ಆದ್ಯೋತ್ ಸುದ್ದಿ ನಿಧಿ : ರೋಝಾ ಮಾಡಲು ಸೋಂಕಿತರು ಅವಕಾಶ ಕೇಳಿದ್ದು, ಅದನ್ನು ನಿರಾಕರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಎಂ.ರೋಷನ್ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಿ.ಇ. ಓ, ನಿನ್ನೆ 12 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಸೋಂಕಿತರನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಿಗಾವಹಿಸಲಾಗುತ್ತಿದೆ. ರಂಜಾನ್ ಹಿನ್ನಲೆಯಲ್ಲಿ ರೋಝಾ ಮಾಡಲು ಆಸ್ಪತ್ರೆಯಲ್ಲಿ ಅವಕಾಶ ಕೊಡುವಂತೆ ಜಿಲ್ಲಾಡಳಿತಕ್ಕೆ ಸೊಂಕಿತರ ಮನವಿ ಮಾಡಿಕೊಂಡಿದ್ದರು. ರಂಜಾನ್ ಇರುವುದರಿಂದ ಉಪವಾಸವಿದ್ದು ಸೋಂಕಿತರು ರೋಝಾ ಮಾಡುತ್ತಿದ್ದರು. ಆದರೆ ಅವರ ಆರೋಗ್ಯ ಮತ್ತಷ್ಟು ಹದಗೆಡುವುದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಮನಪರಿವರ್ತನೆ ಮಾಡಿದ್ದೇವೆ. ಕಡ್ಡಾಯವಾಗಿ ಮಾತ್ರೆ ಸೇರಿದಂತೆ ಚಿಕಿತ್ಸೆಗೆ ಸಹಕರಿಸುವಂತೆ ಸೂಚನೆ ನೀಡಲಾಗಿದೆ. ರೋಝಾ ಅವಕಾಶವನ್ನು ತಿರಸ್ಕರಿಸಲಾಗಿದೆ ಎಂದರು.
👌👍