ಆದ್ಯೋತ್ ಸುದ್ದಿ ನಿಧಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವೊಂದು ಮುಂದುವರೆದ ರಿಲಾಕ್ಸೇಷನ್ ಗಳನ್ನು ಜಾರಿ ಮಾಡಿ ಕಾರ್ಮಿಕ ಹಾಗೂ ಸಕ್ಕರೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಅದೇಶನುಸಾರ ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಆಯಾ ಜಿಲ್ಲೆಯ ರಿಲಾಕ್ಸೇಷನ್ ಅಧಿಕಾರವನ್ನು ನೀಡಲಾಗಿತ್ತು. ಅದೇ ರೀತಿಯಲ್ಲಿ ಈ ಹಿಂದೆ ಮೇ 4 ರಂದು ಜಿಲ್ಲೆಯಲ್ಲಿ ಹಲವಾರು ಲಾಕ್ ಡೌನ್ ರಿಯಾಯಿತಿಗಳನ್ನು ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಘೋಷಿಸಿದ್ದರು. ನಂತರ ಹೋಟೆಲ್ ಹಾಗೂ ಆಟೋದವರು ಸಚಿವರಲ್ಲಿ ವಿನಾಯಿತಿಗಾಗಿ ಮನವಿ ಮಾಡಿಕೊಂಡಿದ್ದರು. ಅದರಂತೆ ಈಗ ಜಿಲ್ಲೆಯ ಗೋಕರ್ಣ ಹಾಗೂ ಬನವಾಸಿ ಗ್ರಾಮ ಪಂಚಾಯತ್ ಪ್ರದೇಶವಾದ್ದರಿಂದ ಅಲ್ಲಿನ ಅಂಗಡಿಗಳು ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಓಪನ್ ಇರಲಿವೆ. ಐಸ್ಕ್ರೀಂ ಪಾರ್ಲರ್ ಗಳಿಗೆ ಕೂಡ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಸಮಯಾವಕಾಶ ನೀಡಲಾಗಿದೆ. ಉಳಿದಂತೆ ಹೋಟೆಲ್ ಗಳಿಗೆ ಪಾರ್ಸಲ್ ನೀಡಲು ಹಾಗೂ ಆಟೋದವರಿಗೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಅವಕಾಶ ನೀಡಲಾಗಿದೆ. ಈ ರಿಯಾಯಿತಿ ಕಂಟೇನ್ಮೆಂಟ್ ಜೋನ್ ಭಟ್ಕಳ ಹೊರತುಪಡಿಸಿ ಜಿಲ್ಲೆಯ ಉಳಿದೆಡೆ ಇಂದಿನಿಂದ ಜಾರಿಯಾಗಲಿದೆ ಅಂತ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
👌