ಮೈ ಲೈಪ್-ಮೈ ಯೋಗಾ ಬ್ಲಾಗಿಂಗ್ ಸ್ಪರ್ಧೆಯಲ್ಲಿ ಡಾ.ಅಶ್ವತ್ ಹೆಗಡೆ ಪ್ರಥಮ

ಆದ್ಯೋತ್ ಸುದ್ದಿನಿಧಿ:
‘ಮೈ ಲೈಫ್ – ಮೈ ಯೋಗಾ’ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯ ವಿಜೇತರ ಹೆಸರನ್ನು ಆಯುಷ್ ಇಲಾಖೆ ಪ್ರಕಟಿಸಿದ್ದು, ವೃತ್ತಿಪರ ವಿಭಾಗದಲ್ಲಿ ಸಿದ್ದಾಪುರ ತಾಲೂಕಿನ ಬಾಳೇಕೊಪ್ಪದ ಡಾ. ಅಶ್ವತ್ ಹೆಗಡೆ (ಶಿರಸಿಯ ‘ಸಂಯೋಗ ಪೃಕೃತಿ ಚಿಕಿತ್ಸಾಲಯದ ವೈದ್ಯ), ಮತ್ತು ರಜನಿ ಗೆಹ್ಲೋಟ್
ಜಂಟಿಯಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ

ವಯಸ್ಕ ವಿಭಾಗದಲ್ಲಿ ರಾಜ್‌ಪಾಲ್ ಸಿಂಗ್ ಆರ್ಯ ಮತ್ತು ಶೈಲೀ ಪ್ರಸಾದ್ ಪ್ರಥಮ ಸ್ಥಾನ ಪಡೆದಿದ್ದರೆ, ಯುವ ವಿಭಾಗದಲ್ಲಿ ಪ್ರಣಯ್ ಶರ್ಮಾ ಮತ್ತು ನವ್ಯಾ ಎಸ್ ಎಚ್ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಈ ಜಾಗತಿಕ ಸ್ಪರ್ಧೆಯು ಆಯುಷ್ ಸಚಿವಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್)ನ ಜಂಟಿಯಾಗಿ ಆಯೋಜಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇದನ್ನು ಪ್ರಾರಂಭಿಸಿದರು. ಸ್ವತಃ ಪ್ರಧಾನಿಯವರು ವೀಡಿಯೋ ಸಂದೇಶ ಬಿಡುಗಡೆ ಮಾಡಿ, ಸ್ಪರ್ಧಿಗಳನ್ನು ಆಹ್ವಾನಿಸಿದ್ದರು.
ಭಾರತದಿಂದ ಒಟ್ಟು 35,141 ವೀಡಿಯೋಗಳನ್ನು ಮತ್ತು ಇತರ ದೇಶಗಳಿಂದ ಸುಮಾರು 2000 ವೀಡಿಯೋಗಳನ್ನು ಸ್ವೀಕರಿಸಲಾಗಿತ್ತು ಎಂದು ತಿಳಿದು ಬಂದಿದೆ.
ಸ್ಪರ್ಧೆಯನ್ನು ವೃತ್ತಿಪರರು, 18 ವರ್ಷಕ್ಕಿಂತ ಮೇಲ್ಪಟ್ಟವರು, ಮತ್ತು 18 ವರ್ಷದೊಳಗಿನವರು ಯುವಕರು ಎಂಬ 3 ವಿಭಾಗಗಳಲ್ಲಿ ನಡೆಸಲಾಗಿತ್ತು, ಪುರುಷ ಮತ್ತು ಮಹಿಳಾ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿತ್ತು. ದೇಶದೊಳಗಿನ ಸ್ಪರ್ಧಿಗಳ ವೀಡಿಯೋಗಳನ್ನು 200 ಯೋಗ ತಜ್ಞರು ವೀಕ್ಷಿಸಿದ್ದಾರೆ, ಇವುಗಳಲ್ಲಿ 160 ವೀಡಿಯೊಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು ಎಂದು ಆಯುಷ್‌ ಸಚಿವಾಲಯ ತಿಳಿಸಿದೆ. ಸಾಗರೋತ್ತರ ಸ್ಪರ್ಧಿಗಳಲ್ಲಿ ವಿಜೇತರ ಹೆಸರನ್ನು ನಂತರ ಪ್ರತ್ಯೇಕವಾಗಿ ಪ್ರಕಟಿಸಲಾಗುವುದು ಇಲಾಖೆ ಹೇಳಿದೆ.

About the author

Adyot

Leave a Comment