ಆದ್ಯೋತ್ ಸುದ್ದಿನಿಧಿ:
ಕಳೆದ ಎರಡು ತಿಂಗಳಿಂದ ಉತ್ತರಕನ್ನಡ ಜಿಲ್ಲೆಯ ಭಟ್ಳಳ ಪಟ್ಟಣವನ್ನು ಲಾಕ್ ಡೌನ್ ಮಾಡಲಾಗಿತ್ತು.
ರಾಜ್ಯದಲ್ಲಿ ಕೊವಿಡ್ ಪ್ರಕರಣಗಳು ಪ್ರಾರಂಭಿಕ ಹಂತದಲ್ಲಿದ್ದಾಗಲೆ ಭಟ್ಕಳದಲ್ಲಿ ಕೊವಿಡ್ ಪ್ರಕರಣ ಕಾಣಿಸಿಕೊಂಡ ಕಾರಣ ಲಾಕ್ ಡೌನ್ ಮಾಡಲಾಗಿತ್ತು.ಈಗ ಭಟ್ಕಳ ಸೊಂಕಿತರಲ್ಲ್ಲಿ ಹೆಚ್ಚಿನವರು ಗುಣಮುಖರಾಗಿದ್ದು ನಾಲ್ವರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ ಈ ಹಿನ್ನಲೆಯಲ್ಲಿ ಭಟ್ಕಳ ಪಟ್ಟಣದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡುವ ಬಗ್ಹೆ ಜಿಲ್ಲಾಡಳಿತ ತೀರ್ಮಾನಿಸಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ್ ಗುರುವಾರ ಭಟ್ಳಳದಲ್ಲಿ ಸುದ್ದಿಗೋಷ್ಠಿ ನಡೆಸಿದರು.
“ಶುಕ್ರವಾರದಿಂದ ಭಟ್ಕಳದ 5 ಕಂಟೈನಮೆಂಟ್ ವಲಯವಾದ
ಮದಿನಾ ಕಾಲೋನಿ, ಉಸ್ಮಾನಿಯಾ ರಸ್ತೆ, ಗುಡ್ ಲಕ್ ರಸ್ತೆ, ಕೋಗ್ತಿ ನಗರ, ಸುಲ್ತಾನ ಸ್ಟ್ರೀಟ್ ಹೊರತುಪಡಿಸಿ ಪಟ್ಟಣದ ಉಳಿದೆಡೆ ಕೆಲವು ಅಂಗಡಿ ಸೇರಿ ಚಟುವಟಿಕೆಗಳಿಗೆ ಲಾಕ್ ಡೌನ ಸಡಿಲಿಕೆ ಮಾಡಲಾಗಿದ್ದು ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ 2 ಗಂಟೆಯ ತನಕ ಜನರ ಓಡಾಟ, ವ್ಯಾಪಾರ ವಹಿವಾಟಿಗೆ ವಿನಾಯತಿ ಇರಲಿದೆ ಎಂದು ಹೇಳಿದರು.
ಎರಡು ತಿಂಗಳ ಬಳಿಕ ಭಟ್ಕಳ ಪಟ್ಟಣ ಕಂಟೇನ್ಮೆಂಟ್ ಝೋನ್ ದಿಂದ ಸಡಿಲಿಕೆ ಮಾಡಲಿದ್ದೇವೆ. ಭಟ್ಳಳದ 4 ಪ್ರಕರಣ ಮಾತ್ರ ಕಿಮ್ಸನಲ್ಲಿದ್ದು ಚಿಕಿತ್ಸೆ ಜಾರಿಯಲ್ಲಿದೆ. ಪಟ್ಟಣ ವ್ಯಾಪ್ತಿಯಲ್ಲಿ ಒಂದೇ ಸಮನೆ ಸಡಿಲಿಕೆ ಮಾಡಿದರೆ ಜನರ ನಿಯಂತ್ರಣ ಕಷ್ಟ ಸಾದ್ಯವಾದ ಹಿನ್ನೆಲೆ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆ ಹಾಗು ತಾಲೂಕಾಢಳಿತದ ಸುದೀರ್ಘ ಚರ್ಚೆಯ ಬಳಿಕ ಹಂತ ಹಂತವಾಗಿ ಲಾಕ್ ಡೌನ ಸಡಿಲಿಕೆಯ ಬಗ್ಗೆ ಚಿಂತನೆ ಮಾಡಿ ಆದೇಶ ನೀಡಲಾಗಿದೆ ಎಂದರು.
