ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರ ಎಮ್ಮೆಪೈಲ್ ಹತ್ತಿರ ಅಪರಚಿತ
ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಬುಧವಾರ ರಾತ್ರಿ 12-15ರ ಸುಮಾರಿಗೆ ಘಟಿಸಿದೆ.
ಹೊನ್ನಾವರ ತಾಲೂಕಿನ ಖರ್ವಾ ಹಸಿಮಕ್ಕಿಯ ಬಾಲಚಂದ್ರ ಗಜಾನನ ಭಟ್(32) ಹಾಗೂ ಯಲ್ಲಾಪುರ ತಾಲೂಕಿನ ಮಲವಳ್ಳಿ ಪತ್ರಮಕ್ಕಿಯ ಜಗದೀಶ ಗೋಪಾಲಕೃಷ್ಣ ಹೆಬ್ಬಾರ(38) ಎಂದು ಮೃತರನ್ನು ಗುರುತಿಸಲಾಗಿದೆ.
ಪೌರೋಹಿತ್ಯ ವೃತ್ತಿಯನ್ನು ಮಾಡುತ್ತಿದ್ದ ಇವರು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಬರುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದು ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಮೃತ ಬಾಲಚಂದ್ರ ಗಜಾನನ ಭಟ್ ಸಹೋದರ ರಾಮಚಂದ್ರ ಗಜಾನನ ಭಟ್ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎ.ಎಸ್.ಐ.ಗಣೇಶ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದು ಸಿಪಿಐ ವಸಂತ ಆಚಾರ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ.
😳😳