ಭರ್ಜರಿ ಮಳೆಗೆ ಭಟ್ಕಳ ತತ್ತರ, ಮನೆ ಕುಸಿತಕ್ಕೆ ನಾಲ್ವರು ಸಿಕ್ಕಿಹಾಕಿಕೊಂಡಿರೋ ಶಂಕೆ

ಅದ್ಯೋತ್ ಸುದ್ದಿ ನಿಧಿ – ಭರ್ಜರಿ ಮಳೆಯ ಕಾರಣದಿಂದ ಮನೆಯ ಮೇಲೆ ಗುಡ್ಡ ಕುಸಿತದ ಪರಿಣಾಮದಿಂದಾಗಿ ಮನೆ ಕುಸಿದಿದ್ದು ಮನೆಯೊಳಗೆ ನಾಲ್ಕು ಜನ ಸಿಲುಕಿರುವ ಘಟನೆ ಜಿಲ್ಲೆಯ ಭಟ್ಕಳದ ಮುಟ್ಟಳ್ಳಿಯಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಾ ವ್ಯಾಪ್ತಿಯಲ್ಲಿ ನಿರಂತರವಾಗಿ ಭರ್ಜರಿ ಮಳೆ ಬೀಳುತ್ತಿದ್ದು, ಮಳೆಯ ರಭಸಕ್ಕೆ ಮುಟ್ಟಳ್ಳಿಯ ಗೌರಮ್ಮಜ್ಜಿಯ ಮನೆಯ ಪಕ್ಕದಲ್ಲಿರುವ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದು ಮನೆ ಕುಸಿದಿದ್ದು ಮನೆ ಒಳಗೆ ನಾಲ್ಕು ಜನ ಸಿಲುಕಿರುವ ಬಗ್ಗೆ ತಿಳಿದು ಬಂದಿದೆ. ಮನೆಯು ಲಕ್ಷ್ಮಿ ನಾರಾಯಣ್ ನಾಯಕ್ ಎನ್ನುವವರಿಗೆ ಸೇರಿದ್ದು, ಲಕ್ಷ್ಮಿ ನಾರಾಯಣ ನಾಯ್ಕ (60), ಲಕ್ಷ್ಮೀ ನಾರಾಯಣ ನಾಯ್ಕ (45), ಅನಂತ ನಾರಾಯಣ ನಾಯ್ಕ (38), ಪ್ರವೀಣ್ ರಾಮಕೃಷ್ಣ ನಾಯ್ಕ (16) ಮನೆಯ ಒಳಗೆ ಸಿಲುಕಿರುವ ವ್ಯಕ್ತಿಗಳಾಗಿದ್ದಾರೆ. ತಾಲೂಕು ಆಡಳಿತ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಮನೆಯೊಳಗೆ ಸಿಲುಕಿರುವ ನಾಲ್ವರ ಪರಿಸ್ಥಿತಿ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ. ಮನೆ ಸಂಪೂರ್ಣ ಕುಸಿದಿದ್ದು ರಕ್ಷಣಾ ಕಾರ್ಯಾಚರಣೆಗೆ ಮಳೆ ಕೂಡ ಅಡ್ಡಿ ಪಡಿಸುತ್ತಿದೆ.

About the author

Adyot

Leave a Comment