ಕಂಟೈನ ಮೆಂಟ್ ವಲಯವಾದ 5 ಪ್ರದೇಶದಲ್ಲಿ 100 ಮೀ. ವ್ಯಾಪ್ತಿ ಗುರುತಿಸಿ ಲಾಕ್ ಮಾಡಿ ಪೊಲೀಸ್ ಹೆಲ್ಪ ಡೆಸ್ಕ ಕಾರ್ಯ ಮುಂದುವರೆಯಲಿದೆ. ಇದರೊಂದಿಗೆ ಈ ವಲಯದಲ್ಲಿ ಯಾವುದೇ ಚಟುವಟಿಕೆಗೆ ಅವಕಾಶವಿರುವುದಿಲ್ಲ. ಇಲ್ಲಿನ ಜನರು ವಲಯದಿಂದ ಒಳಗೆ ಮತ್ತು ಹೊರಗೆ ಹೋಗಲು ಮೊದಲಿನಂತೆಯೇ ಕಾನುನು ಪಾಲನೆ ಮಾಡಬೇಕಿದೆ. ಪ್ರಕರಣ ಇರುವ ಕಡೆ ಮಾತ್ರ ಕಂಟೈನ ಮೆಂಟ್ ವಲಯ ಮಾಡಲಿರುವ ಹಿನ್ನೆಲೆ ಪೊಲೀಸರಿಗೆ ನಿಗಾ ವಹಿಸಲು ಅನುಕೂಲವಾಗಲಿದೆ ಎಂದು ಹೇಳಿದ ಶಿವಪ್ರಕಾಶ್, ಸಡಿಲಿಕೆಯ ವಿನಾಯಿತಿ ನೀಡಲಿರುವ ಜಿಲ್ಲಾಢಳಿತವೂ ಕೆಲವು ಷರತ್ತು ಹಾಕಲಾಗಿದೆ.
ಶುಕ್ರವಾರ ಮತ್ತು ಶನಿವಾರದಂದು ಅಗತ್ಯ ವಸ್ತುಗಳಾದ
ಕಿರಾಣಿ ಅಂಗಡಿ, ಮೆಡಿಕಲ್ ಶಾಪ್, ಬ್ಯಾಂಕ್, ಗ್ಯಾರೇಜ್, ಸಲೂನ್, ಪೆಟ್ರೋಲ್ ಬಂಕ್ ಸೇರಿದಂತೆ ಕಟ್ಟಡ ನಿರ್ಮಾಣದ ಮಾರಾಟ ಸಾಮಗ್ರಿಗಳ ಅಂಗಡಿಯನ್ನು ತೆರೆಯಲಿದ್ದು, ಭಾನುವಾರದಂದು ರಾಜ್ಯ ಸರಕಾರದ ಲಾಕ್ ಡೌನ ಆದೇಶ ಮುಂದುವರೆಯಲಿದೆ ಎಂದು ಹೇಳಿದರು.
ಕಾನೂನು ಮೀರಿದರೆ ಕಠಿಣ ಕ್ರಮ
ಜೂನ್ 1 ಸೋಮವಾರದಿಂದ ಪಟ್ಟಣದಲ್ಲಿ ಇನ್ನಷ್ಟು ಸಡಿಲಿಕೆಯ ಜೊತೆಗೆ ಕೆಲ ಉದ್ದಿಮೆಗಳು ಸೇರ್ಪಡೆಯೊಂದಿಗೆ ಆಟೋ ಮೊಬೈಲ್ ಅಂಗಡಿ,ಆಟೋ ರಿಕ್ಷಾಗಳ ಓಡಾಟ, ಸ್ಟೀಲ್ ಅಂಗಡಿ, ಬಟ್ಟೆ ಅಂಗಡಿ, ಪೈಪ್ ಸೇರಿದಂತೆ ಸರಕು ಮಾರಾಟದ ಅಂಗಡಿ ಜೊತೆಗೆ ಷರತ್ತು ಬದ್ದವಾಗಿ ಸೂಪರ್ ಮಾರ್ಕೆಟ್ ಗಳನ್ನು ತೆರೆಯಬಹುದಾಗಿದೆ. ಎಂದಿನಂತೆ ಹೋಟೆಲಗಳಲ್ಲಿ ಪಾರ್ಸಲ್ ಸೇವೆ ಮುಂದುವರೆಯಲಿದೆ ಎಂದರು.
ಶುಕ್ರವಾರ ಮತ್ತು ಶನಿವಾರದ ಸಡಿಲಿಕೆಯಲ್ಲಿ ಜನರ ಓಡಾಟದ ಮೇಲೆ ಗಮನವಿಟ್ಟು ಮುಂದಿನ ಬದಲಾವಣೆ ಮಾಡಲು ಅನೂಕೂಲ ಆಗಲಿದ್ದು ಈ ಸಡಿಲಿಕೆಯೂ ಜೂನ್ 8 ತನಕ ಗಮನವಿಡಲಿದ್ದೇವೆ. ಅದರಲ್ಲಿ ಒಂದು ವಾರದಲ್ಲಿ ಜನರ ಓಡಾಟ, ಸಾಮಾಜಿಕ ಅಂತರ, ಮಾಸ್ಕ ಧರಿಸುವುದು, ಈ ಮಧ್ಯೆ ಕೋರೋನಾ ಪ್ರಕರಣದ ಎಚ್ಚರಿಕೆಯನ್ನಾಧರಿಸಿ
ಜೂನ್ 8 ರ ಬಳಿಕ ಇನ್ನಷ್ಟು ಸಡಿಲಿಕೆಗೆ ಚಿಂತನೆ ಮಾಡಲಿದ್ದೇವೆ ಈ ಅವಧಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ ಕಡ್ಡಾಯವಾಗಿರುತ್ತದೆ.
