ಗ್ರಾಮ ಪಂಚಾಯತ್ ಗಳ ಚುನಾವಣೆ ಮುಂದೂಡಿಕೆ

ಆದ್ಯೋತ್ ಸುದ್ದಿ ನಿಧಿ : ಕರ್ನಾಟಕ ರಾಜ್ಯದ ಸುಮಾರು 6025 ಗ್ರಾಮ ಪಂಚಾಯತ್ ಗಳಲ್ಲಿ 5800 ಗ್ರಾಮ ಪಂಚಾಯತ್ ಗಳಿಗೆ ನಡೆಯಲಿರುವ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಿ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ.


ಜೂನ್ 2020 ರಿಂದ ಆಗಸ್ಟ್ 2020 ರವರೆಗೆ ಸುಮಾರು 5800 ಗ್ರಾಮ ಪಂಚಾಯಿತಿಗಳ ಅವಧಿ ಮುಕ್ತಾಯವಾಗಲಿದೆ. ರಾಜ್ಯ ಚುನಾವಣಾ ಆಯೋಗ ಈ ಗ್ರಾಮ ಪಂಚಾಯತ್ ಗಳಿಗೆ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ ಕೊರೊನಾ ರೋಗದ ಕಾರಣದಿಂದಾಗಿ ದೇಶಾದ್ಯಂತ ಲಾಕ್ ಡೌನ್ ಹೇರಿಕೆ ಹಿನ್ನೆಲೆಯಲ್ಲಿ ಹಾಗೂ ರೋಗ ಹರಡುತ್ತಿರುವುದರಿಂದ ಚುನಾವಣೆಯನ್ನು ಈ ಸಂದರ್ಭದಲ್ಲಿ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ಚುನಾವಣೆಯ ಸಿದ್ಧತೆಗಳೂ ಕೂಡ ಸ್ಥಗಿತವಾಗಿವೆ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಮಾನವ ನಿರ್ಮಿತ ಅವಘಡಗಳನ್ನು, ನೈಸರ್ಗಿಕ ವಿಪತ್ತು ಸಂದರ್ಭಗಳನ್ನು ಅಸಾಧಾರಣ ಪರಿಸ್ಥಿತಿ ಅಂತ ಘೋಷಿಸಿ ಚುನಾವಣೆಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ ಚುನಾವಣೆ ನಡೆಸುವ ಬಗ್ಗೆ ನಿರ್ಧರಿಸಲಾಗುವುದು ಅಂತ ಕೂಡ ತಿಳಿಸಿದೆ.

About the author

Adyot

Leave a Comment