ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೆಗ್ಗರಣೆಸಮೀಪದ ಅತ್ತಿಗರಿಜಡ್ಡಿಯ ಡಾ.ಹರ್ಷವರ್ಧನ ಸಾಹಸವೊಂದು ಇಂಡಿಯಾ ಬುಕ್ ಆಪ್ ರೆಕಾರ್ಡನಲ್ಲಿ ದಾಖಲಾಗಿದೆ.
ಜಮ್ಮು-ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಬೈಸಿಕಲ್ ನಲ್ಲಿ 19 ದಿನ 5 ತಾಸುಗಳಲ್ಲಿ ಕ್ರಮಿಸುವ ಮೂಲಕ ಅತಿ ಕಡಿಮೆ ಅವಧಿಯಲ್ಲಿ 3785 ಕಿ.ಮಿ.ಕ್ರಮಿಸುವ ಮೂಲಕ ಇಂಡಿಯಾ ಬುಕ್ ಆಪ್ ರೆಕಾಡ್೯ನಲ್ಲಿ ದಾಖಲಾಗಿದ್ದಾರೆ.
ನವಂಬರ 14 2019 ರಂದು ಜಮ್ಮುಕಾಶ್ಮೀರದ ಶ್ರೀನಗರದ
ಲಾಲ್ ಚೌಕ್ ನಿಂದ ಬೆಳಿಗ್ಗೆ 7.30ಕ್ಕೆ ಹೊರಟ ಇವರು ಡಿಸಂಬರ್ 3 2019ರ ರಾತ್ರಿ 12ಕ್ಕೆ ಕನ್ಯಾಕುಮಾರಿ ತಲುಪಿದ್ದಾರೆ.
ಸೈನಿಕರಿಗೆ ಗೌರವ ಸೂಚಿಸುವ ಸಲುವಾಗಿ ಕೈಗೊಂಡ ಈ ಅಭಿಯಾನಕ್ಕೆ ಅವರು ಸೆಲ್ಯೂಟ್ ಫಾರ್ ಅವರ್ ಸೋಲ್ಜರ್
ಎನ್ನುವ ಘೋಷವಾಕ್ಯವನ್ನಿಟ್ಟುಕೊಂಡಿದ್ದರು.
ಈ ಯಾನ ಪ್ರಾರಂಭಿಸುವ ಮುನ್ನ 20 ದಿನಗಳ ಕಾಲ ಲಡಾಕ್ ನಲ್ಲಿ ಉಳಿದು ಬಾಡಿಗೆ ಸೈಕಲ್ ನಲ್ಲಿ ಪ್ರಪಂಚದ ಅತಿ ಎತ್ತರದ ರಸ್ತೆ ಎಂದು ಪ್ರಸಿದ್ದಿಯಾದ ಕರದುಂಗ್ಲಾ ರಸ್ತೆಯಲ್ಲಿ,ಲೆಹುಂಗ್ಲಾದಲ್ಲಿ ಪ್ರಾಕ್ಟಿಸ್ ನಡೆಸಿ ನಂತರ ವಿಶ್ವದ 2ನೇ ಅತಿ ಶೀತ ಪ್ರದೇಶ ಎಂದು ಕರೆಸಿಕೊಳ್ಳುವ ಲೇಹ್-ಶ್ರೀನಗರದ ನಡುವಿನ 400ಕಿ.ಮಿ.ರಸ್ತೆಯಲ್ಲಿ ಸಾಗಿಬಂದಿದ್ದಾರೆ.
ಸೈಕಲ್ ಗೆ ನಿರ್ಭಂದವಿರುವ 150ಕಿ.ಮಿ.ದಾರಿಯನ್ನು ಮಿಲಿಟರಿ ವಾಹನದಲ್ಲಿ ಬಂದಿದ್ದಾರೆ. ಆದ್ದರಿಂದ ಅವರ ಅಧಿಕೃತ ಯಾನ ಪ್ರಾರಂಭವಾಗಿದ್ದು ಶ್ರೀನಗರದಿಂದ.
ಜಮ್ಮುಕಾಶ್ಮಿರ,ಪಂಜಾಬ,ಹರಿಯಾಣ,ಮಧ್ಯಪ್ರದೇಶ,ರಾಜಸ್ಥಾನ,ಮಹಾರಾಷ್ಟ್ರ,ಕರ್ನಾಟಕ,ತಮಿಳುನಾಡು ಮೂಲಕ ಕನ್ಯಾಕುಮಾರಿ ತಲುಪಿದ್ದಾರೆ.
ಹುಬ್ಬಳ್ಳಿ ಕಿಮ್ಸ್ ನಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆದಿರುವ ಡಾ.ಹರ್ಷವರ್ಧನ ಎಂ.ಡಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಈ ಯುವ ವೈದ್ಯರು ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು
ಆದ್ಯೋತ್ ನ್ಯೂಸ್ ಹಾರೈಕೆ.