೆ ಇಲಾಖೆಯ ನಿರ್ಲಕ್ಷ

ಅದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗನಖಾಯಿಲೆಯ ಆರ್ಭಟ ಮುಂದುವರಿಯುತ್ತಿದ್ದು ಮಂಗನಖಾಯಿಲೆ ಪೀಡಿತರ ಸಂಖ್ಯೆ 67ಕ್ಕೆ ಮುಟ್ಟಿದೆ.

ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಂತೂ ದಿನ ದಿನಕ್ಕೆ ಮಂಗನಖಾಯಿಲೆ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು ಇಂದಿನವರೆಗೆ 45ಕ್ಕೆ ತಲುಪಿದೆ ಜಿಲ್ಲೆಯ ಮಂಗನಖಾಯಿಲೆ ಪೀಡಿತರಲ್ಲಿ ಶೇ.75 ರಷ್ಟು ಪೀಡಿತರು ಸಿದ್ದಾಪುರದಲ್ಲಿಯೇ ಇದ್ದಾರೆ‌
ಕಳೆದ ಹದಿನೈದು ದಿನದಿಂದ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಿಂಡುಗಟ್ಟಲೆ ಬಂದು ಹೋದರೂ,ವಿಧಾನಸಭಾಧ್ಯಕ್ಷರು,ಸಚೀವರು,ನಿಗಮಮಂಡಳಿ ಅಧ್ಯಕ್ಷರೂ ಸೇರಿದಂತೆ ಹಲವು ಘಟಾನುಘಟಿಗಳು ಬಂದು ಗಂಟಗಟ್ಟಲೆ ಸಭೆ ನಡೆಸಿದರೂ ಮಂಗನಖಾಯಿಲೆ ಹರಡದಂತೆ ತಡೆಯಲು ಸಾಧ್ಯವಾಗುತ್ತಿಲ್ಲ‌.
ಉಣ್ಣೆ ನಿವಾರಣೆಗೆ ಔಷಧ ಹೊಡೆಯುವದರಿಂದ ಹಿಡಿದು
ಜನರಿಗೆ ಲಸಿಕೆ ನೀಡುವ ತನಕ ನೀರಿನಂತೆ ಹಣವನ್ನು ಖರ್ಚು ಮಾಡುತ್ತಿದ್ದಾರೆ ಆದರೂ ಮಂಗನಖಾಯಿಲೆ ನಿಯಂತ್ರಣಕ್ಕೆ ಬರುತ್ತಿಲ್ಲ.

ಈ ನಡುವೆ ಕ್ಯಾದಗಿ,ದೊಡ್ಮನೆ,ವಾಜಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಮಂಗನಖಾಯಿಲೆ ಪೀಡಿತರಿದ್ದಾರೆ.ಆದರೆ ಆರೋಗ್ಯ ಇಲಾಖೆಯವರು ಕೇವಲ ಮನಮನೆ ಗ್ರಾಪಂ ವ್ಯಾಪ್ತಿಯ ಜೋಗಿನಮನೆ ಭಾಗದಲ್ಲಿ ಮಾತ್ರ ಉಣ್ಣೆ ನಿವಾರಣೆಯ ಔಷಧ ಹೊಡೆಯುತ್ತಿದ್ದು ಉಳಿದ ಭಾಗದಲ್ಲಿ ಇನ್ನೂವರೆಗೂ ಔಷಧ ಸಿಂಪರಣೆ ಕಾರ್ಯ ಪ್ರಾರಂಭಗೊಂಡಿಲ್ಲ.
ಪಶುಸಂಗೋಪನಾ ಇಲಾಖೆಯವರು ಜಾನುವಾರುಗಳಿಗೆ ಉಣ್ಣೆ ನಿವಾರಣೆ ಇಂಜಕ್ಷನ್ ನೀಡಲು ಪ್ರಾರಂಭಿಸಿದ್ದು ಇಲ್ಲಿಯವರೆಗೆ ಸುಮಾರು 2500-2800 ಜಾನುವಾರುಗಳಿಗೆ ಇಂಜಕ್ಷನ್ ನೀಡಲಾಗಿದ್ದು ಉಳಿದ ಕಡೆಗೆ ಇಂಜಕ್ಷನ್ ನೀಡುವ ಕಾರ್ಯನಡೆಯುತ್ತಿದೆ.
ಮಂಗನಖಾಯಿಲೆ ಪೀಡಿತ ಪ್ರದೇಶದಿಂದ ಪ್ರತಿದಿನ ಹತ್ತಕ್ಕೂ ಹೆಚ್ಚು ಜ್ವರಪೀಡಿತರು ಆಸ್ಪತ್ರೆಗೆ ಬರುತ್ತಿದ್ದಾರೆ ಹೀಗೆ ಬಂದವರ ರಕ್ತದಲ್ಲಿ ಮಂಗನಖಾಯಿಲೆ ಇದೆಯೇ ಎಂದು ಪರೀಕ್ಷಿಸಲು ಸೂಚಿಸಲಾಗುತ್ತಿದೆ. ಆದರೆ ಈ ರಕ್ತಪರೀಕ್ಷೆ ಎಷ್ಟು ನೈಜವಾಗಿದೆ ಎಂಬ ಪ್ರಶ್ನೆ ಈಗ ಮೂಡುತ್ತಿದೆ.