ಸಡಿಲಿಕೆಯಲ್ಲಿ ತೆರೆಯಲಾದ ಎಲ್ಲಾ ಅಂಗಡಿಕಾರರು ಅವರ ಜೊತೆಗೆ ಗ್ರಾಹಕರು ಸಾಮಾಜಿಕ ಅಂತರ ಮಾಸ್ಕ ಧರಿಸುವಂತೆ ಗಮನಿಸುವ ಜವಾಬ್ದಾರಿ ಹೊರಲಿದ್ದಾರೆ. ಒಂದು ವೇಳೆ ಕಾನುನು ಉಲ್ಲಂಘನೆ ಆಗಿದ್ದಲ್ಲಿ ಅಂತಹ ಅಂಗಡಿಗಳ ಪರವಾನಿಗೆ ರದ್ದು ಆಗಲಿದ್ದು ಈ ಮಧ್ಯೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ,ಸಾರ್ವಜನಿಕರು,ಪತ್ರಕರ್ತರ ಜೊತೆಗೆ ನಿರಂತರ ಸಂಪರ್ಕದಲ್ಲಿರಲಿದೆ ಎಂದು ಎಚ್ಚರಿಸಿದರು.
ಭಟ್ಳದಲ್ಲಿ ಕಳೆದ ಎರಡು ವಾರದಲ್ಲಿ 28 ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಕೆಲವು ಕಠಿಣ ಕ್ರಮತೆಗೆದುಕೊಳ್ಳಲಾಯಿತು ಜಿಲ್ಲೆಯ ಬೇರೆ ತಾಲೂಕಿನಲ್ಲಿ ಕ್ವಾರಂಟೈನ್ ಇದ್ದವರಿಗೆ ಕೋರೊನಾ ಪಾಸಿಟಿವ್ ಬಂದಿದ್ದ ಹಿನ್ನೆಲೆ ಸಮುದಾಯಕ್ಕೆ ಹರಡಲಿಲ್ಲ ಹಾಗೂ ಯಾರು ಸಹ ಜನರೊಂದಿಗೆ ಸಂಪರ್ಕ ಇಲ್ಲದವರಾಗಿದ್ದಾರೆ. ಈಗ ಭಟ್ಳಳದಲ್ಲಿ ಕೊವಿಡ್ ನಿಯಂತ್ರಣದಲ್ಲಿದೆ.ಲಾಕ್ ಡೌನ್ ಸಡಿಲಿಕೆಯ ಸಂದರ್ಭದಲ್ಲಿ ಕೊವಿಡ್ ಪ್ರಕರಣ ಏರಿಕೆಯಾದರೆ ಮತ್ತೆ ಲಾಕ್ ಡೌನ ಅನಿವಾರ್ಯ ಆಗಲಿದೆ ಎಂದು ಹೇಳಿದರು.
ಸ್ವಯಂಸೇವಕರ ನೇಮಕ:
ಸಾಮಾಜಿಕ ವರದಿಯಿಂದ ಕೋರೋನಾ ನಿಯಂತ್ರಣ ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲೆ ಹಾಗೂ ತಾಲೂಕಾಢಳಿತ ಸಾರ್ವಜನಿಕರಿಂದ ಸಾಮಾಜಿಕ ವರದಿಯ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಪಟ್ಟಣ ವ್ಯಾಪ್ತಿಯ ವಾರ್ಡಗೆ ಒಬ್ಬರಂತೆ ಸ್ವಯಂಸೇವಕರನ್ನು ತಾಲೂಕಾಡಳಿತ ನಿಯಮಿಸಲಿದ್ದು ಹೊಸದಾಗಿ ತಾಲೂಕಿಗೆ ಅಥವಾ ಆಯಾ ವಾರ್ಡಗೆ ಬಂದವರ ಬಗ್ಗೆ ಮಾಹಿತಿ ಕಲೆ ಹಾಕಿ ತಾಲೂಕಾಡಳಿತಕ್ಕೆ ತಿಳಿಸಬೇಕು. ಇದರಿಂದ ಸಾರ್ವಜನಿಕರಿಗೆ ಒಂದು ಜವಾಬ್ದಾರಿ ನೀಡಿದಂತಾಗುತ್ತದಲ್ಲದೆ ಕೊವಿಡ್ ನಿಯಂತ್ರಣವೂ ಸಾಧ್ಯವಾಗಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಹಾಯಕ ಆಯುಕ್ತ ಭರತ್ ಎಸ್,ಡಿವೈಎಸ್ಪಿ ನಿಖಿಲ್ ಬಿ., ತಹಸೀಲ್ದಾರ ಎಸ್. ರವಿಚಂದ್ರ ಉಪಸ್ಥಿತರಿದ್ದರು.