ಮಂಗನಕಾಯಿಲೆಗೆ ಜಿಲ್ಲೆಯಲ್ಲಿ ಮೊದಲ ಬಲಿ

ಸಿದ್ದಾಪುರ : ಕಳೆದ ವರ್ಷ ರಾಜ್ಯದಲ್ಲಿ ಮರಣ ಮೃದಂಗ ಬಾರಿಸಿದ್ದ ಮಂಗನಕಾಯಿಲೆ ಈ ವರ್ಷ ಕೂಡಾ ನಿಧಾನವಾಗಿ ಅವರಿಸುತ್ತಿದ್ದು, ಕಾಯಿಲೆಗೆ ಜಿಲ್ಲೆಯ ಒಬ್ಬರು ಮೃತಪಟ್ಟಿದ್ದಾರೆ.


ಸಿದ್ದಾಪುರದ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಂಗನಕಾಯಿಲೆ ಕಂಡುಬಂದಿದ್ದು, ಕಾಯಿಲೆಗೆ ಗಿಳಸೆ ಗ್ರಾಮ ವ್ಯಾಪ್ತಿಯ ಸಮೀಪದ ಹಳ್ಳಿಯ ಅಂದಾಜು 64 ವರ್ಷ ಪ್ರಾಯದ ವ್ಯಕ್ತಿಯೋರ್ವರು ನಿನ್ನೆ ರಾತ್ರಿ ಮರಣ ಹೊಂದಿದ್ದಾರೆ. ಕಳೆದ ಕೆಲವು ದಿನಗಳಿಂದ ತಾಲೂಕಿನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ರೋಗ ಉಲ್ಬಣವಾಗಿ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಒಯ್ಯಲಾಗಿತ್ತು. ಆದರೆ ಅಲ್ಲಿಯೂ ಕೂಡ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮಣಿಪಾಲ ಆಸ್ಪತ್ರೆಗೆ ಕೊಂಡೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದು, ಮಂಗನಕಾಯಿಲೆ ಇರೋದನ್ನ ಆರೋಗ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.


ಇನ್ನು ಇದೇ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಸತತ 3 ಬಾರಿ ಲಸಿಕೆ ತೆಗೆದುಕೊಂಡ ಮಹಿಳೆಯೊಬ್ಬರಲ್ಲಿ ಕೂಡ ಮಂಗನಕಾಯಿಲೆ ಕಾಣಿಸಿಕೊಂಡಿದ್ದು, ಅವರೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಸಿಕೆ ಪಡೆದರೂ ಕೂಡ ಮಂಗನಕಾಯಿಲೆ ಉಲ್ಬಣಿಸುತ್ತಿರೋದು, ಸರ್ಕಾರ ಈ ಕುರಿತು ಗಮನಹರಿಸಿ ರೋಗ ಉಲ್ಬಣವಾಗದಂತೆ ಕ್ರಮ ಕೈಗೊಳ್ಳಬೇಕು ಅನ್ನೋದು ಸಾರ್ವಜನಿಕರ ಅಗ್ರಹವಾಗಿದೆ.

About the author

Adyot

1 Comment

Leave a Comment