ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ನಡೆದ ಕೇಂದ್ರ ಸರಕಾರದ
ಕೃಷಿಕಾನೂನು ವಿರೋಧಿಸಿ ನಡೆದ ರೈತ ಹೋರಾಟ ಹೊನ್ನಾವರ ತಾಲೂಕಿಗೆ ಮಾತ್ರ ಸೀಮಿತವಾಗಿತ್ತು.
ಜಿಲ್ಲೆಯಲ್ಲಿ ಮಂಗಳೂರು-ಪಣಜಿ ಹೆದ್ದಾರಿ ಹಾಗೂ ಬೆಂಗಳೂರು- ಹೊನ್ನಾವರ ಹಾಗೂ ಅಂಕೋಲಾ- ಹುಬ್ಬಳ್ಳಿ ಹೆದ್ದಾರಿಗಳಿದ್ದು ಮಂಗಳೂರು-ಪಣಜಿ ಹೆದ್ದಾರಿಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಕ್ರಾಸ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಐವತ್ತಕ್ಕೂ ಹೆಚ್ಚು ಜನರು ರಸ್ತೆ ತಡೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ದ ಘೋಷಣೆ ಕೂಗಿದರು.
ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳನ್ನು ವಿರೋದಿಸಿ, ಹಾಗೂ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ಇದುವರೆಗೂ ಸ್ಪಂದಿಸದೇ ಇರುವುದನ್ನು ಖಂಡಿಸಿ ಹಾಗೂ ದೆಹಲಿಯಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆ ಮಾಡುವುದನ್ನು ಬೆಂಬಲಿಸಿ ರಸ್ತೆ ತಡೆ ನಡೆಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾ ಅಧ್ಯಕ್ಷ
ತಿಮ್ಮಪ್ಪ ಗೌಡ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ, ಸಿ ಐ ಟಿ ಯು ಜಿಲ್ಲಾಧ್ಯಕ್ಷ ತಿಲಕ ಗೌಡ, ಕ ರ ವೇ (ನಾರಾಯಣ ಗೌಡ ಬಣ) ಯ ತಾಲೂಕಾ ಅಧ್ಯಕ್ಷ ಮಂಜುನಾಥ ಗೌಡ ಮುಂತಾದವರು ಭಾಗವಹಿಸಿದ್ದರು.
####
ಬನವಾಸಿಯಲ್ಲಿ ಜಿಂಕೆಯನ್ನು ಕೊಂದು ಮಾಂಸ ಮಾರಾಟ ಯತ್ನ ಆರೋಪಿತನ ಬಂಧನ
ಬನವಾಸಿ ವಲಯ ಅರಣ್ಯಾಧಿಕಾರಿ ಉಷಾ ಆರ್ ಕಬ್ಬೇರ್ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ಶನಿವಾರ ಬನವಾಸಿಯಲ್ಲಿ
ಜಿಂಕೆಯನ್ನು ಕೊಂದು ಅದರ ಮಾಂಸವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬನವಾಸಿ ಕಿರವತ್ತಿಯ ಮಂಜುನಾಥ ಶಿವಪ್ಪ ಅಂಬಿಗ ಎನ್ನುವವನನ್ನು ಬಂಧಿಸಿದ್ದಾರೆ.ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಒಟ್ಟೂ ಮೂವರು ಆರೋಪಿತರು ಜಿಂಕೆ ಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ ಎಂನ್ನುವ ಖಚಿತ ಮಾಹಿತಿಯನುಸಾರ ದಾಳಿ ನಡೆಸಿದಾಗ ಒರ್ವ ಮಾತ್ರ ಸಿಕ್ಕಿಬಿದ್ದಿದ್ದು ಇನ್ನಿಬ್ಬರು ಆರೋಪಿತರಾದ ಕಿರುವತ್ತಿಯ ಬಂಗಾರ್ಯ ಸಂಕಪ್ಪ ಚನ್ನಯ್ಯ.
ಹಠಗೂ ಸೊರಬ ತುಮರಿಕೊಪ್ಪದ ರಮೇಶ ಜ್ಯೋತ್ಯಪ್ಪ ಸಮನಳ್ಳಿ ಪರಾರಿಯಾಗಿದ್ದಾರೆ
ಆರೋಪಿತನಿಂದ ಹತ್ತು ಕೆ.ಜಿ.ಜಿಂಕೆಯ ಮಾಂಸ ಹಾಗೂ ಜಿಂಕೆಯ ಹತ್ಯೆಗೆ ಬಳಸಿದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ 28/2021 U/S 9,39,51 ವನ್ಯ ಪ್ರಾಣಿ ಸಂರಕ್ಷಣಾ ಕಾಯಿದೆ 1972 ಪ್ರಕಾರ ಪ್ರಕರಣ ದಾಖಲಾಗಿದೆ.