ಆದ್ಯೋತ್ ಸುದ್ದಿನಿಧಿ: ಗಣೇಶ ಚತುರ್ಥಿ ಆಚರಣೆಯ ಪರಿಷ್ಕೃತ ಮಾರ್ಗ ಸೂಚಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವಿಟ್ಟರ್ ಮೂಲಕ ಮಂಗಳವಾರ ಮಧ್ಯಾಹ್ನ12ಗಂಟೆಯ ಸುಮಾರಿಗೆ ಪ್ರಕಟಿಸಿದ್ದಾರೆ.
ಈ ಪರಿಷ್ಕೃತ ಮಾರ್ಗ ಸೂಚಿಯ ಪ್ರಕಾರ ಕೇವಲ ಮನೆ ಮತ್ತು ದೇವಸ್ಥಾನವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಹಿಂದೆ ಯಾವ ಪ್ರಕಾರವಾಗಿ ಗಣೇಶ ಮೂರ್ತಿ ಸ್ಥಾಪಿಸುತ್ತಿದ್ದರೋ ಅದೇ ಪ್ರಕಾರವಾಗಿ ಸ್ಥಾಪಿಸಬಹುದು. ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸುವ ಗಣೇಶ ವಿಗ್ರಹದ ಎತ್ತರ ನಾಲ್ಕು ಅಡಿ ಮೀರಿರಬಾರದು, ಮನೆಯಲ್ಲಿ ಸ್ಥಾಪಿಸುವ ವಿಗ್ರಹದ ಎತ್ತರ ಎರಡು ಅಡಿ ಮೀರಿರಬಾರದು. ಮನೆಯಲ್ಲಿ ಸ್ಥಾಪಿಸಿದ ವಿಗ್ರಹವನ್ನು ಮನೆಯ ಆವರಣದಲ್ಲೇ ವಿಸರ್ಜಿಸಬೇಕು ಸಾರ್ವಜನಿಕ ಗಣಪತಿ ವಿಗ್ರಹವನ್ನು ಸ್ಥಳೀಯ ಆಡಳಿತ ಸೂಚಿಸಿದ ಸ್ಥಳದಲ್ಲೆ ವಿಸರ್ಜಿಸಬೇಕು. ಗಣೇಶ ವಿಗ್ರಹ ಸ್ಥಾಪಿಸಲು ಸ್ಥಳೀಯ ಆಡಳಿತದ ಅನುಮತಿ ಕಡ್ಡಾಯವಾಗಿರುತ್ತದೆ. ಒಂದು ಗ್ರಾಮಕ್ಕೆ, ಒಂದು ವಾರ್ಡಗೆ ಒಂದು ಮೂರ್ತಿ ಸ್ಥಾಪಿಸಲು ಅವಕಾಶ ನೀಡಬೇಕು. 20 ಜನರಿಗಿಂತ ಹೆಚ್ಚು ಜನರು ಸೇರುವಂತಿಲ್ಲ,ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವಂತಿಲ್ಲ
ಗಣೇಶ ವಿಗ್ರಹ ತರುವಾಗ ಮತ್ತು ವಿಸರ್ಜಿಸುವಾಗ ಮೆರವಣಿಗೆ ನಡೆಸುವಂತಿಲ್ಲ.