ಜನತಾಕರ್ಫ್ಯೂಗೆ ಉ.ಕ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ

ಆದ್ಯೋತ ನ್ಯೂಸ್ ಡೆಸ್ಕ್: ಪ್ರಧಾನಿ ನರೇಂದ್ರ ಮೋದಿಯವರ ಕರೆಯನುಸಾರ ದೇಶದಾದ್ಯಂತ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಜನತಾಕರ್ಫ್ಯೂ ಜಾರಿಯಾಗಿದ್ದು ಜನರು ಮನೆಯಲ್ಲಿ ಸ್ವಯಂ ದಿಗ್ಭಂಧನದಲ್ಲಿರುವುದು ಎಲ್ಲೆಡೆ ಕಂಡುಬಂದಿದೆ.


ಉತ್ತರಕನ್ನಡ ಜಿಲ್ಲೆಯಲ್ಲೂ ಜನರು ಜನತಾಕರ್ಫ್ಯೂಗೆ ಅಪಾರ ಬೆಂಬಲ ನೀಡಿದ್ದು, ವರ್ತಕರು ಅಂಗಡಿ, ಹೊಟೆಲ್, ಬಾರ್ ಗಳನ್ನು ಮುಚ್ಚಿದ್ದಾರೆ. ಕೆ.ಎಸ್.ಆರ್.ಟಿ.ಸಿ ಬಸ್ ಗಳು ಸಂಚಾರ ನಿಲ್ಲಿಸಿದ್ದು ಖಾಸಗಿ ವಾಹನಗಳು ರಸ್ತೆಗೆ ಇಳಿದಿಲ್ಲ. ಅಟೋ, ಕಾರುಗಳೂ ಓಡಾಟವನ್ನು ನಿಲ್ಲಿಸಿದ್ದು ಜನ ಜೀವನ ಸ್ಥಬ್ಧವಾಗಿದೆ.


ಜನರ ಸಂಯಮ ಮುಗಿದು ಮಧ್ಯಾಹ್ನ ಜನರು ರಸ್ತೆಗೆ ಬರುವ ಸಾಧ್ಯತೆ ಇದ್ದು ದಯವಿಟ್ಟು ಸರಕಾರ ನಿಗದಿಪಡಿಸಿರುವ ಸಮಯದವರೆಗೆ ಯಾರೂ ರಸ್ತೆಗೆ ಇಳಿಯಬಾರದೆಂದು ಆದ್ಯೋತ ನ್ಯೂಸ್ ಸಾರ್ವಜನಿಕರಲ್ಲಿ ಮನವಿ ಮಾಡುತ್ತದೆ.

About the author

Adyot

2 Comments

Leave a Comment