ಕಾರಣ ಸಿದ್ದಾಪುರದ ಪತ್ರಕರ್ತರೊಬ್ಬರಿಗೆ ಮಂಗನಖಾಯಿಲೆಗಾಗಿ ರಕ್ತ ಪರೀಕ್ಷೆಗೆ ಬರೆಯಲಾಗಿತ್ತು ಆದರೆ ಸಿದ್ದಾಪುರ ಸರಕಾರಿ ಆಸ್ಪತ್ರೆಯ ರಕ್ತಪರೀಕ್ಷಕರು ಅವರ ರಕ್ತವನ್ನು ಕಳುಹಿಸದೆ ಖಾಲಿ
ವೈಲ್ ಕಳುಹಿಸುವ ಮೂಲಕ ನಿರ್ಲಕ್ಷ ತೋರಿದ್ದಾರೆ.
ಇದೇ ರೀತಿ ಎಷ್ಟು ಜನರಿಗೆ ಮೋಸವಾಗಿದೆಯೋ ಗೊತ್ತಿಲ್ಲ ಆರೋಗ್ಯ ಇಲಾಖೆಯವರೆ ಸ್ಪಷ್ಟಪಡಿಸಬೇಕಾಗಿದೆ
ಇಂತಹ ದಿವ್ಯ ನಿರ್ಲಕ್ಷದಿಂದಲೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಆರೋಗ್ಯ ಇಲಾಖೆಯ ಅಧಿಕಾರಿಗಳಾಗಲಿ,ಸ್ಥಳೀಯ ಆಡಳಿತವಾಗಲಿ ಯಾವುದೇ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಿಲ್ಲ ಎಲ್ಲವನ್ನೂ ಗುಪ್ತವಾಗಿಡಲು ಪ್ರಯತ್ನಿಸುತ್ತಿದೆ ಎಂಬ ಅನುಮಾನ ಬರುತ್ತಿದೆ ಮಂಗನಖಾಯಿಲೆ ಪೀಡಿತರ ನಿಖರ ಸಂಖ್ಯೆಯನ್ನೂ ನೀಡುತ್ತಿಲ್ಲ.ಜ್ವರ ಪೀಡಿತರು ಆಸ್ಪತ್ರೆಗೆ ಬಂದರೆ ರಕ್ತಪರೀಕ್ಷೆ ಮಾಡದೇ ಕೇವಲ ಮಾತ್ರೆಗಳನ್ನು ನೀಡಿ ಸಾಗಹಾಕಲಾಗುತ್ತಿದೆ.

ಕಳೆದ ವರ್ಷ ಮಂಗನಖಾಯಿಲೆಯಿಂದ ಸುಮಾರು 13 ಜನರು ಸತ್ತಿದ್ದರು ಆದರೆ ಆರೋಗ್ಯ ಇಲಾಖೆ,ಸ್ಥಳೀಯ ಆಡಳಿತ ಮಂಗನಖಾಯಿಲೆಯಿಂದ ಸತ್ತವರು ಕೇವಲ 6 ಮಂದಿ ಉಳಿದವರಲ್ಲಿ ಮಂಗನಖಾಯಿಲೆಯ ಲಕ್ಷಣವಿದ್ದರೂ ಸಾವಿಗೆ ಬೇರೆ ಕಾರಣವನ್ನು ತೋರಿಸಿ ಕೈತೊಳೆದುಕೊಂಡಿತ್ತು.
ಕಳೆದ ಹದಿನೈದು ದಿನಗಳ ಹಿಂದೆ ಉಸ್ತುವಾರಿ ಸಚೀವ
ಶಿವರಾಮ ಹೆಬ್ಬಾರ ಸಿದ್ದಾಪುರಕ್ಕೆ ಭೇಟಿ ನೀಡಿ ಸಭೆ ನಡೆಸಿದ ಸಂದರ್ಭದಲ್ಲಿ ಸಾರ್ವಜನಿಕರು ತಾಲೂಕಿಗೆ ಅವಶ್ಯಕವಿರುವ ವೆಂಟಿಲೆಟರ್ ಆಂಬುಲೆನ್ಸ್,ಮಣಿಪಾಲದಲ್ಲಿ ಉಚಿತ ಚಿಕಿತ್ಸೆ,ಹಾಗೂ ಜಾನುವಾರುಗಳಿಗೆ ನೀಡುವ ಇಂಜಕ್ಷನ್ ಗೆ ಬೇಡಿಕೆ ಇಟ್ಟಿದ್ದರು.

ಇದಕ್ಕೆ ಉತ್ತಮವಾಗಿ ಸ್ಪಂದಿಸಿದ ಸಚೀವರು ಈ ಎಲ್ಲ ಬೇಡಿಕೆಯನ್ನು ಈಡೇರಿಸಿದ್ದರು.
ಆದರೆ ಅಧಿಕಾರಿಗಳು ನಿರ್ಲಕ್ಷ ಮಾಡುವುದರಿಂದ ಈ ಎಲ್ಲ ಸೌಲಭ್ಯಗಳಿದ್ಸೂ ಅದರಿಂದ ಜನರಿಗೆ ಪ್ರಯೋಜನವಿಲ್ಲದಂತಾಗುತ್ತದೆ ಎಂದು ಸಾರ್ವಜನಿಕರು ಅಳಲು ವ್ಯಕ್ತಪಡಿಸಿದ್ದಾರೆ.

ಇಲ್ಲಿ ಎಲ್ಲವೂ ಸರಿ ಇದೆ.ಯಾವ ತೊಂದತೆಯೂ ಇಲ್ಲ ಎಂದು ಆಡಳಿತಕ್ಕೆ ತೋರಿಸಲು ಸ್ಥಳೀಯ ಅಧಿಕಾರಿಗಳು ಈ ರೀತಿ ಮಾಡುತ್ತಿದ್ದಾರೇನೋ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದೆ.

About the author

Adyot

Leave a Comment