ಆದ್ಯೋತ ನ್ಯೂಸ್ ಡೆಸ್ಕ್ : ಕೊರೋನಾದಂತಹ ಭೀಕರ ರೋಗ ಕಾಡುತ್ತಿರುವ ಇಂತಹ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಹೋರಾಟ ನಡೆಸುತ್ತಿರುವ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಹಿತ ಕಾಪಾಡಬೇಕು ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ವಿಶ್ವಾರಾಧ್ಯ ಯಮೋಜಿ ಆಗ್ರಹಿಸಿದ್ದಾರೆ.
ಕೊವಿಡ್19 ರೋಗದ ವಿರುದ್ಧ ಹೋರಾಟದಲ್ಲಿ ಗುತ್ತಿಗೆ, ಹೊರಗುತ್ತಿಗೆ ನೌಕರರು ಸೇವಾ ಭದ್ರತೆ ಇಲ್ಲದೇ ಪ್ರಾಣದ ಹಂಗು ತೊರೆದು ಗಡಿಯಲ್ಲಿನ ಸೈನಿಕರಂತೆ ಪ್ರಾಣ ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರ ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ (ಖಾಯಮಾತಿ), ಆರೋಗ್ಯ ಮತ್ತು ಜೀವ ವಿಮೆ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಎಲ್ಲ ಸೌಕರ್ಯಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶಿಸಬೇಕು. ಕೋವಿಡ್-19 ವೈರಸ್ ಜಗತ್ತಿನಾದ್ಯಂತ ಹಬ್ಬುತ್ತಿದ್ದು ಇದರ ವಿರುದ್ಧ ಭಾರತ ಸರ್ಕಾರ ಸೇರಿದಂತೆ ಜಗತ್ತೇ ಸಮರ ಸಾರಿದೆ. ಈ ಸಮರದಲ್ಲಿ ಆರೋಗ್ಯ ಇಲಾಖೆ ನೌಕರರು ಸೈನಿಕರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಕಾಯಂ ನೌಕರರಿಗೆ ಸೇವಾ ಮತ್ತು ಜೀವ ಭದ್ರತೆ ಇರುತ್ತದೆ. ಆದರೆ ಪ್ರಮುಖವಾಗಿ ಪದಾತಿದಳದಂತೆ ಕಾರ್ಯನಿರ್ವಹಿಸುತ್ತಿರುವ ನಮ್ಮ ಆರೋಗ್ಯ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಮೂಲಸೌಲಭ್ಯಗಳೇ ಇಲ್ಲ, ಸೇವಾ ಭದ್ರತೆ ಇಲ್ಲ, ಜೀವಕ್ಕೂ ಭದ್ರತೆ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಐಸೋಲೇಟೆಡ್ ವಾರ್ಡ್, ಕಂಟ್ರೋಲ್ ರೂಮ್ ಗಳು ಸೇರಿದಂತೆ ಕೋವಿಡ್-19 ರೋಗಿಗಳ ಸಮೀಪದಲ್ಲಿಯೇ ಸೇವೆ ಸಲ್ಲಿಸುವ ಎಲ್ಲ ಕೆಲಸಗಳಿಗೆ ದಾಳದಂತೆ ಬಳಸಿಕೊಳ್ಳಲಾಗುತ್ತಿದೆ!
ಆದರೆ ಭದ್ರತೆ ಇಲ್ಲವಾದರೆ ಅವರ ಜೀವಕ್ಕೆ ಬೆಲೆ ಇಲ್ಲವೇ? ಇದೂ ಅಲ್ಲದೇ ಅವರನ್ನು ಅವಲಂಬಿಸಿದವರ ಪಾಡೇನು? ಅವರು ಹೇಗೆ ತಾನೆ ಕೆಲಸ ಮಾಡಬೇಕು ಮಾಡಿದರೆ ಅವರ ಜೀವಕ್ಕೆ ಅಪಾಯ ಸಂಭವಿಸಿದರೆ ಸರ್ಕಾರದ ಉತ್ತರದಾಯಿತ್ವವೇನು? ಇದೆಲ್ಲವನ್ನು ಗಮನಿಸಿ ತಕ್ಷಣ ನೌಕರರಿಗೆ ಜೀವ ಭದ್ರತೆ, ಸೇವಾ ಭದ್ರತೆಗಳನ್ನು ನೀಡಬೇಕು, ಕೋವಿಡ್ ನಂತಹ ಅಥವಾ ಇನ್ನಾವುದೇ ರಕ್ಕಸ ರೋಗದ ಜತೆ ಸೆಣಸುವಾಗ ಜೀವ ಕಳೆದುಕೊಂಡರೆ ಅವರಿಗೆ ಕಾಯಂ ನೌಕರರಿಗೆ ನೀಡುವ ಸರಿಸಮಾನ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ನಮ್ಮ ಸಂಘಟನೆ ಆಗ್ರಹವಾಗಿದೆ ಎಂದು ವಿಶ್ವಾರಾಧ್ಯ ಆಗ್ರಹಿಸಿದ್ದಾರೆ.
ಹೌದು ನ್ಯಾಯೋಚಿತ ಬೇಡಿಕೆಗೆ ಸ್ಪಂದಿಸುವುದು ಒಳಿತು.
100/ percent ivarige permanent madabeku ivararige hendati makkalu tande tahigalu iruthare. Manaviya drusti inda. Permanent madabeku