ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಬೆಂಕಿ

ಆದ್ಯೋತ್ ನ್ಯೂಸ್ ಡೆಸ್ಕ್: ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ಘಟಕದಲ್ಲಿ ರವಿವಾರ ಬೆಂಕಿ ಕಾಣಿಸಿಕೊಂಡಿದ್ದು ಅಲ್ಲಿದ್ದ ಸುಮಾರು 34 ಮಕ್ಕಳನ್ನು ಅಪಾಯದಿಂದ ಪಾರು ಮಾಡಲಾಗಿದೆ.


ಸಂಜೆ 5-6 ಗಂಟೆಯ ಸುಮಾರಿಗೆ ಆರ್ಭಟಿಸಿದ ಮಳೆ-ಗುಡುಗು, ಸಿಡಿಲಿನಿಂದಾಗಿ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ವೈದ್ಯರ ಹಾಗೂ ಸಿಬ್ಬಂದಿಗಳ ತಕ್ಷಣದ ಕಾರ್ಯಾಚರಣೆಯಿಂದ ಒಂದು ತಿಂಗಳ ಒಳಗಿನ 25 ಮಕ್ಕಳನ್ನು ಹಾಗೂ ಎರಡು-ಮೂರು ವರ್ಷದ ಒಳಗಿನ 9 ಮಕ್ಕಳನ್ನು ಪಾರು ಮಾಡಲಾಗಿದ್ದು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಬೆಂಕಿಯಿಂದಾಗಿ ಮಕ್ಕಳ ಘಟಕದ ಎ.ಸಿ ಸೇರಿದಂತೆ ಉಪಕರಣಗಳು ಸುಟ್ಟು ಹೋಗಿದೆ. ಸ್ಥಳಕ್ಕೆ ಸಚಿವ ಈಶ್ವರಪ್ಪ ಹಾಗೂ ಜಿಲ್ಲಾಧಿಕಾರಿ ಶಿವಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

About the author

Adyot

Leave a Comment