ಸಿದ್ದಾಪುರ ಧನ್ವಂತರಿ ಕಾಲೇಜ್ ನಲ್ಲಿ ಜ್ವರದ ‌ಕ್ಲಿನಿಕ್ ಉದ್ಘಾಟನೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದ ಶಿಕ್ಷಣ ಪ್ರಸಾರಕ ಸಮಿತಿಯ
ಧನ್ವಂತರಿ ಆಯುರ್ವೇದಿಕ್ ಕಾಲೇಜ್ ನಲ್ಲಿ ಸೋಮವಾರ ಜ್ವರ ಹೊರರೋಗಿಗಳ ವಿಭಾಗವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ರೂಪಾ ಭಟ್ಟ,ಜ್ವರ ಎನ್ನುವುದು ಮನುಷ್ಯನ ಹುಟ್ಟು- ಸಾವು ಸೇರಿದಂತೆ ಹಲವು ಸಂದರ್ಭಗಳಲ್ಲಿ ಕಂಡುಬರುತ್ತದೆ.ಇಂತಹ ಜ್ವರದ ಬಗ್ಗೆ ನಿರ್ಲಕ್ಷ ಮಾಡಬಾರದು.ಇಂದು ಜಗತ್ತನ್ನು ಕಾಡುತ್ತಿರುವ ಕೊವಿಡ್ ಎಂಬ ಖಾಯಿಲೆಯ ಲಕ್ಷಣಗಳ ಬಗ್ಗೆ ಆಯುರ್ವೇದ ಗ್ರಂಥಗಳಲ್ಲಿ ಕಂಡು ಬರುತ್ತದೆ.ಸಾಮಾಜಿಕ ಅಂತರದ ಬಗ್ಗೆ,ಹೊರಗಿನಿಂದ ಬಂದೊಡನೆ ಕೈ-ಕಾಲು-ಮುಖ ಸ್ವಚ್ಛಗೊಳಿಸುವ ಬಗ್ಗೆ ಉಲ್ಲೇಖವಿದೆ ಆದರೆ ಇದನ್ನು ಪಾಲಿಸದೆ ಇರುವ ಕಾರಣ ರೋಗವನ್ನು ತರಿಸಿಕೊಳ್ಳುತ್ತದ್ದೆವೆ‌. ಕೊವಿಡ್ ಮೂಲಕ ಇಂದು ಸತ್ಯದ ಅರಿವು ನಮಗೆ ಮೂಡುತ್ತಿದೆ ಎಂದು ಹೇಳಿದರು.
ಕೊವಿಡ್ ಸೇರಿದಂತೆ ಎಲ್ಲಾ ಜ್ವರಗಳಿಗೂ ಆಯುರ್ವೇದದಲ್ಲಿ ಚಿಕಿತ್ಸೆ ಇದೆ.ಮುಂದಿನ ದಿನಗಳಲ್ಲಿ ಮಲೆನಾಡಿನ ಭಾಗದಲ್ಲಿ ಕಾಣಿಸಿಕೊಳ್ಳುತ್ತಿರುವ ಕೆಎಪಡಿ ಗೂ ಔಷಧ ಕಂಡುಹಿಡಿಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಉದ್ಘಾಟಕ ಕೆಕ್ಕಾರ ನಾಗರಾಜ ಭಟ್ಟ ಮಾತನಾಡಿ,ದಿ.ದೊಡ್ಮನೆ ಗಣೇಶ ಹೆಗಡೆಯವರು ಹಲವು ರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದು ಅದರಲ್ಲಿ ಧನ್ವಂತರಿ ಆಯುರ್ವೇದಿಕ್ ಕಾಲೇಜ್ ಒಂದಾಗಿದೆ.ಅವರ ನಂತರದಲ್ಲಿ ಅವರ ಕುಟುಂಬದ ವಿನಾಯಕರಾವ್ ಹೆಗಡೆ ಹಾಗೂ ಡಾ.ಶಶಿಭೂಷಣ ಹೆಗಡೆ ಅದನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದು ಇಂದು ಉದ್ಘಾಟನೆಗೊಂಡಿರುವ ಜ್ವರದ ಕ್ಲಿನಿಕ್ ಬಹುಪಯೋಗಿಯಾಗಿರುತ್ತದೆ.ಎಲ್ಲಾ ರೋಗಕ್ಕೂ ಆಯುರ್ವೇದದಲ್ಲಿ ಚಿಕಿತ್ಸೆ ಇದೆ ಆದರೆ ನಮಗೆ ಇದರ ಬಗ್ಗೆ ಅರಿವಿಲ್ಲ‌. ಲಾಕ್ ಡೌನ್ ತೆರವುಗೊಳಿಸಿರುವ ಕಾರಣ ಮುಂದಿನ ದಿನಗಳಲ್ಲಿ ಜ್ವರ ಪೀಡಿತರ ಸಂಖ್ಯೆ ಹೆಚ್ಚಾಗಲಿದೆ.ಹೀಗಾಗಿ ಜ್ವರದ ಕ್ಲಿನಿಕ್ ಪ್ರಾರಂಭಿಸಿರುವುದು ಸಮಯೋಚಿತವಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ.ಶಶಿಭೂಷಣ ಹೆಗಡೆ,ತಾಂತ್ರಿಕವಾಗಿಬದಲಾವಣೆಯಾಗುತ್ತಿರುವ
ಈ ಸಂದರ್ಭದಲ್ಲಿ ನಮ್ಮ ಸಮಿತಿಯ ಎಲ್ಲಾ ಶಿಕ್ಷಣ ಸಂಸ್ಥೆಗಳು ಅದಕ್ಕನುಗುಣವಾಗಿ ಶಿಕ್ಷಣವನ್ನು ಆಯೋಜಿಸುತ್ತಿದೆ.ನಮ್ಮ ಆಯುರ್ವೇದ ಕಾಲೇಜ್ ನಿಂದ ಹಿಡಿದು ಎಲ್ಲಾ ತರಗತಿಗಳು ಆನ್ ಲೈನ್ ಮೂಲಕ ಶಿಕ್ಷಣ ನೀಡಲು ಪ್ರಾರಂಭಿಸಿವೆ. ನಮ್ಮ ಕಾಲೇಜ್ ನ ಚಿಕಿತ್ಸಾ ವಿಭಾಗದಲ್ಲಿ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.ಕೊವಿಡ್ ಸಂದರ್ಭದಲ್ಲಿ ಹೊರರೋಗಿಗಳ ವಿಭಾಗವನ್ನು ಮುಚ್ಚಲಾಗಿತ್ತು ಈಗ ಜ್ವರದ ಕ್ಲಿನಿಕ್ ಪ್ರಾರಂಭಿಸುವುದರೊಂದಿಗೆ ಎಲ್ಲಾ ಚಿಕಿತ್ಸೆಗೂ ಸಿದ್ದವಾಗಿದ್ದೇವೆ ಎಂದು ಹೇಳಿದರು.

ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ವಿನಾಯಕರಾವ್ ಹೆಗಡೆ,ಡಾ.ಸಮೀರ ಬಾದ್ರಿ,ಪ್ರೋ.ರಾಘವೇಂದ್ರ,ಶ್ರೀಕಾಂತ ಹೆಗಡೆ,ಜಿ.ಕೆ.ಭಟ್ಟ ಮುಂತಾದವರು ಉಪಸ್ಥಿತರಿದ್ದರು.

About the author

Adyot

1 Comment

Leave a Comment