ಹಳಿಯಾಳ ಎಪಿಎಂಸಿ ಸದಸ್ಯನ ಅಪಹರಣ

ಆದ್ಯೋತ್ ಸುದ್ದಿನಿಧಿ;
ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಎಪಿಎಂಸಿ ಸದಸ್ಯನನ್ನು ಅಪಹರಿಸಲಾಗಿದೆ ಎಂದು ದೂರು ದಾಖಲಾಗಿದೆ‌.
ಹಳಿಯಾಳ ತಾಲೂಕು ಬೆಳವಟಗಿ ಗ್ರಾಮದ ಕೃಷ್ಣಮೂರ್ತಿ ರಾಮಚಂದ್ರ ಪಾಟೀಲ(45) ಎನ್ನುವವರೆ ಅಪಹಣಕ್ಕೊಳಗಾದವರಾಗಿದ್ದು ಅದೇ ಗ್ರಾಮದ ಬಾಬು ವಾಸುದೇವ ಪಾಗೋಜಿ ಎಂಬುವವನು ಅಪಹರಿಸಿದ್ದಾನೆ ಎಂದು
ಅಪಹರಣಕ್ಕೊಳಗಾದವರ ತಂದೆ ರಾಮಚಂದ್ರ ಪಾಟೀಲ ಪೊಲೀಸ್ ರಿಗೆ ದೂರು ನೀಡಿದ್ದಾರೆ.
ಕೃಷ್ಣಮೂರ್ತಿ ಪಾಟೀಲ ದಿ.17ರಂದು ಶಿರಸಿಗೆ ತನ್ನ ಮಗಳನ್ನು ದ್ವಿತಿಯ ಪಿಯುಸಿ ಪರೀಕ್ಷೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷೆ ಮುಗಿಸಿ ದಿ.18 ರಂದು ಮಗಳನ್ನು ಕರೆದುಕೊಂಡು ಯಲ್ಲಾಪುರಕ್ಕೆ ಬಂದಿದ್ದಾರೆ.ಅಲ್ಲಿ ಬೆಳವಟಗಿ ಗ್ರಾಮದ ಬಾಬು ಪಾಗೋಜಿ ಕಾರು ನಿಲ್ಲಿಸಿಕೊಂಡಿದ್ದು ತಂದೆ-ಮಗಳನ್ನು ಕಾರಿಗೆ ಹತ್ತಿಸಿಕೊಂಡಿದ್ದಾನೆ.ನಂತರ ರಾಮಚಂದ್ರ ಪಾಟೀಲರನ್ನು ಹಳಿಯಾಳ ಬಸ್ ನಿಲ್ದಾಣದ ಹತ್ತಿರ ಇಳಿಸಿ ಮಗಳನ್ನು ಬೆಳವಟಗಿ ಗ್ರಾಮಕ್ಕೆ ಬಿಟ್ಟಿರುತ್ತಾನೆ.ಎಂದು ದೂರಿನಲ್ಲಿ ತಿಳಿಸಲಾಗಿದೆ
ಮೂರು ದಿನವಾದರೂ ಮಗ ಬರದ ಕಾರಣ ದಿ.21 ರವಿವಾರ ರಾಮಚಂದ್ರ ಪಾಟೀಲ,ಬಾಬು ಪಾಗೋಜಿ ವಿರುದ್ದ ಅಪಹರಣದ ಪೊಲೀಸ್ ದೂರು ದಾಖಲಿಸಿದ್ದಾರೆ ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ರಾಮಚಂದ್ರ ಪಾಟೀಲ ಅಪಹರಣದ ಹಿಂದೆ ರಾಜಕೀಯ ಕಾರಣವಿದೆ ಎನ್ನಲಾಗುತ್ತಿದೆ.
ಜೂನ್ 24 ರಂದು ಹಳಿಯಾಳ ಎಪಿಎಂಸಿ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಹಳಿಯಾಳ ಎಪಿಎಂಸಿಯಲ್ಲಿ ಒಟ್ಟೂ 16 ಸದಸ್ಯರಿದ್ದು ಕಾಂಗ್ರೆಸ್ 8 ಬಿಜೆಪಿ 5 ಸದಸ್ಯರಿದ್ದಾರೆ
ಈಗ ಬಿಜೆಪಿ ಸರಕಾರ 3 ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿದ್ದು ಬಿಜೆಪಿ ಬಲ 8 ಕ್ಕೆ ಏರಿದೆ.
ಕಳೆದ 40 ತಿಂಗಳಿನಿಂದ ಎರಡು ಅವಧಿಗೆ ವಿಧಾನಪರಿಷತ್ ಸದಸ್ಯ ಶ್ರೀಕಾಂತ ಘೋಟ್ನೇಕರ ಮಗ ಶ್ರೀನಿವಾಸ ಘೋಟ್ನೇಕರ
ಎಪಿಎಂಸಿಯ ಅಧ್ಯಕ್ಷರಾಗಿದ್ದರು. ಈಗ ಮೂರನೇ ಅವಧಿಗೂ ಅವರು ಸ್ಪರ್ಧಿಸುತ್ತಿದ್ದಾರೆ.ಇವರ ವಿರುದ್ದ ಬಿಜೆಪಿಯಿಂದ ಕೃಷ್ಣಮೂರ್ತಿ ಪಾಟೀಲ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಈಗ ಅವರ ಅಪಹರಣವಾಗಿದೆ ಎಂದು ದೂರು ಬಂದಿರುವುದರಿಂದ ಅಧ್ಯಕ್ಷರ ಚುನಾವಣೆಯಿಂದ ಅವರನ್ನು ಹಿಂದೆಸರಿಸುವ ಉದ್ದೇಶದಿಂದ ಈ ಅಪಹರಣ ಮಾಡಲಾಗಿದೆ ಎಂದು ಅನುಮಾನ ಕಾಡುತ್ತಿದೆ.
ಬುಧವಾರ ಚುನಾವಣೆ ನಡೆಯಲಿದ್ದು ಅಷ್ಟರಲ್ಲಿ ಪೊಲೀಸ್ ರು ಅವರನ್ನು ಕಂಡುಹಿಡಿಯುತ್ತಾರೋ ಅಥವಾ ಅವರಾಗೇ ಬರುತ್ತಾರೋ ಕಾದು ನೋಡಬೇಕು

About the author

Adyot

Leave a Comment