ಲೈಸನ್ಸ್ ನವೀಕರಣಗೊಳಿಸದ ಕಾರಣ ಹೊನ್ನಾವರ ಗುಡ್ ಲಕ್ ಹೋಟೆಲ್ ಸೀಜ್

ಆದ್ಯೋತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಟ್ರೇಡ್ ಲೈಸನ್ಸ್ ಪಡೆಯದೇ ಹೋಟೆಲ್ ಹಾಗೂ ಅಂಗಡಿ ಮಳಿಗೆಗಳನ್ನು ನಡೆಸುತ್ತಿದ್ದ ಗುಡ್ ಲಕ್ ಹೊಟೇಲ್ ಕಟ್ಟಡವನ್ನು ಹೊನ್ನಾವರ ಪಟ್ಟಣ ಪಂಚಾಯತ್ ದವರು ಮಂಗಳವಾರ ಸೀಲ್ ಮಾಡಿದ್ದಾರೆ.

ಹೊನ್ನಾವರ ಬಸ್ ನಿಲ್ದಾಣದ ಸಮೀಪವಿರುವ ಗುಡ್ ಲಕ್ ಹೋಟೆಲ್ ಕಟ್ಟಡದ ಮಾಲಕರಾದ ದಿ. ಸೈಯದ್ ಫಕೀರ್ ಸೈಯದ್ ಕರೀಮ್ ಖಾಜಿ 2015 ನೇ ಸಾಲಿನಲ್ಲಿ ಮೃತಪಟ್ಟಿದ್ದು, ಅವರ ಆಸ್ತಿಯು ಅವರ 11 ಜನ ಮಕ್ಕಳಿಗೆ ವರ್ಗಾವಣೆ ಆಗಿತ್ತು.


ಈ ಕಟ್ಟಡದಲ್ಲಿ 9 ಅಂಗಡಿ ಮಳಿಗೆಗಳು ಹಾಗೂ ಒಂದು ಹೊಟೇಲ್ ಮತ್ತು ಲಾಡ್ಜಿಂಗ್ ಇದೆ ಆದರೆ ಕೌಟುಂಬಿಕ ಕಲಹದಿಂದ ಸದರಿ ಅಂಗಡಿ ಮಳಿಗೆಗಳು ಹಾಗೂ ಹೊಟೇಲ್ ಮತ್ತು ಲಾಡ್ಜಿಂಗ್ ಗೆ ಸಂಬಂಧಿಸಿದಂತೆ ಸೈಯದ್ ಫಕೀರ್ ಸೈಯದ್ ಕರೀಮ್ ಮಕ್ಕಳು ಹೊನ್ನಾವರ ಪಟ್ಟಣ ಪಂಚಾಯತ್ ದಲ್ಲಿ ಖಾತಾ ಬದಲಾವಣೆ ಮಾಡಿಕೊಳ್ಳದೇ ಹಾಗೂ ಟ್ರೇಡ್ ಲೈಸನ್ಸ್ ಸಹ ನವೀಕರಣ ಮಾಡಿಕೊಳ್ಳದೇ ಸದರಿ ಅಂಗಡಿ ಮಳಿಗೆಗಳನ್ನು ನಡೆಸುತ್ತಿರುವುದರಿಂದ ಹೊನ್ನಾವರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ನೇತೃತ್ವದಲ್ಲಿ ತಹಶೀಲ್ದಾರ್ ಉಪಸ್ಥಿತಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ನೊಂದಿಗೆ ಸೀಲ್ ಮಾಡಲಾಯಿತು.
*********

********

*******

About the author

Adyot

Leave a Comment