“ಬೋಲ್ ಜೈ ಸೇವಾಲಾಲ್” ಸಿನೇಮಾ ಚಿತ್ರೀಕರಣ ಪ್ರಾರಂಭ

ಆದ್ಯೋತ್ ಸಿನೇಮಾಸುದ್ದಿ:
ಸೇವಾಭಯಾ ಕ್ರಿಯೇಷನ್ಸ್ ಬೆಂಗಳೂರ ಬ್ಯಾನರ್. ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ‘ಬೋಲ್
ಜೈ ಸೇವಾಲಾಲ್ ’ ಕನ್ನಡ ಹಾಗೂ ಬಂಜಾರ ಭಾಷೆಯ ಚಲನಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ವರಮುನೀಶ್ವರ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು.
ಮಾಜಿ ಶಾಸಕ ಕರಿಯಣ್ಣ ಸಂಗಟಿಯವರು ಚಿತ್ರಕ್ಕೆ ಆರಂಭ ಫಲಕವನ್ನು ತೋರಿಸಿ ಚಿತ್ರವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಬೆಂಗಳೂರಿನ ಉದ್ಯಮಿ ವೆಂಕಟೇಶ ಮೂರ್ತಿ ಕ್ಯಾಮರಾ ಚಾಲನೆ ಮಾಡಿದರು.

ಬೋಲ್ ಜೈ ಸೇವಾಲಾಲ್ ಚಿತ್ರ, ಅಂಡರ್ವಲ್ಡ್ ನಲ್ಲಿ ದೊಡ್ಡ ಕ್ರಿಮಿನಲ್ ಆಗಿರುವ ತನ್ನ ತಂದೆಯನ್ನು ಹುಡುಕಿಕೊಂಡು ಬರುವ ಮಗಳ ಕಥೆಯಾಗಿದ್ದು,ವಿಲನ್ ಪಾತ್ರದಾರಿ ಶಾಸಕ ಹಾಗೂ ಅವನ ಮಗನು ಜನರ ಮೇಲೆ ತೋರುವ ದಬ್ಬಾಳಿಕೆಯ ಜೊತೆಗೆ,ಬಂಜಾರರ ಮತಾಂತರವನ್ನು ನಾಯಕ ವಿರೋಧಿಸುವ ಮೂಲಕ ಜನಜಾಗೃತಿ ಮೂಡಿಸುವ ಅಂಶಗಳನ್ನು ಚಿತ್ರದಲ್ಲಿ ತೋರಿಸಲಾಗುತ್ತಿದೆ.
ಪ್ರಥಮವಾಗಿ ಬಂಜಾರ ಭಾಷೆಯ ಚಿತ್ರ ಹೊರದೇಶದಲ್ಲಿ ಚಿತ್ರೀಕರಣವಾಗಲಿದೆ ಎರಡು ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು, ಬೆಂಗಳೂರ ಸುತ್ತಮುತ್ತ, ಗೋವಾ, ಮುಂಬೈ, ಮಲೇಶಿಯಾ, ಹಾಂಕಾಂಗ್ ನಲ್ಲಿ ಚಿತ್ರೀಕರಣ ಮಾಡುವದಾಗಿ ನಿರ್ಮಾಪಕರಾದ ಹೇಮಂತಕುಮಾರ್ ಹೇಳಿದ್ದಾರೆ.
ಚಿತ್ರದಲ್ಲಿ ಹೊಸಬಗೆಯ ರಾಪ್,ಡಿಜೆ ಸಾಂಗ್‌ಗಳನ್ನು ಬಳಸಲಾಗುತ್ತದೆ.ಹಾಡುಗಳನ್ನು ಊಟಿ,ಚಿಕ್ಕಮಗಳೂರು ಮುಳ್ಳಯ್ಯನಗಿರಿ ಬೆಟ್ಟದ ಸುತ್ತಮುತ್ತ ಹಾಗೂ ಗೋವಾದಲ್ಲಿ ಚಿತ್ರೀಕರಿಸಲಾಗುತ್ತದೆ ಎಂದು ಚಿತ್ರದ ಸಂಗೀತ ನಿರ್ದೇಶಕ ಗೋಪಿ ಕಲಾಕಾರ್ ತಿಳಿಸಿದರು.
ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ಪೀಟರ್ ಹಾಗೂ ಶಿವಶರಣ ಸುಗ್ನಳ್ಳಿ,ಸಾಹಸ ಕೌರವ ವೆಂಕಟೇಶ,ಪ್ರಸಾಧನ ವರ್ಷ, ಸಂಗೀತ ಗೋಪಿ ಕಲಾಕಾರ್,ಗ್ರಾಫಿಕ್ಸ್ ಶಾಲ್ ಚವ್ಹಾಣ, ಸಂಕಲನ ವಿಶಾಲ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ,ಕಥೆ,ಚಿತ್ರಕಥೆ, ಸಂಭಾಷಣೆಯನ್ನು ಸುನೀಲಕುಮಾರ್ ಚವ್ಹಾಣ,
ನಿರ್ದೇಶನ ಜೊತೆಗೆ ನಿರ್ಮಾಣದ ಹೊಣೆಯನ್ನು ಹೇಮಂತಕುಮಾರ್ ಹೊತ್ತಿದ್ದಾರೆ.
ತಾರಾಗಣದಲ್ಲಿ ಹೇಮಂತ್ ಕುಮಾರ್,ಪುನೀತ್ ನಾಯಕ್, ಐಶ್ವರ್ಯ, ರೇಖಾದಾಸ್, ಶೋಭರಾಜ್, ಮೈಸೂರ ರಮಾನಂದ, ಕೆಜಿಎಫ್ ಕೃಷ್ಣಪ್ಪ, ಹಂಟರ್, ಮೀಸೆ ಗಂಗಪ್ಪ ಉತ್ತರ ಕರ್ನಾಟಕದ ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ.

About the author

Adyot

Leave a Comment