ಡಿಕೆಶಿ ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಣೆಗೆ ಕಾರ್ಯಕರ್ತರಿಗೆ ಅವಕಾಶ

ಆದ್ಯೋತ್ ಸುದ್ದಿನಿಧಿ:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ ಜೂನ್7 ರಂದು ಅಧಿಕಾರ ಸ್ವೀಕರಿಸಲಿದ್ದು
ಈ ಸಮಾರಂಭದಲ್ಲಿ ಕಾರ್ಯಕರ್ತರು ಪಾಲ್ಗೊಂಡು ವೀಕ್ಷಣೆಗೆ ಅನಕೂಲ ಕಲ್ಪಿಸುವ ಉದ್ದೇಶದಿಂದ ಉತ್ತರಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದ ಜಿಲ್ಲಾ ಕಾಂಗ್ರೆಸ್ ಸಮಿತಿಯು ಪ್ರತಿ ಮೂರು ವಿಧಾನಸಭಾ ಕ್ಷೇತ್ರಕ್ಕೆ ಸಂಯೋಜಕರನ್ನು,ಪ್ರತಿ ಬ್ಲಾಕ್ ಗೆ ವೀಕ್ಷಕರನ್ನು ನಿಯೋಜಿಸಿದೆ.
ಕಾರವಾರ,ಕುಮಟಾ,ಭಟ್ಕಳ ವಿಧಾನಸಭಾ ಕ್ಷೇತ್ರದ ಸಂಯೋಜಕರಾಗಿ ಡಿಸಿಸಿ ಪ್ರದಾನಕಾರ್ಯದರ್ಶಿ ವೆಂಕಟೇಶ ಹೆಗಡೆ ಹಾಗೂ ಹಳಿಯಾಳ,ಶಿರಸಿ,ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಡಿಸಿಸಿ ಪ್ರದಾನಕಾರ್ಯದರ್ಶಿ ರಮೇಶದುಭಾಶಿಯವರನ್ನು
ನಿಯೋಜಿಸಲಾಗಿದೆ‌.
ಅದೇ ರೀತಿ ಪ್ರತಿಬ್ಲಾಕ್ ಗೆ ವೀಕ್ಷಕರನ್ನು ನಿಯೋಜಿಸಲಾಗಿದ್ದು
ಎಂ.ಆರ್.ನಾಯ್ಕ,ಎಂ.ಬಿ.ಅಪ್ಪನ ಗೌಡರ್(ಹಳಿಯಾಳ)
ಕೃಷ್ಣ ದೇಸಾಯಿ,ಸತ್ಯಜಿತ್ ಗಿರಿ(ದಾಂಡೇಲಿ) ಆರ್.ಪಿ.ನಾಯ್ಕ,ಇಂದ್ರಕಾಂತ ಕಾಮೇಕರ(ಜೊಯಿಡಾ) ಕೆ.ಹೆಚ್.ಗೌಡ,ವಿನೋದ ನಾಯ್ಕ(ಕಾರವಾರ)
ಕೆ.ಶಂಭುಶೆಟ್ಟಿ,ನಾಗೇಶ ನಾಯ್ಕ(ಅಂಕೋಲಾ)
ಯೊಗೀಶ ರಾಯಕರ,ಚಂದ್ರಕಾಂತ ಕೊಚರೆಕರ(ಕುಮಟಾ)
ಚಂದ್ರಶೇಖರ ಗೌಡ,ವಾಮನ ನಾಯ್ಕ(ಹೊನ್ನಾವರ)
ಎಂ.ಎನ್.ಸುಬ್ರಹ್ಮಣ್ಯ,ಶಿವಾನಂದ ಹೆಗಡೆ(ಮಂಕಿ)
ಎಸ್.ಕೆ.ಭಾಗವತ,ಸತೀಶ ಎಂ.ನಾಯ್ಕ(ಭಟ್ಕಳ)
ಆರ್.ಎಂ.ಹೆಗಡೆ,ರವೀಂದ್ರ ಆಯ್.ನಾಯ್ಕ(ಶಿರಸಿ)
ದೀಪಕ ಆರ್ ಹೆಗಡೆ,ರಾಜು ಎನ್.ಉಗ್ರಾಣಕರ(ಸಿದ್ದಾಪುರ)
ಹೆಚ್.ಎಂ.ನಾಯ್ಕ,ಜಿ.ಎನ್.ಹೆಗಡೆ(ಯಲ್ಲಾಪುರ)
ಲಾರೆನ್ಸ್ ಸಿದ್ದಿ,ರತ್ನಾಕರ ನಾಯ್ಕ(ಮುಂಡಗೋಡು)
ಸೂರ್ಯಪ್ರಕಾಶಹೊನ್ನಾವರ,ಈಶ್ವರ ನಾಯ್ಕ(ಬನವಾಸಿ)

ಜೂನ್7 ರಂದು ಡಿ.ಕೆ.ಶಿವಕುಮಾರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ
ಅಪೇಕ್ಷಿಸಿದ್ದು ಅದಕ್ಕಾಗಿ ಕೆಲವು ನಿಯಮಾವಳಿಯನ್ನು ರೂಪಿಸಲಾಗಿದೆ.ಈಗಾಗಲೆ ಜಿಲ್ಲೆಯಲ್ಲಿ ಸಂಯೋಜಕರನ್ನು,ವೀಕ್ಷಕರನ್ನು ನಿಯೋಜಿಸಲಾಗಿದ್ದು ಜಿಲ್ಲೆಯ ಪ್ರತಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸಮಾರಂಭದ ವೀಕ್ಷಣೆಗೆ ಅನುಕೂಲ ಕಲ್ಪಿಸಲಾಗುವುದು.ಪಟ್ಟಣ ವ್ಯಾಪ್ತಿಯಲ್ಲಿ ಎರಡಕ್ಕಿಂತ ಹೆಚ್ಚು ಕಡೆಗೆ ಅನಕೂಲ ಕಲ್ಪಿಸಲಾಗುವುದು ಎಂದು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಆದ್ಯೋತ್ ನ್ಯೂಸ್ ಗೆ ತಿಳಿಸಿದ್ದಾರೆ.

About the author

Adyot

Leave a Comment